ಪ್ರತಿದಿನ 10 ಸಾವಿರ ಆಹಾರ​ ಕಿಟ್​ ವಿತರಿಸುತ್ತಿದ್ದೇನೆ ಎಂದಿದ್ರು ರೇಣುಕಾಚಾರ್ಯ; ಆದ್ರೆ ಕೋಪಗೊಂಡ ಮಾಜಿ ಶಾಸಕ ಮಾಡಿದ್ದೇನು?

Renukacharya
Published on

ದಾವಣಗೆರೆ: ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರಿಗೆ ಮಾಜಿ ಶಾಸಕ ಶಾಂತನಗೌಡ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇವರಿಬ್ಬರೂ ಫೋನ್​ನಲ್ಲೇ ಕಿತ್ತಾಡಿಕೊಂಡಿದ್ದಾರೆ ಎನ್ನಲಾಗಿದೆ.

ತಾವು ಪ್ರತಿನಿತ್ಯ 10,000 ಆಹಾರ ಕಿಟ್​ ವಿತರಣೆ ಮಾಡುತ್ತಿರುವುದಾಗಿ ರೇಣುಕಾಚಾರ್ಯ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಆದರೆ ಅದು ಸುಳ್ಳು ಎಂಬುದು ಶಾಂತನಗೌಡ ಅವರ ವಾದ. ರೇಣುಕಾಚಾರ್ಯ ಅವರು ಪ್ರತಿದಿನ 10,000 ಆಹಾರ ಕಿಟ್​​ಗಳನ್ನು ವಿತರಣೆ ಮಾಡುತ್ತಿದ್ದಾರಾ? ಎಂಬುದನ್ನು ವಿಚಾರಣೆ ಮಾಡಲು ಶಾಂತನಗೌಡ ಅವರು ಹೊನ್ನಾಳಿಯ ತಹಸೀಲ್ದಾರ್​ ಕಚೇರಿಗೆ ಹೋಗಿದ್ದರು.

ಆಹಾರ ಕಿಟ್​ ವಿತರಣೆಗೆ ಸಂಬಂಧಪಟ್ಟ ದಾಖಲೆ ತೋರಿಸಿ ಎಂದು ಆಗ್ರಹಿಸಿದ್ದಲ್ಲದೆ, ರೇಣುಕಾಚಾರ್ಯ ಸುಳ್ಳು ಹೇಳಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಅಷ್ಟೇ ಅಲ್ಲದೆ, ರೇಣುಕಾಚಾರ್ಯ ಅವರಿಗೆ ಕರೆ ಮಾಡಿ, ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಕರೊನಾ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದಿದ್ದಾರೆ.

ಅದಕ್ಕೆ ಉತ್ತರಿಸಿದ ರೇಣುಕಾಚಾರ್ಯ, ನಾನು ವೈಯಕ್ತಿಕವಾಗಿ ಕಿಟ್​ ನೀಡಲಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net