ಇಂದಿರಾ ಕ್ಯಾಂಟೀನ್‌ಗೆ ಡಾ.ಜಯಣ್ಣ ಭೇಟಿ

30 KRN-1
ಕೆ.ಆರ್.ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಪುರಸಭಾ ಮುಖ್ಯಾಧಿಕಾರಿ ಡಾ.ಜಯಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಟರಾಜ್, ಶಿವುನಾಯಕ್, ಮಿಕ್ಸರ್ ಶಂಕರ್, ಮಾಜಿ ಸದಸ್ಯ ವಿನಯ್, ರವಿ, ಕಾಮಧೇನು ಧರ್ಮ, ಪುಟ್ಟು, ರಮೇಶ್, ಎಸ್.ಪಿ.ರಾಜೇಂದ್ರಕುಮಾರ್, ಲೊಕೇಶ್ ಇದ್ದರು.
Published on

ಕೆ.ಆರ್.ನಗರ: ಪಟ್ಟಣದ ಡಾ.ರಾಜ್‌ಕುಮಾರ್ ಬಾನಾಂಗಳದಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಪುರಸಭಾ ಮುಖ್ಯಾಧಿಕಾರಿ ಡಾ.ಜಯಣ್ಣ ಸದಸ್ಯರು ಮತ್ತು ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕ್ಯಾಂಟೀನ್ ಹಾಗೂ ಆವರಣದಲ್ಲಿನ ಸ್ವಚ್ಛತೆಯನ್ನು ಪರಿಶೀಲಿಸಿದರಲ್ಲದೆ ಸ್ವತಃ ಮುಖ್ಯಾಧಿಕಾರಿಯೇ ಸದಸ್ಯರೊಂದಿಗೆ ತಿಂಡಿ ಸೇವಿಸುವ ಮೂಲಕ ಆಹಾರದ ರುಚಿ, ಗುಣಮಟ್ಟ ಪರೀಕ್ಷಿಸಿದರು. ಇದೇ ವೇಳೆ ಅಲ್ಲಿ ಉಪಾಹಾರ ಸೇವಿಸುತ್ತಿದ್ದ ಗ್ರಾಹಕರು, ಕಾಲೇಜು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರಲ್ಲದೆ, ಸಮಸ್ಯೆಗಳು ಕಂಡು ಬಂದರೆ ಅಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದರು.

ಕ್ಯಾಂಟೀನ್‌ನಲ್ಲಿ ನಿತ್ಯ 700ಕ್ಕೂ ಹೆಚ್ಚು ಜನ ಊಟ-ತಿಂಡಿ ಮಾಡುತ್ತಿದ್ದಾರೆ. ಆರೋಗ್ಯ ವಿಭಾಗದ ಅಧಿಕಾರಿಗಳು, ಸಿಬ್ಬಂದಿ, ಪುರಸಭಾ ಸದಸ್ಯರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಇಲ್ಲಿ ಆಹಾರ ಸೇವಿಸುವ ಜನರಿಗೆ ಶೇ.90 ರಷ್ಟು ಭಾಗ ತೃಪ್ತಿಯಿದ್ದು, ಸಣ್ಣ ಪುಟ್ಟ ಸುಧಾರಾಣೆ ಆಗಬೇಕಿದೆ. ಅದನ್ನು ಸರಿಪಡಿಸುಕೊಳ್ಳುವಂತೆ ಆಹಾರ ಪೂರೈಸುವ ಏಜೆನ್ಸಿಯವರಿಗೆ ಸೂಚಿಸಲಾಗಿದೆ ಎಂದು ಡಾ.ಜಯಣ್ಣ ತಿಳಿಸಿದರು.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕಾಂಪೌಂಡ್ ಪಕ್ಕದಲ್ಲೇ ಇರುವುದರಿಂದ ಕ್ಯಾಂಟೀನ್‌ನ ನ್ಯೂ ಬಜಾರ್ ರಸ್ತೆಯ ಕಡೆಗೆ ಇರುವ ದ್ವಾರವನ್ನು ಬಂದ್ ಮಾಡಿ ನಿಲ್ದಾಣದ ಕಡೆಗೆ ಸೇರಿದಂತೆ ಮತ್ತೊಂದು ದ್ವಾರ ತೆರೆಯಬೇಕೆಂಬ ಮನವಿ ಇದ್ದು, ಈ ಬಗ್ಗೆ ಶಾಸಕರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪುರಸಭಾ ಸದಸ್ಯರಾದ ನಟರಾಜ್, ಶಿವುನಾಯಕ್, ಮಿಕ್ಸರ್ ಶಂಕರ್, ಮಾಜಿ ಸದಸ್ಯ ವಿನಯ್, ಎಪಿಎಂಸಿ ನಿರ್ದೇಶಕ ರವಿ, ಮುಖಂಡರಾದ ಕಾಮಧೇನು ಧರ್ಮ, ಪುಟ್ಟು, ಕಂದಾಯ ಅಧಿಕಾರಿ ರಮೇಶ್, ಆರೋಗ್ಯ ನಿರೀಕ್ಷಕರಾದ ಎಸ್.ಪಿ.ರಾಜೇಂದ್ರಕುಮಾರ್, ಎಚ್.ಎಸ್.ಲೋಕೇಶ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net