'ಅನುಶ್ರೀ ಅರೆಸ್ಟ್​ ಆಗದಂತೆ ತಡೆದಿರೋದು ಶುಗರ್​ ಡ್ಯಾಡಿ!'

anushree
Published on

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ನಂಟಿನ ಪ್ರಕರಣ ಸಂಬಂಧ ಇಷ್ಟು ದಿನ ನಟಿ ಸಂಜನಾ ಗಲ್ರಾನಿ ಅಲಿಯಾಸ್​ ಮಹಿರಾ ವಿರುದ್ಧ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ದಿನಕ್ಕೊಂದು ಗಂಭೀರ ಆರೋಪ ಮಾಡುತ್ತಿದ್ದರು. ಇದೀಗ ಖ್ಯಾತ ನಿರೂಪಕಿ ಅನುಶ್ರೀ ವಿರುದ್ಧ ಹೊಸ ಬಾಂಬ್​ ಸಿಡಿಸಿದ್ದಾರೆ.

ಡ್ರಗ್ಸ್​ ಕೇಸ್​ ಪ್ರಕರಣದಲ್ಲಿ ಅನುಶ್ರೀ ಇತ್ತೀಚಿಗಷ್ಟೇ ಸಿಸಿಬಿ ವಿಚಾರಣೆ ಎದುರಿಸಿದ್ದರು. 'ಸಿಸಿಬಿ ವಿಚಾರಣೆ ನಡೆಸಿದ್ದ ಮಾತ್ರಕ್ಕೆ ನಾನು ಅಪರಾಧಿ ಅಥವಾ ಆರೋಪಿಯಂತಲ್ಲ. ಈ ವಿಚಾರವಾಗಿ ನನ್ನನ್ನು ಬಿಂಬಿಸಿದ ರೀತಿ ಮನಸ್ಸಿಗೆ ತುಂಬಾ ನೋವು ಉಂಟು ಮಾಡಿದೆ…’ ಎಂದು ಕಣ್ಣೀರು ಹಾಕುತ್ತ ಅನುಶ್ರೀ ಮಾತನಾಡಿದ್ದ ವಿಡಿಯೋ ತುಣುಕನ್ನು ಶುಕ್ರವಾರ ಬೆಳಗ್ಗೆ ತನ್ನ ಫೇಸ್​ಬುಕ್​ ಪೇಜ್​ನಲ್ಲಿ ಅಪ್ಲೋಡ್​ ಮಾಡಿದ್ದರು. ಇದರ ಬೆನ್ನಲ್ಲೇ ಸರಣಿ ಟ್ವೀಟ್​ ಮಾಡಿರುವ ಸಂಬರಗಿ, ''ಇಲ್ಲಿಯವರೆಗೆ ಅನುಶ್ರೀಯನ್ನು ಅರೆಸ್ಟ್ ಆಗದಂತೆ ಶುಗರ್​ ಡ್ಯಾಡಿ ತಡೆದಿದ್ದಾರೆ. ಇನ್ಮುಂದೆ ಅದೆಲ್ಲ ನಡೆಯೋದಿಲ್ಲ. ಆಕೆಯ ತಪ್ಪಿಗೆ ಕೆಲವೇ ದಿನಗಳಲ್ಲಿ ಶಿಕ್ಷೆಯಾಗುವುದು ನಿಶ್ಚಿತ. ಅನುಶ್ರೀಯ ಮತ್ತಷ್ಟು ರಹಸ್ಯಗಳು ಹೊರಬರಲಿವೆ'' ಎಂದಿದ್ದಾರೆ. ಇದೀಗ ಈ ಶುಗರ್​ ಡ್ಯಾಡಿ ಎಂಬ ಪ್ರಶ್ನೆ ಉದ್ಭವವಾಗಿದೆ.

''ಶುಗರ್​ ಡ್ಯಾಡಿ ಅಂದ್ರೆ ಹಣ, ದುಬಾರಿ ವಸ್ತು ಅಥವಾ ಇತರ ಉಡುಗೊರೆ ಕೊಟ್ಟು ಅದಕ್ಕೆ ಪ್ರತಿಯಾಗಿ ಯುವತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಹಿರಿಯ ವಯಸ್ಸಿನ ವ್ಯಕ್ತಿ'' ಎಂಬ ಪದದ ಅರ್ಥವನ್ನು ಸಂಬರಗಿಯೇ ಟ್ವೀಟ್ ಮಾಡಿದ್ದಾರೆ.

''ಅನುಶ್ರೀ 'ರಿಂಗ್​ ಮಾಸ್ಟರ್​' ಸಿನಿಮಾದಲ್ಲಿ ಅಭಿನಯಿಸಿದ್ದರು. ಈ ಬಗ್ಗೆಯೂ ಪ್ರಸ್ತಾಪಿಸಿರುವ ಪ್ರಶಾಂತ್ ಸಂಬರಗಿ, 'ಈ ಸಿನಿಮಾದಲ್ಲಿ ಹೊಸ ವರ್ಷಾಚರಣೆ ಪ್ರಯುಕ್ತ ಅನುಶ್ರೀ ಮತ್ತು ಅವರ ಸ್ನೇಹಿತರು ಡ್ರಗ್ಸ್​ ಪೆಡ್ಲರ್​ಗೆ ಕರೆ ಮಾಡುತ್ತಾರೆ. ಆಗ ಆತನ ನಿಜ ಬಣ್ಣ ಬಯಲಾಗುತ್ತದೆ. ಸಿನಿಮಾದಂತೆ ಅನುಶ್ರೀ ನಿಜ ಜೀವನವೂ ಇದೆ'' ಎಂದು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net