ಡ್ರೈನೇಜ್ ಕಾಮಗಾರಿ ಅವೈಜ್ಞಾನಿಕ ಆರೋಪ

17 ಪಿ ವೈ ಪಿ 01
ಪಿರಿಯಾಪಟ್ಟಣ ತಾಲೂಕಿನ ಮಾಕೋಡು ಗ್ರಾಮದಲ್ಲಿ ನಿರ್ಮಿಸಿರುವ ಡ್ರೈನೇಜ್ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಕರ್ನಾಟಕ ಕಾವಲು ಪಡೆಯ ಪಿರಿಯಾಪಟ್ಟಣ ಘಟಕದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
Published on

ಪಿರಿಯಾಪಟ್ಟಣ: ತಾಲೂಕಿನ ಮಾಕೋಡು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಿರುವ ಡ್ರೈನೇಜ್ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಹಾಗೂ ಕರ್ನಾಟಕ ಕಾವಲು ಪಡೆಯ ಪಿರಿಯಾಪಟ್ಟಣ ಘಟಕದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ಮಾಕೋಡು ಗ್ರಾಮಸ್ಥ ಶಿವಣ್ಣ ಮಾತನಾಡಿ, ಮೂರ್ನಾಲ್ಕು ತಿಂಗಳುಗಳ ಹಿಂದೆ ಡ್ರೈನೇಜ್ ಕಾಮಗಾರಿಯನ್ನು ಮಾಡಿ ಮನೆಗಳ ಮುಂದೆ ಓಡಾಡಲು ಯಾವುದೇ ರೀತಿ ಸ್ಲಾೃಬ್ ಹಾಕದೆ ಹಾಗೂ ಡ್ರೈನೇಜ್ ಪಕ್ಕದಲ್ಲಿ ಗುಂಡಿಯನ್ನು ಮಣ್ಣಿನಿಂದ ತುಂಬದೆ ಮಕ್ಕಳು ಹಾಗೂ ವೃದ್ಧರು ಬಿದ್ದು ಕೈಕಾಲುಗಳಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯಿತಿಯ ಪಿಡಿಒ ಅವರಿಗೆ ದೂರು ಸಲ್ಲಿಸಿದರೂ ಇಲ್ಲಿಯವರಿಗೆ ಯಾವುದೇ ಕ್ರಮವಾಗಿಲ್ಲ ಎಂದು ದೂರಿದರು.

ಕರ್ನಾಟಕ ಕಾವಲು ಪಡೆ ತಾಲೂಕು ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಮಾತನಾಡಿ, ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲಿ ಪರಿಶೀಲನೆ ಮಾಡಿ ಕ್ರಮಕೈಗೊಳ್ಳದಿದ್ದರೆ ಗ್ರಾಮಸ್ಥರ ಸಹಕಾರ ಪಡೆದು ಹೋರಾಟ ತೀವ್ರಗೊಳಿಸುವುದಾಗಿ ತಿಳಿಸಿದರು.

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ದಿನೇಶ್, ರಮೇಶ್, ಚಂದ್ರಪ್ಪ ಹಾಗೂ ಕರ್ನಾಟಕ ಕಾವಲು ಪಡೆಯ ರಾವಂದೂರು ಅಧ್ಯಕ್ಷ ಮಂಜು, ಪಿರಿಯಾಪಟ್ಟಣ ಟೌನ್ ಘಟಕದ ಅಧ್ಯಕ್ಷ ಫ್ಯಾನ್ಸಿಸ್, ಕಾರ್ಯದರ್ಶಿ ಯೋಗೇಶ್ ಹಾಗೂ ಪದಾಧಿಕಾರಿಗಳಾದ ವಿಜಯ್, ಗೋಕುಲ್ ಸತೀಶ್, ಮಹದೇವ್, ಪಾಪಣ್ಣ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net