ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ

14sunti01
ಮುಖ್ಯಪೈಪ್‌ಲೈನ್‌ಗಳುಒಡೆದಪರಿಣಾಮದುರಸ್ತಿಕಾರ್ಯದಲ್ಲಿಮಗ್ನರಾಗಿರುವ ಗ್ರಾ.ಪಂ.ಪೌರಕಾರ್ಮಿಕರು
Published on

ಸುಂಟಿಕೊಪ್ಪ: ಸುಂಟಿಕೊಪ್ಪ ಗ್ರೇಡ್-1 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲವು ಬಡಾವಣೆಗಳಲ್ಲಿ ಕೊಳವೆಬಾವಿಗಳ ಮೋಟಾರ್ ದುರಸ್ತಿ ಹಾಗೂ ಮುಖ್ಯ ಪೈಪ್ ಲೈನ್‌ಗಳು ಒಡೆದು ನೀರು ಸಬರಾಜಾಗದೆ ಬವಣೆಪಟ್ಟಿದ್ದನ್ನು ಮನಗಂಡು ಗ್ರಾ.ಪಂ. ಆಡಳಿತ ಮಂಡಳಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸಬರಾಜು ವ್ಯವಸ್ಥೆಯನ್ನು ಕಲ್ಪಿಸಿದರು.

ಕೊಳವೆಬಾವಿಗಳ ಮೋಟಾರ್‌ಗಳು ದುರಸ್ತಿ ಹಾಗೂ ಮುಖ್ಯ ಪೈಪ್‌ಲೈನ್‌ಗಳು ಒಡೆದು ಹೋದ ಪರಿಣಾಮವಾಗಿ ಪಂಚಾಯಿತಿ ವ್ಯಾಪ್ತಿಯ ಕೆಲವು ಬಡಾವಣೆಗಳಲ್ಲಿ ನೀರಿನ ಸಮಸ್ಯೆ ದಿನಗಳಿಂದ 4-5 ದಿನಗಳಿಂದ ಉದ್ಭವಿಸಿದನ್ನು ಮನಗಂಡ ಗ್ರಾ.ಪಂ. ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಹಾಗೂ ಆಡಳಿತ ಮಂಡಳಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ಅಂತಹ ಬಡಾವಣೆಗಳಿಗೆ ಖಾಸಗಿ ತೋಟಗಳ ನೀರಿನ ಟ್ಯಾಂಕರ್ ಪಡೆದು ನೀರಿನ ಸಮಸ್ಯೆ ಉಂಟಾದ ಬಡಾವಣೆಗಳ ನಿವಾಸಿಗಳ ಮನೆಗಳಿಗೆ ನೀರು ಸಬರಾಜು ಮಾಡುವ ಮೂಲಕ ಸಮಸ್ಯೆ ಪರಿಹಾರ ಕ್ರಮಕ್ಕೆ ಕೈಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net