

ಯುಎಸ್: ಅಮೆರಿಕದಲ್ಲಿ ನಡೆಯುತ್ತಿರುವ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಖ್ಯಾತ ಗಾಯಕ ಸಂಗೀತ ನಿರ್ದೇಶಕ ನೂತನವಾಗಿ ಕೆ.ಎಸ್. ನರಸಿಂಹ ಸ್ವಾಮಿ ಟ್ರಸ್ಟ್ನ ಅಧ್ಯಕ್ಷ ರಾಗಿ ಸರ್ಕಾರದಿಂದ ನೇಮಕವಾಗಿರುವ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಅವರನ್ನು ಅಭಿನಂದಿಸಿ ವಿಶ್ವ ಮಾನ್ಯರು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಇದನ್ನೂ ಓದಿ: ಪ್ರಾಚೀನ ಶಿಲ್ಪಕಲೆ ಮೀರಿಸುವ ಕೆತ್ತನೆ
ವಿಧಾನ ಪರಿಷತ್ನ ಸಭಾಪತಿಗಳಾದ ಸನ್ಮಾನ್ಯ ಬಸವರಾಜ ಹೊರಟ್ಟಿ, ಮಾಜಿ ಸಚಿವರಾದ ಶ್ರೀಮತಿ ರಾಣಿ ಸತೀಶ್,ವಿಧಾನ ಪರಿಷತ್ ಸದಸ್ಯರಾದ ನಾಗರಾಜ ಯಾದವ್, ವಚನಾನಂದ ಸ್ವಾಮೀಜಿ, ಹೃದಯವಾಹಿನಿ ಪತ್ರಿಕೆಯ ಸಂಪಾದಕರಾದ ಮಂಜುನಾಥ ಸಾಗರ್, ಅಕ್ಕ ಸಂಸ್ಥೆಯ ಸಂಸ್ಥಾಪಕರಾದ ಡಾ.ಅಮರನಾಥ ಗೌಡರು, ಹಳೆಕೋಟೆ ವಿಶ್ವಾಮಿತ್ರ ಮುಂತಾದ ಗಣ್ಯರು ಉಪಸ್ಥಿತರಿದ್ದರು.