ಶಿಲ್ಪಿ ಅರುಣ್ ಯೋಗೀರಾಜ್ ಅವರ ನಿವಾಸಕ್ಕೆ ಡಾ.ಸುಧಾ ಮೂರ್ತಿ ಭೇಟಿ

IMG_9408
Published on

ಮೈಸೂರು: ಐತಿಹಾಸಿಕ ರಾಮಮಂದಿರದ ಬಾಲರಾಮ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ್ ಯೋಗೀರಾಜ್ ಅವರ ನಿವಾಸಕ್ಕೆ ಭಾನುವಾರ ಇನ್ಫೋಸಿಸ್ ಪ್ರತಿಷ್ಠಾನದ ಸಂಸ್ಥಾಪಕಿ, ಲೇಖಕಿ, ರಾಜ್ಯಸಭಾ ಸದಸ್ಯೆ ಡಾ.ಸುಧಾ ಮೂರ್ತಿ ಅವರು ಸೌಜನ್ಯಯುತ ಭೇಟಿ ನೀಡಿದರು.

ಚಾಮರಾಜ ಜೋಡಿ ರಸ್ತೆಯಲ್ಲಿರುವ ನಿವಾಸಕ್ಕೆ ಭೇಟಿ ನೀಡಿದ ಸುಧಾ ಮೂರ್ತಿ ಅವರನ್ನು ಅರುಣ್ ಯೋಗಿರಾಜ್ ಕುಟುಂಬಸ್ಥರು ಸಂತೋಷದಿಂದ ಸ್ವಾಗತಿಸಿದರು.

ಸುಧಾ ಮೂರ್ತಿ ಅವರು ಇದೇ ವೇಳೆ ಶಿಲ್ಪಿ ಅರುಣ್ ಯೋಗೀರಾಜ್ ಅವರನ್ನು ಅಭಿನಂದಿಸಿದರು. ಜತೆಗೆ ಅಭಿನಂದನಾ ಪತ್ರವನ್ನು ನೀಡಿದರು. ಈ ವೇಳೆ ಅರುಣ್ ಯೋಗೀರಾಜ್ ಅವರು ತಮ್ಮ ಕೆತ್ತನೆಯ ಶಿಲ್ಪಗಳನ್ನು ಬಗ್ಗೆ ಸುಧಾಮೂರ್ತಿ ಅವರಿಗೆ ವಿವರಣೆ ನೀಡಿದರು. ಶಿಲ್ಪಿ ಅರುಣ್ ಯೋಗಿರಾಜ್ ತಾಯಿ ಸರಸ್ವತಿ, ಪತ್ನಿ ವಿಜೇತಾ, ಸಹೋದರಿ ಚೇತನಾ ಇತರರಿದ್ದರು.

‘ಡಾ.ಸುಧಾ ಮೂರ್ತಿ ಅವರು ಅಯೋಧ್ಯೆಗೆ ಭೇಟಿ ನೀಡಿದ್ದ ವೇಳೆ ಕರೆ ಮಾಡಿದ್ದರು. ಬಾಲರಾಮ ಮೂರ್ತಿಯನ್ನು ಚೆನ್ನಾಗಿ ಕೆತ್ತನೆ ಮಾಡಿದ್ದೀರಿ. ಮೈಸೂರಿಗೆ ಬಂದು ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ತಿಳಿಸಿದ್ದರು. ಹಾಗಾಗಿ, ಇಂದು ನಮ್ಮ ಮನೆಗೆ ಬಂದು ಅಭಿನಂದಿಸಿದ್ದಾರೆ. ನಮ್ಮ ಕೆತ್ತನೆಯ ಎಲ್ಲ ಮೂರ್ತಿಗಳನ್ನು ವೀಕ್ಷಿಸಿ, ಮಾಹಿತಿಯನ್ನು ಪಡೆದರು. ಕೆಲಕಾಲ ಶಿಲ್ಪಕಲೆ, ರಾಜ್ಯದ ಪ್ರಮುಖ ಶಿಲ್ಪ ಕಲಾಕೃತಿ ಮತ್ತು ಕಲಾವಿದರ ಬಗ್ಗೆ ಚರ್ಚೆ ನಡೆಸಿದರು’ ಎಂದು ಶಿಲ್ಪಿ ಅರುಣ್ ಯೋಗೀರಾಜ್ ‘ವಿಜಯವಾಣಿ’ಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net