ಕಾರಿನ ಇಎಂಐ ಪಾವತಿಸಲಾಗದೆ ಚಾಲಕ ನೇಣಿಗೆ ಶರಣು

district koppal dc car seize showroom
Published on

ಬೆಂಗಳೂರು: ಕಾರು ಖರೀದಿಸಿ ಸಾಲದ ಕಂತು(ಇಎಂಐ) ಪಾವತಿಸಲಾಗದೆ ಮನನೊಂದು ಕ್ಯಾಬ್ ಚಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊದ್ದಾನೆ.

ಕಲಬುರಗಿ ಮೂಲದ ದೇವರಾಜ್(೨೧) ಆತ್ಮಹತ್ಯೆಗೆ ಶರಣಾದವರು. ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ದೇವರಾಜ್ ಚಿಕ್ಕಬಾಣಾವಾರದ ಗಣಪತಿನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ದೇವರಾಜ್ ಒಂದು ವರ್ಷದ ಹಿಂದೆ ಬ್ಯಾಂಕ್‌ನಿಂದ ಸಾಲ ಪಡೆದು ಕಾರು ಖರೀದಿಸಿದ್ದರು. ನಗರದಲ್ಲಿ ಬಾಡಿಗೆಗೆ ಕಾರು ಓಡಿಸಿಕೊಂಡು ಜೀವನ ಮಾಡುತ್ತಿದ್ದರು. ದೇವರಾಜ್ ಇತ್ತೀಚೆಗೆ ಸರಿಯಾಗಿ ತನ್ನ ಕಾರಿಗೆ ಬಾಡಿಗೆ ಸಿಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕ್ಕಿದ್ದರು. ಹೀಗಾಗಿ ಎರಡು ತಿಂಗಳಿಂದ ಕಾರಿನ ಸಾಲದ ಕಂತು ಪಾವತಿಸಿರಲಿಲ್ಲ. ಹೀಗಾಗಿ ಬ್ಯಾಂಕಿನವರು ಸಾಲದ ಬಾಕಿ ಕಂತು ಪಾವತಿಸುವಂತೆ ನೋಟಿಸ್ ಜಾರಿಗೊಳಿಸಿದ್ದರು ಎನ್ನಲಾಗಿದೆ. ಸಾಲದ ಕಂತು ತೀರಿಸಲಾಗದೆ ಮನನೊಂದು ದೇವರಾಜ್ ಏ.೨೯ರಂದು ಬಾಡಿಗೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net