ವರದಕ್ಷಿಣೆಗಾಗಿ ಯುವತಿಗೆ ಬೆಂಕಿ ಹಚ್ಚಿದ ಪಾಪಿಗಳು; ನರಳುತ್ತಲೇ ಪ್ರಾಣಬಿಟ್ಟಳು ಆಕೆ....

Death j
Published on

ತುಮಕೂರು: ವರದಕ್ಷಿಣೆ ತರಲಿಲ್ಲ ಎಂಬ ಕಾರಣಕ್ಕೆ ಯುವತಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆ ತೊಂಡೆಗೆರೆ ಬಳಿ ನಡೆದಿದೆ.

ಮೃತ ಯುವತಿ ಗೌರಮ್ಮ ಕೊರಟಗೆರೆ ತಾಲೂಕಿನ ಎಲೆರಾಂಪುರದವರು. ತೊಂಡೆಗೆರೆ ಗ್ರಾಮದ ಕುಮಾರ್​ ಎಂಬುವರ ಜತೆಗೆ ವಿವಾಹವಾಗಿತ್ತು. ವರದಕ್ಷಿಣೆಗಾಗಿ ಅವರನ್ನು ಪೀಡಿಸಲಾಗುತ್ತಿತ್ತು. ಆದರೆ ನಿನ್ನೆ ಮಧ್ಯಾಹ್ನ ಪಾಪಿಗಳು ಅವಳಿಗೆ ಬೆಂಕಿ ಇಟ್ಟು ಹತ್ಯೆ ಮಾಡಿದ್ದಾರೆ.

ಗೌರಮ್ಮನವರ ಮೃತದೇಹ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿದೆ. ಆಕೆ ಸಾಯುವುದಕ್ಕೂ ಮೊದಲು ಪೊಲೀಸರು ಹೇಳಿಕೆಯನ್ನು ಪಡೆದಿದ್ದು, ತನಿಖೆ ಪ್ರಾರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net