ರಾಜ್ಯದಲ್ಲಿ ಬರಪೀಡಿತ ತಾಲೂಕುಗಳು 216ಕ್ಕೆ ಏರಿಕೆ

Krishna Bairegowda
Published on

ಬೆಂಗಳೂರು: ಮುಂಗಾರು ಮಳೆ ವೈಲ್ಯ, ಶುಷ್ಕ ವಾತಾವರಣ, ತೇವಾಂಶದ ಕೊರತೆ ಹಿನ್ನೆಲೆಯಲ್ಲಿ ಹೆಚ್ಚುವರಿ 22 ತಾಲೂಕುಗಳನ್ನು ಬರಪೀಡಿತವೆಂದು ಸರ್ಕಾರ ಘೋಷಿಸಿದೆ.

ಬೆಳೆ ಹಾನಿ ಸಮೀಕ್ಷೆ ಆಧರಿಸಿ ಆಯಾ ಜಿಲ್ಲಾಧಿಕಾರಿಗಳು ಸಲ್ಲಿಸಿದ ವರದಿ, ಕೇಂದ್ರ ಸರ್ಕಾರ ಬರ ನಿರ್ವಹಣೆ ಕೈಪಿಡಿಯಂತೆ ಈ ಆದೇಶ ಹೊರಡಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ.

ಹೆಚ್ಚುವರಿ 22 ತಾಲೂಕುಗಳಲ್ಲಿ 11 ತೀವ್ರ ಬರಪೀಡಿತವೆಂದು ಪರಿಗಣಿಸಿದ್ದು, ಇದರಿಂದಾಗಿ ರಾಜ್ಯದಲ್ಲಿ ತೀವ್ರ ಬರಪೀಡಿತ ತಾಲೂಕುಗಳು 186ಕ್ಕೆ ಏರಿಕೆಯಾಗಿವೆ. 31 ಜಿಲ್ಲೆಗಳ ಒಟ್ಟು 236 ತಾಲೂಕುಗಳಲ್ಲಿ 216 ತಾಲೂಕುಗಳು ಬರಪೀಡಿತಪಟ್ಟಿಗೆ ಸೇರಿದಂತಾಗಿದೆ.

ಕೇಂದ್ರಕ್ಕೆ ಹೆಚ್ಚುವರಿ 350 ಕೋಟಿ ರೂ.ಗೆ ಮೊರೆ

ಕೇಂದ್ರ ಸರ್ಕಾರಕ್ಕೆ ಸೋಮವಾರ ಮತ್ತೊಂದು ಮನವಿ ಸಲ್ಲಿಸಿ, ಹೆಚ್ಚುವರಿಯಾಗಿ 300 ರಿಂದ 350 ಕೋಟಿ ರೂ. ನೆರವಿಗೆ ಮೊರೆಯಿಡಲು ಸರ್ಕಾರ ತೀರ್ಮಾನಿಸಿದೆ.

ಮೊದಲ ಹಂತದಲ್ಲಿ 195 ತಾಲೂಕುಗಳು ಬರಪೀಡಿತವೆಂದು ೋಷಿಸಲಾಗಿತ್ತು. ಈ ಪೈಕಿ 161 ತೀವ್ರ ಮತ್ತು 34 ತಾಲೂಕುಗಳನ್ನು ಸಾಧಾರಣ ಬರಪೀಡಿತವೆಂದು ವಿಂಗಡಿಸಲಾಗಿದೆ. ಅಲ್ಲದೆ, ರಾಷ್ಟ್ರೀಯ ನೈಸರ್ಗಿಕ ವಿಪತ್ತು ನಿರ್ವಹಣೆ ನಿಧಿ ನಿಯಮದಂತೆ 4,860 ಕೋಟಿ ರೂ. ನೆರವು ಕೋರಿ ಮನವಿ ಸಲ್ಲಿಸಲಾಗಿತ್ತು.

ರಾಜ್ಯ ಸರ್ಕಾರ ಆನ್‌ಲೈನ್‌ನಲ್ಲಿ ಮನವಿ ಸಲ್ಲಿಸಿದ ಒಂದು ವಾರದೊಳಗೆ ಕೇಂದ್ರ ಅಧಿಕಾರಿಗಳ ತಂಡ ಆಗಮಿಸಿ ಅಧ್ಯಯನ ನಡೆಸಿದೆ. ಅಲ್ಲದೆ, ಎರಡನೇ ಸುತ್ತಿನಲ್ಲಿ ಮತ್ತಷ್ಟು ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಿ ಮತ್ತೊಂದು ಮನವಿಪತ್ರ ಸಲ್ಲಿಸುವ ಹಕ್ಕು ರಾಜ್ಯಕ್ಕಿದೆ ಎಂದು ತಿಳಿಸಿತ್ತು.

ಅಧಿಕಾರಿಗಳಿಗೆ ಸೂಚನೆ

ಮತ್ತೊಂದು ಸುತ್ತಿನ ಬೆಳೆ ಹಾನಿ ಸಮೀಕ್ಷೆಯ ಪ್ರಕಾರ ೋಷಿತ 22 ಬರಪೀಡಿತ ತಾಲೂಕುಗಳ ಪೈಕಿ 11 ತೀವ್ರ ಬರಪೀಡಿತವೆಂದು ಪರಿಗಣಿಸಲಾಗಿದೆ. ಮತ್ತೊಂದು ಮನವಿಪತ್ರ ಸಿದ್ಧಪಡಿಸಬೇಕೆಂದು ಇಲಾಖೆ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೃಷ್ಣಬೈರೇಗೌಡ ಹೇಳಿದರು.

ಕೇಂದ್ರ ಗೃಹ ಹಾಗೂ ಕೃಷಿ ಸಚಿವರಿಗೆ ಭೇಟಿಯಾಗಿ ಮನವಿ ಸಲ್ಲಿಸಲು ಕಾಲಾವಕಾಶ ಕೇಳಲಾಗಿತ್ತು. ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದರೂ ಈವರೆಗೆ ಕಾಲಾವಕಾಶ ನೀಡಿಲ್ಲ. ಸೋಮವಾರ ಮತ್ತೊಂದು ಸಲ್ಲಿಸಲೆಂದು ಭೇಟಿಗೆ ಕಾಲಾವಕಾಶ ನೀಡುವಂತೆ ಕೇಂದ್ರ ಸಚಿವರಿಬ್ಬರಿಗೆ ಮತ್ತೊಮ್ಮೆ ಕೋರಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net