

ಶಿವಮೊಗ್ಗ: ನಿರ್ದೇಶಕ ಗಣೇಶ್ ಮಂದಾರ್ತಿ ವಿನ್ಯಾಸಗೊಳಿಸಿ ಸಂಗೀತ ನೀಡಿರುವ ಜನಪದ ಹಾಗೂ ಕುಮಾರವ್ಯಾಸ ಭಾರತದ ಸಂಗಮವಾದ ದ್ರೋಪತಿ ಹೇಳ್ತವ್ಳೆ ನಾಟಕ ಪ್ರದರ್ಶನ ಆ.25ರಿಂದ ಸಾಗರದ ಹೆಗ್ಗೋಡು, ತೀರ್ಥಹಳ್ಳಿ ಮತ್ತು ಶಿವಮೊಗ್ಗದಲ್ಲಿ ಹಮ್ಮಕೊಳ್ಳಲಾಗಿದೆ ಎಂದು ಬೆಂಗಳೂರಿನ ರಂಗಸ್ಥೆ ಟ್ರಸ್ಟ್‌ನ ಅಧ್ಯಕ್ಷ ಧನೂಷ್ ತಿಳಿಸಿದರು.
ಆ.25ರಂದು ಹೆಗ್ಗೋಡು, 26ರಂದು ತೀರ್ಥಹಳ್ಳಿ ಮತ್ತು 27ರಂದು ಶಿವಮೊಗ್ಗ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈಗಾಗಲೇ ರಾಜ್ಯಾದ್ಯಂತ 13 ಪ್ರದರ್ಶನಗಳನ್ನು ನಾಟಕ ಕಂಡಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮೂರು ದಿನ ಪ್ರದರ್ಶನಗೊಳ್ಳಲಿದೆ. ಶಿವಮೊಗ್ಗ ಸೀನಪ್ಪ ಶೆಟ್ಟಿ ವತ್ತದ ಶ್ರೀನಿಧಿ ಟೆಕ್ಸ್‌ಟೈಲ್ಸ್, ಉಷಾ ನರ್ಸಿಂಗ್ ಹೋಮ್ ಬಳಿಯ ನಿಸರ್ಗ ಹೋಟೆಲ್, ಬಸವನಗುಡಿ ಹಾಗೂ ಆನ್‌ಲೈನ್ ಬುಕ್‌ಮೈ ಶೋಷನಲ್ಲೂ ಟಿಕೆಟ್ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು. ರಂಗಕರ್ಮಿ ಹೊನ್ನಾಳಿ ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿದ್ದರು.