ಸಾವರ್ಕರ್, ಹೆಡ್ಗೆವಾರ್​ ಪಠ್ಯ ವಿವಾದ: ಅಧ್ಯಾಯ ತೆಗೆದು ಹಾಕುತ್ತಿರುವುದು ದುರದೃಷ್ಟಕರ ಸಂಗತಿ ಎಂದ ಕೇಂದ್ರ ಸಚಿವ

nitin gadkari
Published on

ನಾಗ್ಪುರ: ವಿ.ಡಿ.ಸಾವರ್ಕರ್​ರು ಸಮಾಜ ಸುಧಾರಕ ಹಾಗೂ ದೇಶಭಕ್ತ. ಇವರ ಹಾಗೂ ಆರ್‌ಎಸ್‌ಎಸ್ ಸಂಸ್ಥಾಪಕ ಕೆ.ಬಿ.ಹೆಡ್ಗೆವಾರ್​ರ ಅಧ್ಯಾಯಗಳನ್ನು ಶಾಲಾ ಪಠ್ಯಕ್ರಮದಿಂದ ಕೈಬಿಟ್ಟಿರುವುದು ದುರದೃಷ್ಟಕರ ಸಂಗತಿ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ವೀರ್ ಸಾವರ್ಕರ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಯಾರನ್ನೂ ಹೆಸರಿಸದೆ ಹೆಡ್ಗೆವಾರ್ ಮತ್ತು ಸಾವರ್ಕರ್​ರ ಅಧ್ಯಾಯಗಳನ್ನು ಶಾಲಾ ಪಠ್ಯಕ್ರಮದಿಂದ ತೆಗೆದು ಹಾಕುತ್ತಿರುವುದು ಅತ್ಯಂತ ದುರದೃಷ್ಟಕರ. ಇದಕ್ಕಿಂತ ನೋವಿನ ಸಂಗತಿ ಇನ್ನೊಂದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ನಟ ವಿಜಯ್​ ರಾಜಕೀಯ ಪ್ರವೇಶ ವಿಚಾರ: ತಮಿಳುನಾಡು ಸಿಎಂ ಪುತ್ರ ಉದಯನಿಧಿ ಪ್ರತಿಕ್ರಿಯೆ ವೈರಲ್​

ದೇಶಕ್ಕಾಗಿ ಎಲ್ಲವನ್ನೂ ನೀಡಿದ ವ್ಯಕ್ತಿ ಸಾವರ್ಕರ್​ ಹಾಗೂ ಅವರ ಕುಟುಂಬವು ಅವಮಾನಗಳನ್ನು ಎದುರಿಸಬೇಕಾಗಿದೆ.ಸಾವರ್ಕರ್​ರು ಸಮಾಜ ಸುಧಾರಕರಾಗಿದ್ದು, ಅವರು ನಮಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.

ಸಾವರ್ಕರ್ ಮತ್ತು ಸ್ವಾಮಿ ವಿವೇಕಾನಂದರು ಪ್ರಚಾರ ಮಾಡಿದ ಭಾರತೀಯ ಮತ್ತು ಹಿಂದೂ ಸಂಸ್ಕೃತಿ ಒಂದೇ ಆಗಿದ್ದು, ಯುವ ಪೀಳಿಗೆಗೆ ಅವರ ಸಿದ್ಧಾಂತ ಮತ್ತು ದೇಶಕ್ಕಾಗಿ ಸಾವರ್ಕರ್ ಮಾಡಿದ ತ್ಯಾಗದ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಇತ್ತೀಚೆಗೆ ಶಾಲಾ ಪಠ್ಯಪುಸ್ತಕಗಳಿಂದ ಸಾವರ್ಕರ್ ಮತ್ತು ಹೆಡ್ಗೆವಾರ್ ಅವರ ಅಧ್ಯಾಯಗಳನ್ನು ತೆಗೆದುಹಾಕುವ ಮೂಲಕ ಈ ವಿಷಯ ಕುರಿತ ಚರ್ಚೆಗೆ ನಾಂದಿ ಹಾಡಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net