

ಹುಬ್ಬಳ್ಳಿ: ನಗರದ ಗಣೇಶಪೇಟ ಚಿಟಗುಪ್ಪಿ ಚಾಳದ 146 ವರ್ಷದ ಅವರ್ ಲೇಡಿ ಆಫ್ ಲೂರ್ಡ್ಸ್ ರ್ಚಚಿನ ಕಟ್ಟಡದ ನವೀಕರಣ ಕಾಮಗಾರಿಗೆ ಶಾಸಕ ಪ್ರಸಾದ ಅಬ್ಬಯ್ಯ ಭಾನುವಾರ ಚಾಲನೆ ನೀಡಿದರು.
ಕ್ರೈಸ್ತ ಸಮುದಾಯದವರ ಸಮಗ್ರ ಪ್ರಗತಿಗೆ ಕಟಿಬದ್ಧವಾಗಿದ್ದು, ರ್ಚಚಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ನೀಡಿದಲ್ಲಿ ಕೂಡಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ನವೀಕರಣಕ್ಕೆ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಅಬ್ಬಯ್ಯ ಭರವಸೆ ನೀಡಿದರು.
ಬೆಳಗಾವಿಯ ಬಿಷಪ್ ರೆವೆರೆಂಡ್ ಡೆರೆಕ್ ಫರ್ನಾಂಡಿಸ್ ಮಾತನಾಡಿ, ಕಾಣದ ದೇವರನ್ನು ಹುಡುಕುವ ಬದಲು ಬಡವರು- ನಿರ್ಗತಿಕರಿಗೆ ಕೈಲಾದ ಸಹಾಯ ಮಾಡುವ ಮೂಲಕ ಅವರಲ್ಲೇ ದೇವರನ್ನು ಕಾಣಬೇಕು. ಲೇಡಿ ಆಫ್ ಲೂರ್ಡ್ಸ್ ಚರ್ಚ್ನ ನವೀಕರಣ ಕಾರ್ಯಕ್ಕೆ ಚಾಲನೆ ದೊರೆತಿರುವುದು ಅತೀವ ಸಂತಸ ತಂದಿದೆ ಎಂದು ಹೇಳಿದರು.
ಫಾ. ಫಿಲಿಪ್ ಕುಟ್ಟಿ, ಫಾ. ಮೆಲ್ವಿನ್ ಡಿಸೋಜಾ, ಮುಖಂಡರಾದ ಇಲಿಯಾಸ್ ಮನಿಯಾರ್, ರಜಿ ಜೋಸೆಫ್, ಬ್ರಿಯಾನ್ ಡಿಸೋಜಾ, ಅಡ್ಮೆಲ್ಲೋ ಸೆಲ್ವಿನ್, ಮಟಿಲ್ಡಾ ಸೆಲ್ವಿನ್, ಸಿರಿಲ್ ಸೆಲ್ವಿನ್, ಚಾಲರ್ ಆರೋಕ್ಯ ಸ್ವಾಮಿ, ಮೋಹಿನಿ ಸಿಂಗಾರವೇಲು ಇತರರು ಇದ್ದರು.