ಬಿರ್​ಭುಮ್​ನಲ್ಲಿ ಪತ್ತೆಯಾದವು ಡಜನ್​ಗಟ್ಟಲೆ ಕಚ್ಚಾ ಬಾಂಬ್​ಗಳು; ಸ್ಥಳೀಯರಲ್ಲಿ ಆತಂಕ, ತನಿಖೆ ಕೈಗೆತ್ತಿಕೊಂಡ ಪೊಲೀಸರು

Crude Bomb 19 Feb 20
Published on

ಬೋಲ್ಪುರ್​: ಪಶ್ಚಿಮಬಂಗಾಳದ ಬಿರ್​ಭುಮ್​ ಜಿಲ್ಲೆಯ ಬ್ಯಾಂಕ್​, ಪಂಚಾಯಿತಿ ಕಚೇರಿ ಮತ್ತು ತೃಣಮೂಲ ಕಾಂಗ್ರೆಸ್​ ಪಕ್ಷದ ಕಚೇರಿಗಳ ಎದುರು ಡಜನ್​ಗಟ್ಟಲೆ ಕಚ್ಚಾ ಬಾಂಬ್​ಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೋಲ್ಪುರದ ಸಿಯಾನ್​ ಮುಲುಕ್​ ಗ್ರಾಮದ ಸ್ಥಳೀಯ ಪಂಚಾಯಿತಿ ಎದುರು ಹಲವು ಬಾಂಬ್​ಗಳು ಹರಡಿಕೊಂಡಿರುವುದಾಗಿ ಗ್ರಾಮಸ್ಥರು ಇಂದು ಬೆಳಗ್ಗೆ ಮಾಹಿತಿ ನೀಡಿದರು. ಹೆಚ್ಚಿನ ಪರಿಶೀಲನೆ ನಡೆಸಿದಾಗ ಅದೇ ತರಹದ ಕಚ್ಚಾಬಾಂಬ್​ಗಳು ತೃಣಮೂಲ ಕಾಂಗ್ರೆಸ್ ಕಚೇರಿ ಮತ್ತು ಬ್ಯಾಂಕ್​ ಎದುರೂ ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ಕೂಡಲೇ ಬಾಂಬ್​ ನಿಷ್ಕ್ರಿಯ ದಳಕ್ಕೆ ಮಾಹಿತಿ ನೀಡಲಾಗಿದೆ. ಹೆಚ್ಚಿನ ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.(ಪಿಟಿಐ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net