

Driving School: ಡ್ರೈವಿಂಗ್ ತರಬೇತಿ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಸಮೀಪದ ಕೆರೆಗೆ ಜಿಗಿದ ಘಟನೆ ತೆಲಂಗಾಣದ ಜನಗಾಂವ್ ಜಿಲ್ಲೆಯಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಪ್ರತಿದಿನ ಅಂತರ್ಜಾಲದಲ್ಲಿ ಹಲವು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಎಲ್ಲಿ? ಏನೇ ನಡೆದರೂ ನಾವು ಇರುವ ಸ್ಥಳದಿಂದಲೇ ಇಂಟರ್ನೆಟ್ ಮೂಲಕ ಅದನ್ನು ವೀಕ್ಷಣೆ ಮಾಡಬಹುದು. ಹೀಗಿರುವಾಗ ತೆಲಂಗಾಣದಲ್ಲಿ ನಡೆದ ಈ ಅಪಘಾತದ ವಿಡಿಯೋ ಇದೀಗ ಕಾಮಿಡಿ ವಿಡಿಯೋ ಆಗಿ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ತೆಲಂಗಾಣದ ಕುಂಟಾ ಕೆರೆಯ ಬಳಿ ಯುವಕನೊಬ್ಬನಿಗೆ ಡ್ರೈವಿಂಗ್ ತರಬೇತಿ ನೀಡಲಾಗುತ್ತಿತ್ತು. ಬ್ರೇಕ್ ಒತ್ತುವ ಬದಲು ಆಕ್ಸಿಲೇಟರ್ ಒತ್ತಿದ್ದರಿಂದ ಕಾರು ಬೇರೆ ಬೇರೆಡೆಗೆ ತಿರುಗಿ ನೇರವಾಗಿ ಕೆರೆಗೆ ಹಾರಿತು. ಕಾರು ನಿಧಾನವಾಗಿ ನದಿಯಲ್ಲಿ ಮುಳುಗಲು ಪ್ರಾರಂಭಿಸಿದಾಗ, ಇಬ್ಬರು ಪ್ರಯಾಣಿಕರು ಅದರಿಂದ ಹೊರಬರಲು ಹೆಣಗಾಡಿದರು.
ಅದೃಷ್ಟವಶಾತ್ ಕಾರು ಮುಳುಗುತ್ತಿರುವುದನ್ನು ನೋಡಿದ ಸ್ಥಳೀಯ ಜನರು ತಕ್ಷಣ ಕೆರೆಗೆ ಜಿಗಿದು ಅವರನ್ನು ರಕ್ಷಣೆ ಮಾಡಿದ್ದಾರೆ. ಸದ್ಯ ಇದಕ್ಕೆ ಸಂಬಂಧಸಿದ ವಿಡಿಯೋ ವೈರಲ್ ಆಗಿದ್ದು, ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್)