ಕೊಂಡಂಗೇರಿ ಉರುಸ್‌ಗೆ ಚಾಲನೆ

ಚಿತ್ರ 18ಎಸ್ ಡಿ ಪಿ 02
ಕೊಂಡಂಗೇರಿ ಉರುಸ್‌ಗೆ ಚಾಲನೆ
Published on

ಸಿದ್ದಾಪುರ: ಕೊಂಡಂಗೇರಿ ದರ್ಗಾದಲ್ಲಿ ಉರುಸ್‌ಗೆ ವಿಶೇಷ ಪ್ರಾರ್ಥನೆಯೊಂದಿಗೆ ಶುಕ್ರವಾರ ಚಾಲನೆ ನೀಡಲಾಯಿತು. ಕೊಂಡಂಗೇರಿ ಸುನ್ನೀ ಮುಸ್ಲಿಂ ಜಮಾಅತ್ ಅಧ್ಯಕ್ಷ ಕುಪ್ಪಂದರ ಕೆ. ಯೂಸುಫ್ ಹಾಜಿ, ಉಪಾಧ್ಯಕ್ಷ ಕನ್ನಂಡಿಯಂಡ ಎಂ. ಮೊಹಮ್ಮದ್ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಧಾರ್ಮಿಕ ಪಂಡಿತ ಸಯ್ಯದ್ ಅಲವಿ ಜಲಾಲುದ್ದೀನ್ ಅಲ್ ಹಾದಿ ಸಾಮೂಹಿಕ ಪ್ರಾರ್ಥನೆ ನೇತೃತ್ವ ವಹಿಸಿದ್ದರು. ಈ ಸಂದರ್ಭ ತಕ್ಕ ಮುಖ್ಯಸ್ಥರಾದ ಪೇರಿಯಂಡ ಎ ಕುಂಇ ಅಹಮದ್ ಮುಸ್ಲಿಯಾರ್, ಕುಪ್ಪಂದರ ಎಂ.ಯಹ್ಯಾ ಹಾಜಿ, ಎಂ.ಐ. ಇಕ್ಬಾಲ್, ಕೊಟ್ಟಿಯಾಡ್ ಎಂ. ಶಾದುಲಿ ಸೇರಿದಂತೆ ಆಡಳಿತ ಮಂಡಳಿಯ ಪ್ರಮುಖರು ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net