ನಾನೇ ಏಕೆ..? ಜೈಲಿನಿಂದ ಹೊರಬಂದ ಬೆನ್ನಲ್ಲೇ ಡ್ರೋನ್ ಪ್ರತಾಪ್​ ಕೆಂಡಾಮಂಡಲ | Drone Prathap

Drone Prathap
Published on

Drone Prathap: ಡಿ.12ರಂದು ರೈತರ ಕೃಷಿ ಹೊಂಡದಲ್ಲಿ ಸೋಡಿಯಂ ಸ್ಫೋಟಿಸಿದ ಹಿನ್ನಲೆ ಬಿಗ್ ಬಾಸ್​ ಸೀಸನ್ 10ರ ರನ್ನರ್ ಅಪ್​ ಡ್ರೋನ್​ ಪ್ರತಾಪ್​ರನ್ನು ಪೊಲೀಸರು ಬಂಧಿಸಿದ್ದರು. ಎಫ್​ಐಆರ್​ ದಾಖಲಿಸಿಕೊಂಡಿದ್ದ ಖಾಕಿ ಪಡೆ, ಪ್ರತಾಪ್​ರನ್ನು ಅರೆಸ್ಟ್​ ಮಾಡಿ, ತನಿಖೆಗೆ ಒಳಪಡಿಸಿದ್ದರು. ಇಂದು ಜಾಮೀನಿನ ಮೇರೆಗೆ ಜೈಲಿನಿಂದ ಬಿಡುಗಡೆಯಾದ ಪ್ರತಾಪ್​, ಪೊಲೀಸರ ವಿರುದ್ಧ ತೀವ್ರ ಕಿಡಿಕಾರಿದ್ದಾರೆ.

ಇಂದು ಮಧುಗಿರಿ ಉಪಕಾರಾಗೃಹದಿಂದ ಹೊರಬಂದ ಡ್ರೋನ್ ಪ್ರತಾಪ್, ಇಲ್ಲಿ ನನ್ನನ್ನೇ ಏಕೆ ಟಾರ್ಗೆಟ್​ ಮಾಡಿದ್ದಾರೆ. ಇವರ ಕಣ್ಣಿಗೆ ಬೇರಾರು ಕಾಣಿಸಿಲ್ಲವೇ? ದೇಶಾದ್ಯಂತ ಹಲವಾರು ಯೂಟ್ಯೂಬರ್​ಗಳು ಇದೇ ರೀತಿ ಪ್ರಯೋಗವನ್ನು ಮಾಡಿದ್ದಾರೆ. ಅದರ ವಿಡಿಯೋಗಳು ಜಾಲತಾಣಗಳಲ್ಲಿ ಈಗಲೂ ಇವೆ. ಏಕೆ ಅದನ್ನು ಯಾರು ಪ್ರಶ್ನೆ ಮಾಡಿಲ್ಲ, ಅವರನ್ನು ಏಕೆ ಬಂಧಿಸಿಲ್ಲ ಎಂದು ಕೆರಳಿದ್ದಾರೆ.

ಏನಿದರ ಅರ್ಥ

"ಕೇಜಿಗಟ್ಟಲೇ ಸೋಡಿಯಂ ಬಳಸಿಕೊಂಡು ಅನೇಕ ಯುಟ್ಯೂಬರ್ಸ್​ ಇಂತಹ ಪ್ರಯೋಗ ಈಗಾಗಲೇ ಮಾಡಿದ್ದಾರೆ. ಇಷ್ಟಿದ್ದರು ನಾನು ಮಾಡಿದ್ದಕ್ಕೆ ಎಕ್ಸ್​ಪ್ಲೋಸಿವ್​ ಎಂದೆಲ್ಲಾ ಹೇಳುವ ಅಗತ್ಯ ಇರಲಿಲ್ಲ. ನನ್ನ ವಿರುದ್ಧ ಕೈಗೊಂಡ ಕ್ರಮ ಅವರಿಗ್ಯಾಕೆ ಇಲ್ಲ? ಐಪಿಸಿ ಸೆಕ್ಷನ್​ ಇಡೀ ಭಾರತದಲ್ಲಿ ಎಲ್ಲರಿಗೂ ಒಂದೇ. ಅವರ ಮೇಲೆ ಕೈಗೊಳ್ಳದ ಕ್ರಮ, ನನ್ನ ಮೇಲೆ ಮಾತ್ರ ತೆಗೆದುಕೊಳ್ಳುತ್ತಾರೆ ಏನಿದರ ಅರ್ಥ?" ಎಂದು ಮಾಧ್ಯಮದವರ ಮುಂದೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನ್ಯಾಯ ಬೇಕು

"ಭಾರತದ ಯೂಟ್ಯೂಬರ್​ಗಳಾದ xyz, ಮಿಸ್ಟರ್​ ಇಂಡಿಯನ್​ ಹ್ಯಾಕರ್ ಸೇರಿದಂತೆ ಇನ್ನೂ ಮುಂತಾದವರು ಇದೇ ರೀತಿಯ ಸೋಡಿಯಂ ಬ್ಲಾಸ್ಟ್​ ಪ್ರಯೋಗದ ವಿಡಿಯೋ ಮಾಡಿ, ತಮ್ಮ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೀಗಿರುವಾಗ ಅವರನ್ನೆಲ್ಲಾ ಬಿಟ್ಟು ನನ್ನನ್ನೇ ಏಕೆ ಬಂಧಿಸಿದ್ದಾರೆ? ನನಗಿಂತ ಮುಂಚಿತವಾಗಿ ಮಾಡಿದ್ದು ಅವರು. ದೇಶದ ಕಾನೂನು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತಾ? ಇಲ್ಲಿ ನಾನು ಮಾಡಿರೋದು ಕೇವಲ ಸೈನ್ಸ್​ ಅಂಡ್​ ಎಜುಕೇಷನಲ್ ಉದ್ದೇಶದಲ್ಲಿ. ಇದನ್ನೇ ಪ್ರಯೋಗ ಮಾಡುವ ಮುನ್ನ ವಿಡಿಯೋದಲ್ಲಿ ಡಿಸ್​ಕ್ಲೈಮರ್ ಆಗಿ ಪ್ರಸಾರ ಮಾಡಿದ್ದೀನಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ನ್ಯಾಯಕ್ಕಾಗಿ ಆಗ್ರಹಿಸುತ್ತೀನಿ. ನನಗೆ ನ್ಯಾಯ ಬೇಕಿದೆ" ಎಂದು ಪ್ರತಾಪ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net