

ಬೆಂಗಳೂರು: ಇಂದು ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಪ್ರತಿಷ್ಠಾ ಸಮಾರಂಭಕ್ಕೆ ಅನೇಕ ತಯಾರಿಗಳು ನಡೆಯುತ್ತಿದ್ದು, ದೇಶವ್ಯಾಪಿ ಶ್ರೀರಾಮ ನಾಮ ಜಪದ ಸದ್ದೇ ಕೇಳಿಸುತ್ತಿದೆ. ಅಯೋಧ್ಯೆ ಹಾಗೂ ರಾಮನ ಕುರಿತು ವಿಜಯವಾಣಿಗೆ ವಿಶೇಷ ಸಂದರ್ಶನ ನೀಡಿದ ಡಾ. ಪಾವಗಡ ಪ್ರಕಾಶ್ ರಾವ್, ರಾಮನಿಗೂ ರಾಮೇಶ್ವರಕ್ಕೂ ಇರುವ ನಂಟೇನು ಎಂಬುದರ ಬಗ್ಗೆ ಎಳೆ ಎಳೆಯಾಗಿ ವಿವರಿಸಿದ್ದಾರೆ.
"ಈ ವರ್ಷದ ಮೊದಲ ತಿಂಗಳ 22ನೇ ತಾರೀಖು ಇನ್ನು ಮುಂದೆ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ಜನವರಿ 14 ಹಾಗೂ 26 ತಾರೀಖುಗಳನ್ನು ಇಷ್ಟು ದಿನ ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದೆವು. ಇದೀಗ ಜ.22 ಸಹ ಸೇರಿಕೊಂಡಿದೆ. ವೈದಿಕ ಧರ್ಮದ ಹಿನ್ನಲೆಯಲ್ಲಿ ಚೈತ್ರ ಶುದ್ಧ ನವಮಿ ಅನ್ನು ತುಂಬ ಜ್ಞಾಪಕ ಇಟ್ಟುಕೊಳ್ತೇವೆ. ಹೀಗೆ ಹಲವಾರು ಕಾರಣಗಳಿಂದ ಅನೇಕ ದಿನಗಳನ್ನು ನಾವು ತುಂಬ ಮಹಿಮ ಪೂರ್ಣವಾಗಿರುವಂತ ಪುಣ್ಯ ದಿವಸಗಳು ಎಂದು ನೆನಪಿಟ್ಟುಕೊಳ್ಳುತ್ತೇವೆ ಎಂದು ಪಾವಗಡ ಪ್ರಕಾಶ್ ರಾವ್ ಹೇಳಿದರು. ಅವರ ಸಂಪೂರ್ಣ ಸಂದರ್ಶನ ವಿಡಿಯೋ ಈ ಕೆಳಗಿನ ಲಿಂಕ್ನಲ್ಲಿದೆ ನೋಡಿ....