

ಒಂದು ದಿನ ಪವಿತ್ರಾ ಕಚೇರಿಯಿಂದ ಬಂದಾಗ ಮಗಳು ಕೋಣೆಯಲ್ಲಿ ಮಲಗಿರುವುದನ್ನು ಕಂಡು ಏನಾಯಿತೆಂದು ವಿಚಾರಿಸಿದಾಗ ತುಂಬಾ ಹೊಟ್ಟೆನೋಯುತ್ತಿದೆ ಎಂದಳು ಅತಾ. ನೋವು ನಿವಾರಕ ಗುಳಿಗೆಯೊಂದನ್ನು ಕೊಟ್ಟ ಪವಿತ್ರಾ ನಾಳೆಯವರೆಗೆ ನೋಡೋಣ ಎಂದಳು. ಆದರೆ ಒಂದು ಗಂಟೆಯ ನಂತರವೂ ಅವಳಿಗೆ ನೋವು ಕಡಿಮೆಯಾಗದಾದಾಗ ಖಾಸಗಿ ಆಸ್ಪತ್ರೆಗೆ ಕರೆದೊಯ್ದಳು. ಅತಾಳನ್ನು ಪರೀೆ ಮಾಡಿದ ವೆದ್ಯರು ಆಕೆ ಗಭಿರ್ಣಿಯಾದಂತೆ ಕಾಣುತ್ತಿದೆಯೆಂದು ಹೇಳಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿದರು. "ನಿಮ್ಮ ಮಗಳು ಆರು ತಿಂಗಳ ಗಭಿರ್ಣಿ' ಎಂದು ವೆದ್ಯರು ತಿಳಿಸಿದಾಗ ಪವಿತ್ರ್ರಾಳಿಗೆ ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತಾಯಿತು. ಯಾರಿಂದ ಹೀಗಾಯಿತು ಎಂದು ಕೇಳಿದಾಗ, ಅತಾ ಅಳುವನ್ನು ಬಿಟ್ಟರೆ ಬೇರೆ ಯಾವ ಉತ್ತರವನ್ನೂ ಕೊಡಲಿಲ್ಲ. "ಆರು ತಿಂಗಳ ಗಭಿರ್ಣಿಯಾದಲ್ಲಿ ಅವಳಿಗೆ ಮುಟ್ಟು ನಿಂತಿರಬೇಕಾಗಿತ್ತಲ್ಲ, ಹೊಟ್ಟೆ ಉಬ್ಬಿರಬೇಕಿತ್ತಲ್ಲ, ನನಗೆ ಅವಳಲ್ಲಿ ಯಾವ ವ್ಯತ್ಯಾಸವೂ ಕಾಣಿಸುತ್ತಿಲ್ಲ' ಎಂದು ಪವಿತ್ರಾ ವೆದ್ಯರನ್ನು ಕೇಳಿದಾಗ, "ಕೆಲವು ಪ್ರಕರಣಗಳಲ್ಲಿ ಹೀಗಾಗುತ್ತದೆ. ಒಂದು ಪ್ರಕರಣದಲ್ಲಂತೂ ಒಂದು ಮಗುವಿದ್ದ ವಿವಾಹಿತ ಮಹಿಳೆಗೆ ಎಂಟು ತಿಂಗಳ ಗಭಿರ್ಣಿಯಾದ ನಂತರವೂ ಗರ್ಭ ಧರಿಸಿದ್ದೇ ತಿಳಿದಿರಲಿಲ್ಲ. ಹದಿಹರೆಯದವರಲ್ಲಿ ಹೀಗಾಗುವುದುಂಟು' ಎಂದರು. ಪವಿತ್ರಾ ಕೂಡಲೇ ವಿಮಲ್ಗೆ ವಿಷಯ ತಿಳಿಸಿದಳು.
ಆಸ್ಪತ್ರೆಗೆ ಧಾವಿಸಿದ ವಿಮಲ್ ಮಗಳಿಗೆ ಗರ್ಭಪಾತ ಮಾಡಿ ಈ ಪ್ರಕರಣವನ್ನು ಯಾರಿಗೂ ತಿಳಿಯದಂತೆ ಮುಚ್ಚಿಡಲು ಹೇಳಿದಾಗ, ವೆದ್ಯರು ಕೋಪಗೊಂಡು, "ಆಕೆಗೆ ಕೇವಲ ಹದಿನಾಲ್ಕು ವರ್ಷ ವಯಸ್ಸಾಗಿದೆ. ಇದು ಅಪ್ರಾಪ್ತೆಯ ಮೇಲೆ ಅತ್ಯಾಚಾರದ ಕೇಸಾಗಿದ್ದು ಕಾನೂನಿನ ಪ್ರಕಾರ ನಾವು ಪೊಲೀಸರಿಗೆ ಮಾಹಿತಿ ನೀಡದಿದ್ದರೆ ಅಪರಾಧಮಾಡಿದಂತಾಗುತ್ತದೆ' ಎಂದು ಹೇಳಿ, ಪೊಲೀಸರಿಗೆ ಮಾಹಿತಿ ನೀಡಿದರು. ಅತಾಳಿಗೆ ಶುಶ್ರೂಷೆ ನೀಡಿ ಮನೆಗೆ ಕಳುಹಿಸಿದರು.
ಮಾರನೆಯ ದಿನವೇ ಆಪ್ತ ಸಮಾಲೋಚಕರ ಜತೆಗೆ ಮಹಿಳಾ ಪೊಲೀಸ್ ಅಧಿಕಾರಿಗಳು ವಿಮಲ್ನ ಮನೆಗಾಗಮಿಸಿದರು. ಅತಾಳನ್ನು ಏಕಾಂತದಲ್ಲಿ ಮಾತನಾಡಿಸಿ ಆಕೆ ಗರ್ಭ ಧರಿಸಿದ್ದು ಹೇಗೆ ಎಂದು ವಿಚಾರಿಸಿದರು. ಆರಂಭದಲ್ಲಿ ಅತಾ ಮೌನಕ್ಕೆ ಶರಣಾದರೂ ಮುಂದೆ ಸಮಾಧಾನ ತಂದುಕೊಂಡು ಹೀಗೆಂದಳು:
"ನಮ್ಮ ಪಕ್ಕದ ಮನೆಯಲ್ಲಿ ವಾಸಿಸುವ ಅರ್ಜುನ್ ನನಗೆ ಹಲವು ವರ್ಷಗಳಿಂದ ಪರಿಚಯವಿದ್ದು ಆತ್ಮೀಯ ಸ್ನೇಹಿತನಾಗಿದ್ದಾನೆ. ಅವನು ನನಗಿಂತ ಒಂದು ವರ್ಷ ದೊಡ್ಡವನಾಗಿದ್ದು 9ನೆಯ ತರಗತಿಯಲ್ಲಿ ಬೇರೆ ಶಾಲೆಯಲ್ಲಿ ಕಲಿಯುತ್ತಿದ್ದಾನೆ. ನಾನು ಪ್ರತಿದಿನ ಶಾಲೆಯಿಂದ ಬಂದಕೂಡಲೇ ಅವನ ಮನೆಗೆ ಹೋಗಿ ಅವನ ಜತೆ ಸಮಯ ಕಳೆಯುತ್ತಿದ್ದೆ. ಒಂದು ದಿನ ಆತ ನನಗೆ ತನ್ನ ಮೊಬೆಲ್ ೋನ್ನಲ್ಲಿ ಅಶ್ಲೀಲ ವಿಡಿಯೋ ತೋರಿಸಿದ. ಮೊದಲಿಗೆ ನನಗೆ ಅಸಹ್ಯವೆನಿಸಿದರೂ ಅದನ್ನು ಮತ್ತೆ ನೋಡಬೇಕೆನಿಸಿತು. ಅವನಿಗೆ ಅದನ್ನು ತಿಳಿಸಿದಾಗ ಆತ ಆ ವಿಡಿಯೋವನ್ನು ನನ್ನ ೋನಿಗೆ ಕಳುಹಿಸಿದ. ಅದನ್ನು ಪದೇಪದೆ ನೋಡಿದೆ. ಆನಂತರ ಅರ್ಜುನ್ ನನ್ನನ್ನು ತನ್ನ ವಾಟ್ಸಪ್ ಗುಂಪಿಗೆ ಸದಸ್ಯಳನ್ನಾಗಿ ಮಾಡಿದ. ಆ ಗುಂಪಿನ ಸದಸ್ಯರು ನಗ್ನ ಫಫೋಟೋಗಳು ಮತ್ತು ಬ್ಲೂ ಫಿಲ್ಮ್ ವಿಡಿಯೋಗಳನ್ನು ಷೇರ್ ಮಾಡುತ್ತಿದ್ದರು. ಕಾಲಕ್ರಮೇಣ ನನಗೆ ಇಂತಹ ಫೋಟೋಗಳು ಮತ್ತು ವಿಡಿಯೋಗಳನ್ನು ನೋಡುವ ಚಟ ಬೆಳೆಯಿತು.
ಒಂದು ದಿನ ನಾನು ಅರ್ಜುನ್ನ ಮನೆಗೆ ಹೋದಾಗ ಬೇರಾರೂ ಇರಲಿಲ್ಲ. ಆಗ ಆತ ಒಂದು ವಿಡಿಯೋವನ್ನು ತೋರಿಸಿ, ಅಲ್ಲಿ ಮಾಡುವ ಹಾಗೆ ನಾವೂ ಏಕೆ ಮಾಡಬಾರದು ಎಂದು ಕೇಳಿದ. ನಾನು ಒಪ್ಪಿದಾಗ ಆತ ಆ ವಿಡಿಯೋವನ್ನು ದೊಡ್ಡ ಸ್ಕ್ರೀನಿನ ಮೇಲೆ ಹಾಕಿದ. ಆ ವಿಡಿಯೋದಲ್ಲಿರುವುದನ್ನು ನಾವೂ ಅನುಕರಣೆ ಮಾಡಿದೆವು. ಅಂದು ನನಗೆ ಬಹಳ ನೋವುಂಟಾಗಿ ಲೆಂಗಿಕ ಕ್ರಿಯೆಯೇ ಅಸಹ್ಯ ಹುಟ್ಟಿಸಿತು. ಅರ್ಜುನ್ ಈ ರೀತಿಯಾಗುವುದು ಸಹಜವೆಂದು ಹೇಳಿ ಕಾಲಕ್ರಮೇಣ ಅದು ಇಷ್ಟವಾಗುತ್ತದೆ ಎಂದ. ಅವನು ತಿಳಿಸಿದಂತೆಯೇ ಎರಡು ವಾರಗಳ ನಂತರ ನನಗೆ ಸೆಕ್ಸ್ ಮಾಡಬೇಕೆನ್ನಿಸಿತು. ಆನಂತರ ನಾವಿಬ್ಬರೂ ಎರಡು ಮೂರು ಬಾರಿ ಲೆಂಗಿಕ ಕ್ರಿಯೆ ನಡೆಸಿದೆವು.'
ಅತಾಳ ಹೇಳಿಕೆ ಕೇಳಿ ಬೆಚ್ಚಿಬಿದ್ದ ಪೊಲೀಸ್ ಅಧಿಕಾರಿಗಳು ಅವಳ ಮೊಬೆಲನ್ನು ತೆರೆದು ನೋಡಿದಾಗ ಅದರಲ್ಲಿ ಹಲವಾರು ಅಶ್ಲೀಲ ವಿಡಿಯೋಗಳಿದ್ದವು. ಅವಳು ಸದಸ್ಯೆಯಾಗಿದ್ದ ವಾಟ್ಸಪ್ ಗುಂಪಿನವರೆಲ್ಲರೂ ತಮ್ಮ ತಮ್ಮ ನಗ್ನಚಿತ್ರಗಳನ್ನು ಹಂಚಿಕೊಂಡದ್ದನ್ನು ಕಂಡ ಪೊಲೀಸ್ ತಂಡಕ್ಕೆ ಅಚ್ಚರಿಯಾಯಿತು. ನಂತರ ಆ ಪೊಲೀಸ್ ತಂಡ ಅರ್ಜುನ್ನ ಮನೆಗೆ ಹೋದಾಗ ಅವನ ಮಾತಾಪಿತರು ಮಗ ಕೆಟ್ಟ ಕೆಲಸವನ್ನು ಮಾಡಲು ಅಸಾಧ್ಯ ಎಂದೇ ಸಾಧಿಸಿದರು. ಆಗ ಅರ್ಜುನ್ನನ್ನು ಅವರ ಎದುರಿಗೇ ಪ್ರಶ್ನಿಸಲಾಯಿತು. ಆತ ಆರಂಭದಲ್ಲಿ ಒಪ್ಪಿಕೊಳ್ಳಲಿಲ್ಲ. ಆಗ ಅತಾಳನ್ನೇ ಕರೆತಂದಾಗ ತಮ್ಮ ದೈಹಿಕ ಸಂಬಂಧದ ಬಗ್ಗೆ ಆತ ಒಪ್ಪಿಕೊಂಡ.
ಪೊಲೀಸರ ಮುಂದೆ ಸೂಕ್ಷ್ಮಮಸವಾಲು ಎದುರಾಗಿತ್ತು. ಈ ಕತ್ಯ ಹದಿಹರೆಯದವರಿಬ್ಬರ ನಡುವೆ ಮುಂದಿನ ಪರಿಣಾಮಗಳ ಅರಿವಿಲ್ಲದೆಯೇ ನಡೆದಂತಹುದಾಗಿತ್ತು. ಆದರೆ ಕಾನೂನಿನನ್ವಯ, ಅತಾಳ ಮೇಲೆ ಅತ್ಯಾಚಾರ ನಡೆದಿತ್ತು. ಹೀಗಾಗಿ ಅರ್ಜುನ್ನ ಮೇಲೆ ರೇಪ್ ಪ್ರಕರಣ ದಾಖಲಿಸಿ ಅವನ ದೆಹಿಕ ಪರೀೆ ಮಾಡಿಸಲಾಯಿತು. ಅತಾಳ ಗರ್ಭಕ್ಕೆ ಆತನೇ ಕಾರಣ ಎಂದು ಸಾ್ಯಾಧಾರ ಮೂಲಕ ಸಾಬೀತಾಯಿತು. ಅರ್ಜುನ್ಗೆ 16 ವರ್ಷಗಳು ತುಂಬಿರದಿದ್ದ ಕಾರಣ ಈ ಪ್ರಕರಣವನ್ನು ಬಾಲನ್ಯಾಯಾಲಯವೇ ನಿರ್ಧರಿಸಬೇಕಿತ್ತು. ನ್ಯಾಯಾಲಯವು ಅವನನ್ನು ಬಾಲಮಂದಿರಕ್ಕೆ ಕಳುಹಿಸಿತು. ಶ್ರೀದಲ್ಲಿ ತನಿಖೆ ಮುಗಿಸಿ ಆರೋಪಪಟ್ಟಿ ಸಲ್ಲಿಸಲಾಯಿತು.
ಏತನ್ಮಧ್ಯೆ ವಿನಯ್ ಬೇರೊಂದು ಬಡಾವಣೆಯಲ್ಲಿ ಮನೆಯನ್ನು ಬಾಡಿಗೆಗೆ ಪಡೆದು ಅಲ್ಲಿ ವಾಸಿಸತೊಡಗಿದ. ಅತಾಳನ್ನು ತನ್ನ ಸೋದರಿಯ ಮನೆಗೆ ಕಳುಹಿಸಿದ. ಆ ಊರಿನಲ್ಲಿ ಕೆಲಕಾಲದ ನಂತರ ಅತಾ ಸುಂದರ ಹೆಣ್ಣು ಮಗುವಿಗೆ ಜನ್ಮ ನೀಡಿದಳು ಆ ಮಗು ತೂಕದಲ್ಲಿ ಕಡಿಮೆಯಿದ್ದು ಆರೋಗ್ಯದಿಂದಿರಲಿಲ್ಲ. ಅದನ್ನು ಆಸ್ಪತ್ರೆಯ ವಿಶೇಷ ನಿಗಾ ಟಕದಲ್ಲಿಡಲಾಗಿತ್ತು. ಒಂದು ದಿನ ಮಗುವಿಗೆ ಹಾಲುಣಿಸಲು ಹೋದ ಅತಾ ಅದು ಹಟಮಾಡುತ್ತಿದ್ದುದನ್ನು ಕಂಡು ಕೋಪಗೊಂಡು ಅಳುವನ್ನು ನಿಲ್ಲಿಸಲು ತಲೆದಿಂಬನ್ನು ಅದರ ಮುಖದ ಮೇಲೆ ಬಿಗಿಯಾಗಿಟ್ಟಳು. ಮಗು ಉಸಿರುಗಟ್ಟಿ ಎರಡೇ ನಿಮಿಷಗಳಲ್ಲಿ ಅಸುನೀಗಿತು. ಗಾಬರಿಗೊಂಡ ನಸಿರ್ಂಗ್ ಹೋಮಿನ ಸಿಬ್ಬಂದಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಶಿಶುಹತ್ಯೆಯಾಗಿದೆ ಎಂದು ಸುದ್ದಿ ಮುಟ್ಟಿಸಿದರು. ಪೊಲೀಸರು ಅತಾ ವಿರುದ್ಧ ಪ್ರಕರಣ ದಾಖಲಿಸಿದರು.
ಅತಾ ಹೆರಿಗೆಯ ನಂತರದ ಖಿನ್ನತೆಯಿಂದ ಬಳಲುತ್ತಿರುವುದಾಗಿ ನಂತರ ಪೊಲೀಸ್ ತನಿಖೆಯಲ್ಲಿ ತಿಳಿಯಿತು. ಇದಲ್ಲದೇ ಆಕೆ ತಾಯಿಯಾಗುವ ವಯಸ್ಸಿನವಳಾಗಿರದಿದ್ದ ಕಾರಣ ತೀವ್ರ ಮಾನಸಿಕ ಒತ್ತಡವುಂಟಾಗಿದ್ದು ಅವಳ ಕತ್ಯವು ಉದ್ದೇಶಪೂರ್ವಕವಲ್ಲ ಎಂದು ತಿಳಿಯಿತು. ಈ ಮೇರೆಗೆ ಅವಳ ಮೇಲೆ ಯಾವುದೇ ಕ್ರಮ ಕೆಗೊಳ್ಳದೆ ಪ್ರಕರಣವನ್ನು ಮುಕ್ತಾಯಗೊಳಿಸಲಾಯಿತು. ಇತ್ತ ಅರ್ಜುನ್ ವಿರುದ್ಧ ವಿಚಾರಣೆ ನಡೆಸಿದ ನ್ಯಾಯಾಲಯವು ಅವನಿಗೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿತು.
ಇಲ್ಲಿ ಇಬ್ಬರು ಅಪ್ರಾಪ್ತ ವಯಸ್ಕರಿಗಾದ ಮಾನಸಿಕ ಆಘಾತ ಅಳೆಯಲಾರದಂತಹದು. ಇಂದಿನ ಕಾಲಟ್ಟದಲ್ಲಿ ಹದಿಹರೆಯದ ಬಾಲಕ ಬಾಲಕಿಯರೂ ಅಶ್ಲೀಲ ಚಿತ್ರಗಳನ್ನು ನೋಡುವುದು, ಲೆಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯವಾಗುತ್ತಿದೆ. ಅವರಿಗೆ ಸೆಕ್ಸ್ ಬಗ್ಗೆ ಇರುವ ಕುತೂಹಲ ಮತ್ತು ಪ್ರಯೋಗ ಮಾಡುವ ಇರಾದೆಯೇ ಇದಕ್ಕೆ ಮೂಲ ಕಾರಣ. ಮೊಬೆಲ್ ಫೋನುಗಳು, ಕಂಪ್ಯೂಟರ್ಗಳು ಈ ಕುತೂಹಲವನ್ನು ನಿವಾರಿಸುತ್ತಿವೆ. ತಂದೆ ತಾಯಂದಿರು ಮಕ್ಕಳ ಜತೆಗೆ ಹೆಚ್ಚಿನ ಸಮಯ ವಿನಿಯೋಗಿಸದಿರುವುದು ಸಮಸ್ಯೆಯನ್ನು ಜಟಿಲಗೊಳಿಸಿದೆ. ಮಕ್ಕಳು ಆನ್ಲೆನಿನಲ್ಲಿ ಎಷ್ಟು ಕಾಲವನ್ನು ವ್ಯಯಿಸುತ್ತಾರೆ ಮತ್ತು ಏನನ್ನು ವೀಸುತ್ತಾರೆ ಎಂದು ಗಮನಿಸದೇ ಹೋದರೆ ಅಪಾಯ ಗಟ್ಟಿ. ಮಕ್ಕಳು ವಾಟ್ಸಪ್ ಗುಂಪುಗಳ ಮೂಲಕವೇ ಕೆಟ್ಟದಾರಿಗೆ ಹೋಗುವುದರಿಂದ ಅವರು ಎಂತಹ ಗುಂಪುಗಳ ಸದಸ್ಯರಾಗಿದ್ದಾರೆಂದು ಗಮನಿಸಲೇಬೇಕು. ಪ್ರತಿದಿನವೂ ಮಕ್ಕಳ ಆನ್ಲೆನ್ ವೀಣೆಗೆ ಸಮಯವನ್ನು ನಿಗದಿಪಡಿಸಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸಿ ಬುದ್ಧಿವಂತರನ್ನಾಗಿ ಮಾಡುವುದಷ್ಟೇ ಕರ್ತವ್ಯವಲ್ಲ, ಮಕ್ಕಳ ಸಂಪೂರ್ಣ ಬೆಳವಣಿಗೆಗಳಿಗೆ ತಾವು ಕಾರಣರೆಂದು ಮಾತಾಪಿತರು ಅರಿಯಬೇಕು.
ಮಕ್ಕಳಿಗೆ ಸ್ವಯಂರಣೆ ಸಾಧ್ಯವಿಲ್ಲದ್ದರಿಂದ ಮಾತಾಪಿತರ ಜವಾಬ್ದಾರಿ ಹೆಚ್ಚು. ಅಮೆರಿಕದ ಕಾದಂಬರಿಗಾರ್ತಿ ಸಿರಿ ಹುಸ್ಟ್ವೆಟ್ ಹೇಳುವಂತೆ, "ತಮ್ಮ ಭದ್ರತೆಗೊದಗಬಹುದಾದ ಸಂಕಷ್ಟಗಳ ಬಗ್ಗೆ ವಿಶ್ಲೇಷಿಸಲು ಮಕ್ಕಳಿಗೆ ಸಾಧ್ಯವಿಲ್ಲ; ಹೀಗಾಗಿ ಮಾತಾಪಿತರೇ ಅತಿ ಎಚ್ಚರಿಕೆಯಿಂದ ಈ ವಿಶ್ಲೇಷಣೆಯನ್ನು ಮಾಡಬೇಕು.'