4 ದಿನದಲ್ಲಿ 46 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದ ಆಯುಷ್ಮಾನ್​ ಖುರಾನಾ ನಟನೆಯ ‘ಡ್ರೀಮ್​​ ಗರ್ಲ್​ 2’

dmix
Published on

ನಟ ಆಯುಷ್ಮಾನ್​ ಖುರಾನಾ ನಟನೆಯ ಅನೇಕ ಸಿನಿಮಾಗಳು ಸೂಪರ್​ ಹಿಟ್​ ಆಗಿವೆ. ಇದೀಗ ‘ಡ್ರೀಮ್​ ಗರ್ಲ್​ 2’ (Dream Girl 2) ಸಿನಿಮಾ ಕೂಡ ಜನ ಮನ್ನಣೆ ಗಳಿಸಿದೆ. ಆಗಸ್ಟ್ ತಿಂಗಳಲ್ಲಿ ‘ಜೈಲರ್​’, ‘ಗದರ್​ 2’, ‘ಒಎಂಜಿ 2’ ಮುಂತಾದ ಸಿನಿಮಾಗಳ ಪೈಪೋಟಿ ಜೋರಾಗಿಯೇ ಇತ್ತು. ಹೀಗಿದ್ರೂ ಕೂಡಾ ಸಿನಿಮಾ ಹಾಫ್​ ಸೆಂಚುರಿ ಬಾರಿಸುವತ್ತ ಮುನ್ನುಗ್ಗುತ್ತಿದೆ.


ಹುಡುಗಿಯ ಧ್ವನಿಯಲ್ಲಿ ಮಾತನಾಡಿ ಎಲ್ಲರನ್ನೂ ಯಾಮಾರಿಸುವ ಯುವಕನ ಪಾತ್ರದಲ್ಲಿ ಆಯುಷ್ಮಾನ್​ ಖುರಾನಾ ಅವರು ಕಾಣಿಸಿಕೊಂಡಿದ್ದರು. ‘ಡ್ರೀಮ್​ ಗರ್ಲ್​’ ಸಿನಿಮಾ2019 ರಲ್ಲಿ ತೆರೆಕಂಡಿದ್ದು, ಆಯುಷ್ಮಾನ್​ ಖುರಾನಾ ಅವರ ನಟನೆಗೆ ಫ್ಯಾನ್ಸ್ವ ಮೆಚ್ಚುಗೆಯನ್ನೂ ವ್ಯಕ್ತ ಪಡಿಸಿದ್ದರು. ಮೊದಲ ವೀಕೆಂಡ್​ನಲ್ಲಿ ಸಿನಿಮಾಗೆ ಉತ್ತಮ ಕಲೆಕ್ಷನ್​ ಆಗಿದ್ದು, ಖುರಾನಾ ಅವರ ನಟನೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.


35 ಕೋಟಿ ಬಜೆಟ್​​​ನಲ್ಲಿ ಸಿನಿಮಾ ಮಾಡಲಾಗಿದ್ದು, ಮೊದಲ ದಿನ ಈ ಚಿತ್ರ 10.69 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತು. ಶನಿವಾರ 14.02 ಕೋಟಿ ರೂಪಾಯಿ ಕಮಾಯಿ ಆಯಿತು. 3ನೇ ದಿನವಾದ ಭಾನುವಾರ 16 ಕೋಟಿ ರೂಪಾಯಿ ಆದಾಯ ಹರಿದು ಬಂತು. ಆದರೆ ಸೋಮವಾರ ಕಲೆಕ್ಷನ್​ ಕುಸಿದಿದೆ. ಸೋಮವಾರ ಕೇವಲ 5.42 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ. ರಕ್ಷಾ ಬಂಧನ ಹಬ್ಬ ಇರುವುದರಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವ ನಿರೀಕ್ಷೆ ಚಿತ್ರ ತಂಡದ್ದು.


ಚಿತ್ರದಲ್ಲಿ ಆಯುಷ್ಮಾನ್​ ಖುರಾನಾಗೆ ಜೋಡಿಯಾಗಿ ಅನನ್ಯ ಪಾಂಡೆ ನಟಿಸಿದ್ದಾರೆ. ರಾಜ್​ ಶಾಂಡಿಲ್ಯ ಅವರು ‘ಡ್ರೀಮ್​ ಗರ್ಲ್​ 2’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net