

ಬೆಂಗಳೂರು: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆ(2024-25)ಯನ್ನು ಕೌನ್ಸೆಲಿಂಗ್ ಮೂಲಕ ನಡೆಸಲು ನಿರ್ಧರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಆ.16ರ ಒಳಗಾಗಿ ಪಿಡಿಒ ಗ್ರೇಡ್ 1, ಗ್ರೇಡ್ 2, ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಸೇವಾ ವಿವರಗಳ ದತ್ತಾಂಶ ಪೂರ್ಣಗೊಳಿಸಬೇಕು.
ಆ.19ರ ಒಳಗಾಗಿ ಸೇವಾ ವಿವರ ಪರಿಶೀಲಿಸಿ ಆಕ್ಷೇಪಣೆ ಸಲ್ಲಿಸಬೇಕು. ಆ.22ರ ಒಳಗೆ ಆಕ್ಷೇಪಣೆಗಳ ಪರಿಶೀಲನೆ ಪೂರ್ಣಗೊಳಿಸಬೇಕು. ಆ.26ರ ಒಳಗಾಗಿ ಸಿಇಒ ವೆಬ್ ಸೈಟ್‌ನಲ್ಲಿರುವ ದತ್ತಾಂಶವನ್ನು ಅನುಮೋದಿಸಬೇಕು ಎಂದು ರಾಜ್ಯದ ಎಲ್ಲ ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಸೂಚಿಸಲಾಗಿದೆ.