More

    ಡ್ರೋನ್​ನಲ್ಲೇ ಬಂತು ಪೆನ್ಷನ್​; ಅಂಗವಿಕಲ ವ್ಯಕ್ತಿಯ ಮನೆಬಾಗಿಲಿಗೇ ಪಿಂಚಣಿ ಹಣ

    ಒಡಿಶಾ: ತಂತ್ರಜ್ಞಾನವನ್ನು ಎಷ್ಟು ಚೆನ್ನಾಗಿ ಬಳಸಿಕೊಳ್ಳುತ್ತೇವೋ ಅಷ್ಟರಮಟ್ಟಿಗೆ ಅದು ಅನುಕೂಲಕಾರಿ ಆಗಿರುತ್ತದೆ ಎಂಬುದಕ್ಕೆ ಇದೊಂದು ಅತ್ಯುತ್ತಮ ನಿದರ್ಶನ. ಏಕೆಂದರೆ ಅಂಗವಿಕಲ ವ್ಯಕ್ತಿಯೊಬ್ಬರಿಗೆ ಡ್ರೋನ್​ ಮೂಲಕ ಮನೆ ಬಾಗಿಲಿಗೇ ಪಿಂಚಣಿ ಕಳುಹಿಸಲಾಗಿದೆ.

    ಒಡಿಶಾದ ನೌಪಾದ ಜಿಲ್ಲೆಯ ಬುಟ್ಕಪದ ಎಂಬ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಹೆತರಾಮ್ ಸತ್ನಾಮಿ ಎಂಬಾತ ಡ್ರೋನ್ ಮೂಲಕ ಪಿಂಚಣಿ ಪಡೆದ ಅಂಗವಿಕಲ ವ್ಯಕ್ತಿ. ಈತ ತನ್ನ ಪಿಂಚಣಿ ಹಣ ಪಡೆಯಲು ಪ್ರತಿ ತಿಂಗಳು ತನ್ನ ಮನೆಯಿಂದ ದಟ್ಟ ಕಾಡಿನಲ್ಲಿ 2 ಕಿ.ಮೀ. ದೂರ ತೆರಳಬೇಕಿತ್ತು.

    ಆದರೆ ಈ ತಿಂಗಳಿನಲ್ಲಿ ಈತ ಪಿಂಚಣಿಗಾಗಿ ಕಾಡದಾರಿಯಲ್ಲಿ ಹಾದುಹೋಗುವ ಪ್ರಮೇಯವೇ ಬರಲಿಲ್ಲ. ಪಿಂಚಣಿ ಹಣ ಡ್ರೋನ್ ಮೂಲಕ ಮನೆ ಬಾಗಿಲಿಗೇ ಬಂದಿತ್ತು. ಸರಪಂಚರು ಡ್ರೋನ್ ಮೂಲಕ ಪಿಂಚಣಿ ಕಳುಹಿಸುವ ವ್ಯವಸ್ಥೆ ಮಾಡಿದ್ದಕ್ಕೆ ಸತ್ನಾಮಿ ಸಂತಸ ವ್ಯಕ್ತಪಡಿಸಿದ್ದಾರೆ.

    ಸತ್ನಾಮಿ ಒಡಿಶಾ ರಾಜ್ಯದ ಮಧುಬಾಬು ಪೆನ್ಷನ್ ಯೋಜನಾ ಫಲಾನುಭವಿಯಾಗಿದ್ದು, ಆತನಿಗೆ ಡ್ರೋನ್​ ಮೂಲಕ ಪೆನ್ಷನ್ ಕಳಿಸಲಾಗಿದೆ. ಸತ್ನಾಮಿ ಹುಟ್ಟಿನಿಂದಲೂ ನಡೆಯಲಾಗದ ಪರಿಸ್ಥಿತಿಯಲ್ಲಿದ್ದಾರೆ. ಅವರಿಗೆ ಈ ಮೂಲಕ ಸಹಾಯ ಮಾಡಲಾಗಿದೆ ಎಂದು ಸರಪಂಚ ಸರೋಜ್ ಅಗರ್​ವಾಲ್​ ಹೇಳಿದ್ದಾರೆ. ಅವರು ಇಂಥ ನೆರವಿಗಾಗಿಯೇ ಡ್ರೋನ್ ಖರೀದಿಸಿದ್ದಾರೆ.

    ಮಗುವಿಗೆ ಹಾಲು ಕುಡಿಸುತ್ತಿದ್ದ ಬಾಣಂತಿ ಕುಸಿದು ಬಿದ್ದು ಸಾವು!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts