ಆಕ್ಸಿಜನ್ ಚಿಕಿತ್ಸೆ ನಿರ್ವಹಿಸಲು ಡಿಆರ್​ಡಿಒನ ಆಕ್ಸಿಕೇರ್ ಸಿಸ್ಟಂಗಳು

oxycare
Published on

ನವದೆಹಲಿ : ಪಿಎಂ ಕೇರ್ಸ್​ ಫಂಡ್​​ಅನ್ನು ಬಳಸಿಕೊಂಡು ಒಂದೂವರೆ ಲಕ್ಷ ಆಕ್ಸಿಕೇರ್​ ಸಿಸ್ಟಂಗಳನ್ನು ಖರೀದಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್ ಮೂಲಕ ತಿಳಿಸಿದ್ದಾರೆ. ಈ ಘಟಕಗಳಿಂದ ಪ್ರಸ್ತುತ ಆರೋಗ್ಯ ಸೇವಾಕರ್ತರ ಮೇಲಿರುವ ಕಾರ್ಯದೊತ್ತಡ ಕಡಿಮೆಯಾಗಲಿದೆ ಎಂದಿದ್ದಾರೆ.

ಆಸ್ಪತ್ರೆಯ ಸಿಬ್ಬಂದಿಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯಕವಾದ ಆಕ್ಸಿಕೇರ್​ ಸಿಸ್ಟಂಅನ್ನು ಡಿಆರ್​ಡಿಒ ರೂಪಿಸಿದೆ. ಈ ವ್ಯವಸ್ಥೆಯಲ್ಲಿ ರೋಗಿಗಳಿಗೆ ನೀಡಲಾಗುತ್ತಿರುವ ಆಕ್ಸಿಜನ್​ ಪ್ರಮಾಣವನ್ನು ಅವರ ಎಸ್​ಪಿಒ2 ಮಟ್ಟದ ಪ್ರಕಾರ ತಾನಾಗೇ ನಿಯಂತ್ರಿಸುವ ಸೌಲಭ್ಯ ಇರುತ್ತದೆ. ಇದರಿಂದ ಕರೊನಾ ರೋಗಿಗಳಿಗೆ ಮತ್ತೆ ಮತ್ತೆ ಪರೀಕ್ಷೆ ನಡೆಸಿ ಆಕ್ಸಿಜನ್ ಫ್ಲೋನಲ್ಲಿ ವ್ಯತ್ಯಾಸ ಮಾಡುವ ಶ್ರಮ ತಪ್ಪುತ್ತದೆ. ಅಷ್ಟು ಮಟ್ಟಿಗೆ ಆರೋಗ್ಯ ಸೇವಾಕರ್ತರ ವರ್ಕ್​ಲೋಡ್​ ಮತ್ತು ಎಕ್ಸ್​ಪೋಷರ್​ಗಳು ಕಡಿಮೆಯಾಗುತ್ತವೆ ಎಂದು ಪ್ರೆಸ್​ ಇನ್​ಫರ್ಮೇಷನ್ ಬ್ಯೂರೋ ವಿವರಿಸಿದೆ.

ಡಿಆರ್​ಡಿಒ ಈ ನಿಟ್ಟಿನಲ್ಲಿ ಸಿದ್ಧಪಡಿಸಿರುವ ತಂತ್ರಜ್ಞಾನವನ್ನು ಭಾರತದ ಅನೇಕ ಕೈಗಾರಿಕೆಗಳಿಗೆ ವರ್ಗಾಯಿಸಿದೆ. ಅವರು ಭಾರತದಾದ್ಯಂತ ಆಕ್ಸಿಕೇರ್ ವ್ಯವಸ್ಥೆಗಳನ್ನು ಉತ್ಪಾದಿಸಲಿದ್ದಾರೆ ಎನ್ನಲಾಗಿದೆ. ಪಿಎಂ ಕೇರ್ಸ್​ ಫಂಡ್​ನಿಂದ 322.5 ಕೋಟಿ ರೂಪಾಯಿಗಳ ವೆಚ್ಚದಲ್ಲಿ 1 ಲಕ್ಷ 50 ಸಾವಿರ ಘಟಕಗಳನ್ನು ಸರ್ಕಾರ ಪಡೆದುಕೊಳ್ಳಲಿದೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net