ಮರಕ್ಕೆ ಟೆಂಪೋ ಡಿಕ್ಕಿ ಚಾಲಕ ಮೃತ್ಯು

Published on

ಚಿಂತಾಮಣಿ: ಚಿಂತಾಮಣಿ-&ಬೆಂಗಳೂರು ರಾಜ್ಯ ಹೆದ್ದಾರಿ ಜೋಡಿ ಹೊಸಹಳ್ಳಿ ಗೇಟ್​ ಬಳಿ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ರಸ್ತೆಯ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದು ಚಾಲಕ, ಕ್ಲಿನರ್​ಗೆ ಗಾಯಗಳಾಗಿವೆ. ತೀವ್ರವಾಗಿ ಗಾಯಗೊಂಡ ಚಾಲಕನನ್ನು ಬೆಂಗಳೂರಿನ ಸಂಜಯ್​ ಗಾಂಧಿ ಆಸ್ಪತ್ರೆಗೆ ದಾಖಲಿಸಿಲಾಗಿತ್ತು, ಆದರೆ ಚಿಕಿತ್ಸೆ ಲಿಸದೆ ಗುರುವಾರ ರಾತ್ರಿ ಎಚ್​.ಕುಮಾರ್​ ಮೃತಪಟ್ಟಿದ್ದಾನೆ.ಆಂಧ್ರ ಪ್ರದೇಶದ ಎಚ್​.ಕುಮಾರ್​ (26 )ಮೃತ, ಕಿರಣ್​ (25) ಗಾಯಗೊಂಡವರು. ಮುಲಕಲಚೆರುವುನಿಂದ ಈರುಳ್ಳಿ, ಬೆಳ್ಳುಳ್ಳಿ ಇತರ ತರಕಾರಿ ತುಂಬಿಕೊಂಡು ಹೋಗುತ್ತಿದ್ದಾಗ ಟನೆ ಸಂಭವಿಸಿದೆ. ಕಿರಣ್​ಗೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹೊಸಕೋಟೆಯ ಎಂವಿಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net