

ಬೆಂಗಳೂರು: ರಾಜ್ಯದಲ್ಲಿ ಮಳೆಯ ಗಂಭೀರ ಕೊರತೆ ಹಾಗೂ ಬರ ಘೊಷಣೆ ಬಗ್ಗೆ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದ್ದು, ನೈಜ ಪರಿಸ್ಥಿತಿಯ ಇನ್ನೊಂದು ವರದಿ ಕೈಸೇರಿದ ಬಳಿಕ ಮುಂದಿನ ವಾರ ಬರ ತಾಲೂಕು ಘೋಷಣೆ ಕುರಿತು ಆದೇಶ ಹೊರಡಿಸಲು ಸರ್ಕಾರ ನಿರ್ಧರಿಸಿದೆ.
ಆಗಸ್ಟ್ 4ನೇ ವಾರದಲ್ಲಿ ಸರ್ಕಾರದ ಕೈ ಸೇರಿದ್ದ ವರದಿಯಲ್ಲಿ ಕೇಂದ್ರ ಸರ್ಕಾರದ ನಿಯಮಾವಳಿ ಪ್ರಕಾರವೇ 62 ತಾಲೂಕುಗಳು ಬರಪೀಡಿತ ಎಂದು ಸ್ಪಷ್ಟವಾಗಿತ್ತು. ಆದರೆ, ಈ ತಾಲೂಕುಗಳನ್ನು ಬರಪೀ ಡಿತ ಎಂದು ಘೋಷಿಸಿದರೆ ಉಳಿದ ತಾಲೂಕಿನವರು, ಸ್ವಪ ಕ್ಷೀಯ ಶಾಸಕರು ಒತ್ತಡ ಹೇರುತ್ತಾರೆ ಎಂಬ ಅಂದಾಜು ಹಾಗೂ ಬರ ನಿರ್ವಹಣೆಗೆ ಹಣ ಹೊಂದಿ ಸಬೇಕಾದ ಕಾರಣಕ್ಕೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ತೀರ್ವನವನ್ನು ಒಂದು ವಾರ ಮುಂದೂಡಲಾಗಿದೆ. ಕೇಂದ್ರ ಸರ್ಕಾರದ ವಿರುದ್ಧ ಸಂಪುಟ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಕೇಂದ್ರದ ಪರಿಷ್ಕೃತ ಮಾರ್ಗಸೂಚಿ ಬದಲಾವಣೆಯಾಗಿದ್ದರಿಂದ ಬರ ತಾಲೂಕುಗಳ ಘೋಷಣೆಗೆ ಅಡ್ಡಿಯಾಗಿದೆ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ. ಶೇ.60 ಮಳೆ ಕೊರತೆ, ಮೂರು ವಾರ ಮಳೆಯಾಗಿರಬಾರದು ಅಥವಾ ಶುಷ್ಕ ವಾತಾವರಣ ಇರಬೇಕೆಂಬ ನಿಯಮ ಸರಿಯಲ್ಲ.
ಇದೇ ವಿಚಾರವನ್ನು ಕೇಂದ್ರ ಸರ್ಕಾರದ ಗಮನಕ್ಕೂ ತರಲಾಗಿದೆ ಎಂದು ಸಭೆಯಲ್ಲಿ ವಿವರಿಸಲಾಯಿತು. 134 ತಾಲೂಕುಗಳಲ್ಲಿ ಕೇಂದ್ರದ ಮಾನದಂಡದ ಪ್ರಕಾರ ಸಮೀಕ್ಷೆಗೆ ಸೂಚನೆ ನೀಡಲಾಗಿದೆ. ಮುಂದಿನ ವಾರದಲ್ಲಿ ವರದಿ ಬರಲಿದೆ. ತಕ್ಷಣವೇ ಸಂಪುಟ ಸಮಿತಿ ತನ್ನ ಶಿಫಾರಸನ್ನು ಸಂಪುಟ ಸಭೆ ಮುಂದಿಡಲಿದೆ ಎಂದು ಸಭೆಯಲ್ಲಿ ಕಂದಾಯ ಸಚಿವರು ಸಚಿವರು ವಿವರಿಸಿದ್ದಾರೆ.
ಬರದ ಛಾಯೆ ಇರುವುದರಿಂದ ಕೃಷಿಗೆ ಸಮಸ್ಯೆಯಾಗಿದೆ. ಒಂದೊಮ್ಮೆ ಮುಂದೆ ಮಳೆ ಬಂದರೂ ರೈತರಿಗೆ ಬೆಳೆ ಕೈ ಹಿಡಿಯುವುದಿಲ್ಲ. ಇನ್ನು ಮೇವಿನ ಕೊರತೆಯಾಗಿಲ್ಲ. ಆದರೂ ಮುಂಜಾಗ್ರತಾ ಕ್ರಮಕೈಗೊಳ್ಳಬೇಕಿದೆ ಎಂಬ ಮಾತಿಗೆ ಹಲವು ಸಚಿವರು ದನಿ ಗೂಡಿಸಿದರು. ರೈತರಿಗೆ ಪರಿಹಾರ ಕೊಡಬೇಕಾಗುತ್ತದೆ, ಇದಕ್ಕೊಂದು ನಿರ್ಧಾರ ಮಾಡಬೇಕಾಗುತ್ತದೆ ಎಂದು ಅಭಿಪ್ರಾಯ ನೀಡಿದ್ದಾರೆ. ಸಂಪುಟ ಸಭೆ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ್, ಬರ ಕುರಿತು ವಿಸõತವಾಗಿ ಚರ್ಚೆ ನಡೆದಿದೆ. ಕ್ಷೇತ್ರವಾರು ಇನ್ನೊಂದು ವರದಿ ಬರುವುದಿದೆ. ಅದು ಬಂದ ಕೂಡಲೇ ಬರ ಘೋಷಣೆ ಮಾಡಲಾಗುತ್ತದೆ. ಕೇಂದ್ರ ಸರ್ಕಾರದ ಬರ ಮಾರ್ಗಸೂಚಿಯೇ ಸರಿ ಇಲ್ಲ. ಮುಖ್ಯಮಂತ್ರಿಯವರು ಈಗಾಗಲೇ ಪತ್ರ ಬರೆದು ಮಾರ್ಗಸೂಚಿ ವೈಜ್ಞಾನಿಕವಾಗಿಲ್ಲ ಎಂದು ತಿಳಿಸುವ ಪ್ರಯತ್ನ ಮಾಡಿದ್ದಾರೆ. ಕೇಂದ್ರದವರಿಗೆ ಮನವರಿಕೆಯಾದಂತಿದ್ದು ನಿಯಮಾವಳಿ ಬದಲಾವಣೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
ಶಾಲಾ ಮಕ್ಕಳಿಗೆ ಸರ್ಕಾರ ಒದಗಿಸಿದ ಸಮವಸ್ತ್ರ ಶೇ. 90ರಷ್ಟು ಕಳಪೆಯಾಗಿದ್ದು, ಬಟ್ಟೆ ಖರೀದಿಸಿದ ಅಧಿಕಾರಿ, ಸರಬರಾಜು ಮಾಡಿದವರ ವಿರುದ್ಧ ಇಲಾಖಾ ತನಿಖೆ ನಡೆಸಿ ಕ್ರಿಮಿನಲ್ ಹಾಗೂ ಸಿವಿಲ್ ದಾವೆ ಹೂಡಲಾಗುತ್ತದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ಹೇಳಿ ದರು. ಈ ವಿಚಾರವಾಗಿ ಸಂಪುಟ ಸಭೆಯಲ್ಲಿ ನಡೆದ ಚರ್ಚೆಯ ಬಗ್ಗೆ ವಿವರಣೆ ನೀಡಿದ ಅವರು, ಶಾಲಾ ಸಮವಸ್ತ್ರ ಸಂಬಂಧ 2021-22, 2022-23ನೇ ಸಾಲಿನಲ್ಲಿ ಕೈಮಗ್ಗ ಅಭಿವೃದ್ಧಿ ನಿಗಮ, ಜವಳಿ ಅಭಿವೃದ್ಧಿ ನಿಗಮಕ್ಕೆ ನೀಡಬೇಕಾದ ಬಾಕಿ ಬಗ್ಗೆ ಚರ್ಚೆಯಾಯಿತು. ಹಣ ಬಿಡುಗಡೆಯಾಗದೇ ಇರುವುದರಿಂದ ನೇಕಾರರಿಗೆ ಸಮಸ್ಯೆಯಾಗುತ್ತಿದ್ದು, ತಕ್ಷಣವೇ 14.48 ಕೋಟಿ ಬಿಡುಗಡೆ ಮಾಡಲು ಸೂಚಿಸಲಾಯಿತು. ಜತೆಗೆ
ಕಳಪೆ ಗುಣಮಟ್ಟದ ಬಟ್ಟೆ ಪೂರೈಸಿದ ವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು.
ಹಿಂದುಳಿದ ವರ್ಗಗಳಿಗೆ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲು ನ್ಯಾ. ಭಕ್ತ ವತ್ಸಲ ಸಮಿತಿಯ ದ್ವಿತೀಯ ಪೂರಕ ವಿಷಯ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ಆದರೆ ಇದರ ಬಗ್ಗೆ ಇನ್ನಷ್ಟು ಚರ್ಚೆಯಾಗಬೇಕು ಹಾಗೂ ತೀರ್ಮಾನ ಕೈಗೊಳ್ಳಲು ಇದು ಸೂಕ್ತಕಾಲವಲ್ಲ ಎಂದು ಅಭಿಪ್ರಾಯಕ್ಕೆ ಬಂದು ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ ಎನ್ನಲಾಗಿದೆ.