ಸರ್ಫರಾಜ್ ಖಾನ್​​ ಹುಟ್ಟುಹಬ್ಬಕ್ಕೆ ಸಿಕ್ತು ಬೆಸ್ಟ್​ ಗಿಫ್ಟ್​! ಗಂಡು ಮಗುವಿನ ತಂದೆಯಾದ ಯುವ ಕ್ರಿಕೆಟಿಗ | Sarfaraz Khan

Sarfaraz Khan

Sarfaraz Khan : ಟೀಮ್​ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಸರ್ಫರಾಜ್ ಖಾನ್ ತಂದೆಯಾಗಿ ಬಡ್ತಿ ಪಡೆದಿದ್ದಾರೆ. ಅವರ ಪತ್ನಿ ರೊಮಾನಾ ಅವರು ಸೋಮವಾರ (ಅ.21) ರಾತ್ರಿ ಗಂಡು ಮಗನಿಗೆ ಜನ್ಮ ನೀಡಿದ್ದಾರೆ. ವಿಶೇಷ ಏನೆಂದರೆ, 26ನೇ ವರ್ಷದ ಹುಟ್ಟುಹಬ್ಬಕ್ಕೂ ಮುನ್ನವೇ ಸರ್ಫರಾಜ್ ಖಾನ್ ಮಗನ ರೂಪದಲ್ಲಿ ಜೀವನದಲ್ಲೇ ಉತ್ತಮ ಉಡುಗೊರೆಯನ್ನು ಪಡೆದಿದ್ದಾರೆ.

ಮಗ ಜನಿಸಿರುವ ವಿಚಾರವನ್ನು ಸರ್ಫರಾಜ್​ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ್ದಾರೆ. ಹಾಗಾಗಿ ಅಭಿಮಾನಿಗಳು ನೆಚ್ಚಿನ ಕ್ರಿಕೆಟಿರ್​ಗೆ ಡಬಲ್ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಇಂದು ಸರ್ಫರಾಜ್​ ಖಾನ್​ 26ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ರಾತ್ರಿಯೇ ಮಗನ ರೂಪದಲ್ಲಿ ಸರ್ಫರಾಜ್​ಗೆ ಅತ್ಯಮೂಲ್ಯ ಉಡುಗೊರೆಯೇ ಸಿಕ್ಕಿದೆ.

ಇದನ್ನೂ ಓದಿ: ನಟಿ ಓವಿಯಾರ ಮತ್ತೊಂದು ವಿಡಿಯೋ ಲೀಕ್​! ಕಿರಾತಕ ಬೆಡಗಿಯ ಬೆನ್ನು ಬಿದ್ದ ಕಿರಾತಕರು | Oviya Leaked

Sarfaraz Khan

ಅಂದಹಾಗೆ ಸರ್ಫರಾಜ್ ಖಾನ್ ಅವರು 1997, ಅ. 22 ರಂದು ಮುಂಬೈನಲ್ಲಿ ಜನಿಸಿದರು. ಬಾಲ್ಯದಿಂದಲೂ ಕ್ರಿಕೆಟ್‌ ಮೇಲೆ ತುಂಬಾ ಆಸಕ್ತಿ ಹೊಂದಿದ್ದರು. ಕ್ರಿಕೆಟ್​ ಆಡಿಕೊಂಡೇ ಬೆಳೆದರು. ಇದೀಗ ಅಂತಿಮವಾಗಿ ಟೀಮ್ ಇಂಡಿಯಾಗಾಗಿ ಆಡಿದ್ದಾರೆ. ಕಳೆದ ಫೆಬ್ರವರಿ 15 ರಂದು ರಾಜ್‌ಕೋಟ್ ಮೈದಾನದಲ್ಲಿ ಇಂಗ್ಲೆಂಡ್​ ವಿರುದ್ಧ ನಡೆದ ಪಂದ್ಯದಲ್ಲಿ ಪಾದರ್ಪಣೆ ಮಾಡಿದ ಸರ್ಫರಾಜ್, ಚೊಚ್ಚಲ ಪಂದ್ಯದಲ್ಲೇ ವಿಶೇಷ ಮೈಲಿಗಲ್ಲು ಸಾಧಿಸಿದರು. ಚೊಚ್ಚಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 62 ರನ್ ಗಳಿಸಿದರು. ಆದರೆ ದುರದೃಷ್ಟವಶಾತ್ ರನೌಟ್​ ಆದರು. ಇದಾದ ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲೂ 68 ರನ್‌ಗಳ ಅಜೇಯ ಇನ್ನಿಂಗ್ಸ್‌ ಆಡಿದರು. ಸರ್ಫರಾಜ್ ತಮ್ಮ ಕ್ರಿಕೆಟ್ ಜೀವನದಲ್ಲಿ ಟೀಮ್​ ಇಂಡಿಯಾ ಪರ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ ಅವರು 58ರ ಸರಾಸರಿಯಲ್ಲಿ 350 ರನ್ ಗಳಿಸಿದ್ದಾರೆ. ಇದರಲ್ಲಿ ಅವರ ಗರಿಷ್ಠ ಸ್ಕೋರ್ 150. ಇದರಲ್ಲಿ ಅವರು 3 ಅರ್ಧಶತಕ ಮತ್ತು ಶತಕವನ್ನೂ ಗಳಿಸಿದ್ದಾರೆ.

ಇತ್ತೀಚಗೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್​ ವಿರುದ್ಧದ ಮೊದಲ ಟೆಸ್​ ಪಂದ್ಯದಲ್ಲಿ ಅತ್ಯುತ್ತಮ ಆಲ್​ರೌಂಡ್​ ಪ್ರದರ್ಶನದಿಂದ ಭಾರತವನ್ನು ನ್ಯೂಜಿಲೆಂಡ್​ ಮಣಿಸಿತು. ಮೊದಲ ದಿನದಂದು ಕೇವಲ 46 ರನ್​ಗೆ ಆಲ್​ಔಟ್​ ಆದ ಟೀಮ್ ಇಂಡಿಯಾ, ಎರಡನೇ ಹಾಗೂ ಮೂರನೇ ದಿನದಂದು ಉತ್ತಮ ಬ್ಯಾಟಿಂಗ್​ ಪ್ರದರ್ಶನ ನೀಡುವ ಮೂಲಕ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಯನ್ನು ಉಳಿಸಿಕೊಂಡಿತು. ಈ ವೇಳೆ ಕಿವೀಸ್​ ವಿರುದ್ಧದ ಎರಡನೇ ಇನ್ನಿಂಗ್ಸ್​ನಲ್ಲಿ ಅಬ್ಬರಿಸಿದ ಸರ್ಫರಾಜ್ ಖಾನ್ (Sarfaraz Khan)​, 150 ರನ್​ ಬಾರಿಸಿ, ನೋಡುಗರ ಪ್ರಶಂಸೆಗೆ ಪಾತ್ರರಾದರು. (ಏಜೆನ್ಸೀಸ್)

ಭಾರತ ಟೆಸ್ಟ್​ ತಂಡಕ್ಕೆ ವಾಷಿಂಗ್ಟನ್​ ಸುಂದರ್​ ದಿಢೀರ್​ ಸೇರ್ಪಡೆಯ ಹಿಂದಿದೆ ಈ ವಿಶೇಷ ಕಾರಣ…!

ಕರುಣಾಮಯಿ ಸಮುದಾಯ ಬಿಷ್ಣೋಯಿ: ಮರಗಳು, ಕೃಷ್ಣಮೃಗಗಳ ರಕ್ಷಣೆಗೆ ಕಟಿಬದ್ಧ, ಬಲಿದಾನಕ್ಕೂ ಸಿದ್ಧ | Bishnoi Community

Share This Article

ಕಡಿಮೆ ಸಮಯದಲ್ಲಿ ಮನೆಯಲ್ಲೇ ಮಾಡಿ ರುಚಿಕರ ಆಲೂಪೂರಿ; ಇಲ್ಲಿದೆ ಸುಲಭ ವಿಧಾನ | Recipe

ದಿನ ನಿತ್ಯ ಒಂದೇ ರೀತಿಯ ಬೆಳಗ್ಗಿನ ತಿಂಡಿ ತಿಂದು ಬೇಸರವಾಗಿರುತ್ತದೆ. ಆದರೆ ಏನಾದರೂ ವಿಶೇಷವಾದ ಬ್ರೇಕ್​ಫಾಸ್ಟ್​…

ಉಗುರಿನಲ್ಲಿ ಅಡಗಿದೆ ನಿಮ್ಮ ಆರೋಗ್ಯದ ರಹಸ್ಯ; ಹೇಗೆ ಅಂತೀರಾ.. ಈ ಮಾಹಿತಿ ನೋಡಿ | Health Tips

ಒಬ್ಬ ವ್ಯಕ್ತಿಯನ್ನು ನೋಡುವ ಮೂಲಕ ಅವನ ಬಗ್ಗೆ ಬಹಳಷ್ಟು ಹೇಳಬಹುದು. ಆದರೆ ಉಗುರುಗಳು ನಿಮ್ಮ ಆರೋಗ್ಯದ…

ಬೆಟ್ಟದ ನೆಲ್ಲಿಕಾಯಿ- ಅಲೋವೆರಾ ಕೂದಲಿನ ಆರೈಕೆಗೆ ಯಾವುದು ಬೆಸ್ಟ್​​; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ಹುಡುಗನಾಗಲಿ ಅಥವಾ ಹುಡುಗಿಯಾಗಲಿ ಇಬ್ಬರಿಗೂ ತಮ್ಮ ಕೂದಲಿನ ಬಗ್ಗೆ ಹೆಚ್ಚು ಕಾಳಜಿ ಇರುತ್ತದೆ. ಪ್ರಸಕ್ತ ಜೀವನಶೈಲಿ,…