ಮರುಜನ್ಮುವೊಂದಿದ್ದರೆ ನೀನೇ ಆಗೂ ನನ್ನಪ್ಪಾ...

Shruti Salimath
ತಂದೆಯೊಂದಿಗೆ ಶ್ರುತಿ ಸಾಲಿಮಠ
Published on
ಇಂದು ಅಪ್ಪಂದಿರ ದಿನದ ವಿಶೇಷ. ಈ ಹಿನ್ನೆಲೆಯಲ್ಲಿ ತಂದೆ ಜತೆಗಿನ ಒಡನಾಟ, ಅನುಭವ, ಸ್ಮರಣೀಯ ಘಟನೆಗಳ ಕುರಿತ ಬರಹಗಳ ಆಹ್ವಾನಕ್ಕೆ ಓದುಗರಿಂದ ಪ್ರವಾಹೋಪಾದಿಯಲ್ಲಿ ವಿಜಯವಾಣಿಗೆ ಪ್ರತಿಕ್ರಿಯೆಗಳು ಹರಿದುಬಂದಿವೆ. ಅಪ್ಪನ ಪ್ರೀತಿ, ಮಮತೆ, ವಾತ್ಸಲ್ಯದ ಮಹಾಪೂರದಲ್ಲಿ ತೇಲಾಡಿರುವುದನ್ನು ಮಕ್ಕಳು ಸ್ಮರಿಸಿದ್ದಾರೆ. ಅಪ್ಪನ ದಿನಕ್ಕೆ ಶ್ರುತಿ ಸಾಲಿಮಠ ಅವರು ಬರೆದಿರುವ ಕವನಗಳ ಸಾಲು ಈ ಕೆಳಕಂಡಂತಿವೆ.

ನನ್ನ ಬಾಳಿನ ಆಕಾಶದೆತ್ತರದ ವ್ಯಕ್ತಿ

ಬಣ್ಣದ ಕನಸಿಗೆ ರೆಕ್ಕೆ ಕಟ್ಟಲು

ಕಲ್ಲು ಮುಳ್ಳಿನ ಹಾದಿ ಬರಿಗಾಲಲ್ಲಿ ತುಳಿದು

ಮಗಳ ಕನಸಿಗೆ ಹೆಜ್ಜೆಯಾದ ಸಾಧಕ ನನ್ನಪ್ಪಾ

ವರುಷಗಟ್ಟಲೆ ಬೆವರುಸುರಿಸಿ ದುಡಿದದ್ದು

ಮಗಳ ಮದುವೆಯಲ್ಲಿ ಒಂದೇ ದಿನ ಖಾಲಿಯಾದರೂ

ನಗುಮುಖ ಮಾಸದ ಹಸನ್ಮುಖಿ ನನ್ನಪ್ಪಾ

ಕೊರತೆಯಾಗದಂತೆ ಬೆಳೆಸಿ ಬೇರೆಯವರಿಗೆ ಕೊಡುವಾಗ

ಮನದಲ್ಲೇ ಬಿಕ್ಕಿ ಅತ್ತ ಸ್ವಾತಿ ಮುತ್ತು ನಿನಪ್ಪಾ

ಮರುಜನ್ಮುವೊಂದಿದ್ದರೆ ನೀನೇ ಆಗೂ ನನ್ನಪ್ಪಾ

| ಶ್ರುತಿ ಸಾಲಿಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net