ನೃತ್ಯ ಮಾಡುತ್ತಲೇ ಹೃದಯಾಘಾತದಿಂದ ಪ್ರಾಣಬಿಟ್ಟ ವರನ ಸಹೋದರ

man end his while dance
Published on

ಶಹಜಾನ್​ಪುರ: ಇತ್ತೀಚಿಗೆ ಹೃದಯಾಘಾತದ ಪ್ರಕರಣದಲ್ಲಿ ತ್ವರಿತವಾಗಿ ಹೆಚ್ಚಳ ಕಂಡು ಬಂದಿದ್ದು, ಯುವಕರು ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ವರನ ಸಹೋದರನೊಬ್ಬ ನೃತ್ಯ ಮಾಡುವಾಗ ಹೃದಯಾಘಾತದಿಂದ ಮೃತಪಟ್ಟ ಘಟನೆ ಉತ್ತರಪ್ರದೇಶದ ಶಹಜಹಾನ್‌ಪುರದಲ್ಲಿ ನಡೆದಿದೆ.

ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಮೃತನನ್ನು ರಾಂಪುರದ ನಿವಾಸಿ ಸಂಜು ಎಂದು ಗುರುತಿಸಲಾಗಿದ್ದು, ಈತ ತನ್ನ ಸಹೋದರನ ಮದುವೆಗಾಗಿ ಶಹಜಾನ್​ಪುರ ಊರಿಗೆ ಬಂದಿದ್ದ. ಈ ವೇಳೆ ವಧು-ವರರ ಮೆರವಣಿಗೆ ದಾರಿಯುದ್ಧಕ್ಕೂ ಸಾಗುತ್ತಿರಬೇಕಾದರೆ ಡಿಜೆಯನ್ನು ಹಚ್ಚಲಾಗಿತ್ತು. ಶಹಜಹಾನ್‌ಪುರದ ಗೋಕುಲಪುರ ಪೊಲೀಸ್ ಠಾಣೆಯ ಬಳಿ ಸಂಜು ಡಿಜೆ ಹಾಡಿಗೆ ಕುಣಿಯುತ್ತಿರಬೇಕಾದರೆ ಇದ್ದಕ್ಕಿದ್ದ ಹಾಗೆ ನೆಲದ ಮೇಲೆ ಮಲಗಿದ್ದಾನೆ.

ಇದನ್ನೂ ಓದಿ: ಮಹಾರಾಷ್ಟ್ರ ವಿದ್ಯಾರ್ಥಿಯ ಕನ್ನಡ ಟಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​!

ಆತ ಮಲಗಿದ್ದನ್ನು ನೋಡಿ ಕೆಲವು ಜನರು ನಟಿಸುತ್ತಿದ್ದಾನೆ ಎಂದು ಭಾವಿಸಿದ್ದರು. ಆದರೆ, ಬಹಳ ಹೊತ್ತಾದರೂ ಆತ ಹಾಗೆಯೇ ಇದ್ದ. ಕೆಲವರು ಅವನನ್ನು ಎಬ್ಬಿಸಲು ಹೋದಾಗ, ಯಾವುದೇ ಪ್ರತಿಕ್ರಿಯೆಯು ಬಂದಿರಲಿಲ್ಲ. ಕೂಡಲೇ ಯುವಕನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದಾಗ ಅಲ್ಲಿನ ವೈದ್ಯರು ಯುವಕ ಮೃತಪಟ್ಟಿರುವುದಾಗಿ ಘೋಷಿಸಿದರು.

ವರನ ಸಹೋದರನ ಸಾವಿನ ಸುದ್ದಿ ಕೇಳಿ ಮದುವೆಯ ಸಂಭ್ರಮದಲ್ಲಿದ್ದ ಎಲ್ಲರ ಮುಖದ ಮೇಲೆ ದುಃಖದ ಛಾಯೆ ಆವರಿಸಿತ್ತು. ಯುವಕನ ಮೃತ ದೇಹವನ್ನು ತಡರಾತ್ರಿ ಯುವಕನ ಹುಟ್ಟೂರಾದ ರಾಂಪುರಕ್ಕೆ ತಂದು ಮುಂದಿನ ಕಾರ್ಯಗಳನ್ನು ನೆರವೇರಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net