ಶರವೇಗದ ವಾಹನ ಚಾಲಕರಿಗೆ ದಂಡ ಹಾಕಲು ಇನ್ನು ಡ್ರೋನಾಸ್ತ್ರ ಬಳಕೆ!

drone new
Published on

ಬೆಂಗಳೂರು: ಹೆದ್ದಾರಿಗಳಲ್ಲಿ ನಡೆಯುವ ಸಂಚಾರ ಸಂಬಂಧಿತ ಅಪರಾಧಗಳನ್ನು ತಡೆಗಟ್ಟಲು ಇನ್ನು ಮುಂದೆ ಡ್ರೋನ್ ಹಾರಲಿದೆ.

ಹೌದು! ಇನ್ನು ಮುಂದೆ ಹೆದ್ದಾರಿಗಳಲ್ಲಿ ನೋಡಿವವರಿಲ್ಲ ಎಂದು ವೇಗವಾಗಿ ಹೋದರೆ ದಂಡ ಬೀಳಲಿದೆ.  ಹೆದ್ದಾರಿಗಳಲ್ಲಿ ಅಪಘಾತಗಳು ಹೆಚ್ಚಾದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಬೆಂ- ಮೈ ಎಕ್ಸ್‌ಪ್ರೆಸ್‌ ಹೆದ್ದಾರಿ ಸೇರಿದಂತೆ ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ಡೋನ್ ಕ್ಯಾಮೆರಾಗಳನ್ನು ಬಳಸಿ ವೇಗವಾಗಿ ಹೋಗುವ ವಾಹನ ಚಾಲಕರ ಮೇಲೆ ನಿಗಾ ಇಡಲು ಉದ್ದೇಶಿಸಲಾಗಿದೆ. ವಾಹನಗಳ ಶರವೇಗದ ಓಟಕ್ಕೆ ಬ್ರೇಕ್‌ ಹಾಕಲು ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗದ ಪೊಲೀಸರು ಈ ನಿರ್ಧಾರಕ್ಕೆ ಬಂದಿದ್ದಾರೆ.

ಬೆಂಗಳೂರಿನಲ್ಲಿ ಇದೀಗ ಸಂಚಾರ ನಿರ್ವಹಣೆಗೆ ಡೋನ್ ಕ್ಯಾಮೆರಾಗಳು ಬಳಕೆಯಾಗಿದ್ದು ಇನ್ನು ರಾಜ್ಯದಲ್ಲಿರುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಕೂಡಾ ಡ್ರೈನ್‌ಗಳು ಕಾಣಿಸಿಕೊಳ್ಳಲಿವೆ.

ಹೆದ್ದಾರಿಗಳಲ್ಲಿ ಡೋನ್ ಕ್ಯಾಮೆರಾ ಮೂಲಕ ನಿಗದಿತ ಮಿತಿ ಮೀರಿ ಚಲಿಸುವ ವಾಹನಗಳನ್ನು ಗುರುತಿಸಲಾಗುತ್ತದೆ. ಬಳಿಕ ಆ ವಾಹನವನ್ನು ಟೋಲ್ ಬಳಿ ತಡೆದು ದಂಡ ಹಾಕಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗದ ಪೊಲೀಸ್ ಆಯುಕ್ತರು ಆಗಿರುವ ಅಲೋಕ್ ಕುಮಾರ್ ಪೂರ್ವ‌ಸಿದ್ದತಾ ಸಭೆ ನಡೆಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಈ ಯೋಜನೆ ಜಾರಿಗೆ ಬರಲಿದ್ದು ಅತಿ ವೇಗದಲ್ಲಿ ವಾಹನ ಚಾಲನೆ ಮಾಡುವವರು ಡ್ರೋನ್ ಕಣ್ಣಿನಿಂದ ತಪ್ಪಿಸಿಕೊಳ್ಳುವುದು ಅಸಾಧ್ಯವಾಗಲಿದೆ. ಹೀಗಾಗಿ ಇನ್ನು ಮುಂದೆ ಹೆದ್ದಾರಿಗಳಲ್ಲಿ ಹೇಗೆಂದ ಹಾಗೆ ವಾಹನ ಚಲಾಯಿಸಿದರೆ ದಂಡ ಬೀಳಲಿದೆ.

ಎಲ್ಲೆಲ್ಲಿ ಬಳಕೆಗೆ ನಿರ್ಧಾರ?

ಪ್ರತಿ ಜಿಲ್ಲೆಗೆ 2 ಕೋಟಿ ರೂ. ಹಣದಲ್ಲಿ ಡ್ರೋನ್ ಖರೀದಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಈ ಹೆದ್ದಾರಿಗಳಲ್ಲಿ ಅವುಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ:

  • ಬೆಂಗಳೂರು - ಮೈಸೂರು ಹೆದ್ದಾರಿ..
  • ತುಮಕೂರು - ಚಿತ್ರದುರ್ಗ ಹೆದ್ದಾರಿ..
  • ಉಡುಪಿ - ಮಂಗಳೂರು ಹೆದ್ದಾರಿ..
  • ಧಾರವಾಡ - ಬೆಳಗಾವಿ ಹೆದ್ದಾರಿಗಳಲ್ಲಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net