ತಪ್ಪನ್ನು ಪ್ರತಿಭಟಿಸಲು ಹೇಳಿಕೊಟ್ಟ ನನ್ನಪ್ಪ ನಿಜವಾದ ಹೀರೋ ಅಲ್ಲವೇ?

Megha Lokesh Babu
ತಂದೆಯೊಂದಿಗೆ ಮೇಘಾ ಲೋಕೇಶ್ ಬಾಬು
Published on
ಇಂದು ಅಪ್ಪಂದಿರ ದಿನದ ವಿಶೇಷ. ಈ ಹಿನ್ನೆಲೆಯಲ್ಲಿ ತಂದೆ ಜತೆಗಿನ ಒಡನಾಟ, ಅನುಭವ, ಸ್ಮರಣೀಯ ಘಟನೆಗಳ ಕುರಿತ ಬರಹಗಳ ಆಹ್ವಾನಕ್ಕೆ ಓದುಗರಿಂದ ಪ್ರವಾಹೋಪಾದಿಯಲ್ಲಿ ವಿಜಯವಾಣಿಗೆ ಪ್ರತಿಕ್ರಿಯೆಗಳು ಹರಿದುಬಂದಿವೆ. ಅಪ್ಪನ ಪ್ರೀತಿ, ಮಮತೆ, ವಾತ್ಸಲ್ಯದ ಮಹಾಪೂರದಲ್ಲಿ ತೇಲಾಡಿರುವುದನ್ನು ಮಕ್ಕಳು ಸ್ಮರಿಸಿದ್ದಾರೆ. ನೂರಾರು ಬರಹಗಳ ಪೈಕಿ ಕೆಲವನ್ನು ಇಲ್ಲಿ ಆಯ್ದುಕೊಡಲಾಗಿದೆ.

ನಾನು 3ನೆಯ ತರಗತಿಯಲ್ಲಿ ಓದುತ್ತಿದ್ದೆ. ನಮ್ಮೂರಿಂದ 4 ಕಿ.ಮೀ. ದೂರದ ಸ್ಕೂಲ್ಗೆ ನನ್ನ ಸೇರಿಸಿದ್ದರು ಅಪ್ಪಾ. ಸ್ಕೂಲ್ ಬಸ್ ಡ್ರೖೆವರ್ ಅಂಕಲ್ ಅಂದರೆ ಎಲ್ಲ ಮಕ್ಕಳಿಗೂ ಪ್ರೀತಿ. ಅದೊಂದು ದಿನ ಡ್ರೖೆವರ್ ಅಂಕಲ್​ನನ್ನು ಕೆಲಸದಿಂದ ತೆಗೆದುಬಿಟ್ಟರು. ನಾನು ಮನೆಗೆ ಹೋಗಿ, ‘ನಮಗೆ ಬೇರೆ ಡ್ರೖೆವರ್ ಅಂಕಲ್ ಬರ್ತಾರೆ ಅಪ್ಪಾ; ಹಳೇ ಅಂಕಲ್ ಬರ್ತಾ ಇಲ್ಲ’ ಅಂದೆ. ಯಾಕೆ ಅಂತ ಕೇಳಿದಾಗ ನಾನು ಗೊತ್ತಿಲ್ಲ ಅಂದೆ. ‘ಅಪ್ಪಾ ಡ್ರೖೆವರ್ ಅಂಕಲ್ ಮತ್ತೆ ಬರ್ಬೆಕು ಅಂದ್ರೆ ಏನು ಮಾಡ್ಬೇಕು’ ಅಂತ ಕೇಳಿದಕ್ಕೆ ಪ್ರತಿಭಟನೆ ಮಾಡ್ಬೇಕು ಅಂದ್ರು. ಅಪ್ಪಾ ಹೇಳಿಕೊಟ್ಟ ಹಾಗೆ ಸ್ಕೂಲ್ ಮುಂದೆ ಒಬ್ಬಳೇ ಕೂತು ಪ್ರತಿಭಟನೆ ಮಾಡಿದೆ. ಟೀಚರ್ ಬೆತ್ತ ತಂದು ಬಾಸುಂಡೆ ಬರುವ ಹಾಗೆ ಹೊಡೆದರು. ಆಮೇಲೆ ಸ್ಕೂಲ್ ಮ್ಯಾನೇಜ್​ವೆುಂಟ್​ನವರು ಡ್ರೖೆವರ್ ಅಂಕಲ್​ನನ್ನು ಮತ್ತೆ ಕೆಲಸಕ್ಕೆ ತೆಗೆದುಕೊಂಡರು. ಆ ಚಿಕ್ಕ ವಯಸ್ಸಿನಲ್ಲಿಯೇ ತಪ್ಪನ್ನು ಪ್ರತಿಭಟಿಸಲು ಹೇಳಿಕೊಟ್ಟ ನನ್ನಪ್ಪ ನಿಜವಾದ ಹೀರೋ ಅಲ್ಲವೇ?

| ಮೇಘಾ ಲೋಕೇಶ್ ಬಾಬು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net