ಹಾಲಿನ ದರ ಏರಿಕೆ ಬೆನ್ನಲ್ಲೇ ರಾಜ್ಯದ ಜನತೆಗೆ ಮತ್ತೊಂದು ಹೊರೆ: KSRTC ಟಿಕೆಟ್ ₹9, BMTC ಸ್ಟೇಜ್‌ಗೆ ₹10 ಜಂಪ್! Bus Ticket Fare Hike

Bus Ticket Fare Hike
ಕೆಎಸ್​ಆರ್​ಟಿಸಿ ಮತ್ತು ಬಿಎಂಟಿಸಿ
Published on: 

ಬೆಂಗಳೂರು: ರಾಜ್ಯದಲ್ಲಿ ದಿನನಿತ್ಯ ಕೆಎಸ್‌ಆರ್‌ಟಿಸಿ ಸೇರಿದಂತೆ ವಿವಿಧ ಸರ್ಕಾರಿ ಬಸ್‌ಗಳನ್ನು ನೆಚ್ಚಿಕೊಂಡಿರುವ ಲಕ್ಷಾಂತರ ಪ್ರಯಾಣಿಕರ ಜೇಬಿಗೆ ಇದೀಗ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ. ಮೊನ್ನೆಯಷ್ಟೇ ಹಾಲಿನ ದರ ಏರಿಕೆ ಮಾಡಿದ್ದ ರಾಜ್ಯ ಸರ್ಕಾರ ಇದೀಗ ನಾಲ್ಕೂ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರವನ್ನು ( Bus Ticket Fare Hike ) ಪರಿಷ್ಕರಿಸಿದೆ. ಕೆಎಸ್​ಆರ್​ಟಿಸಿ ಬಸ್ ಪ್ರಯಾಣ ದರದಲ್ಲಿ ಪ್ರತಿ ಟಿಕೆಟ್‌ಗೆ ಗರಿಷ್ಠ 9 ರೂಪಾಯಿ ಹೆಚ್ಚಳ ಮಾಡಲಾಗಿದೆ.

ಬಿಎಂಟಿಸಿ ಬಸ್​ನಲ್ಲಿ ಈ ಹಿಂದೆ ಸ್ಟೇಜ್​ಗೆ 6 ರೂಪಾಯಿ ಇತ್ತು. ಇದೀಗ ಆ ಬೆಲೆಯನ್ನು 10 ರೂ. ಏರಿಸಲಾಗಿದೆ. ಅದೇ ರೀತಿ ಕೊನೆಯ ಸ್ಟೇಜ್​ಗೆ ಇದ್ದ ಗರಿಷ್ಟ 35 ರೂ. ಟಿಕೆಟ್​ ಬೆಲೆಯನ್ನು 45 ರೂ.ಗೆ ಏರಿಸಲಾಗಿದೆ. ವಾಯುವಜ್ರ ಬಸ್​ನಲ್ಲಿ ಕೊನೆಯ ಸ್ಟೇಜ್​ನ ಬೆಲೆಯನ್ನು 75 ರಿಂದ 90 ರೂ.ಗೆ ಏರಿಸಲಾಗಿದ್ದು, ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ಬೆಲೆ ಜಾರಿಗೆ ಬರಲಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್​ ಘೋಷಣೆ ಮಾಡಿದ್ದಾರೆ.

ಕೆಎಸ್‌ಆರ್‌ಟಿಸಿ (KSRTC) ಪ್ರಯಾಣ ದರ ವಿವರಗಳು

WEB
WEB

ಬಿಎಂಟಿಸಿ (BMTC) ಸಾಮಾನ್ಯ ಸಾರಿಗೆ ಸೇವೆಗಳ ದರ ವಿವರಗಳು

WEB

ಬಿಎಂಟಿಸಿ (BMTC) ವಜ್ರ (ಹವಾ ನಿಯಂತ್ರಿತ) ಸೇವೆಗಳ ದರ ವಿವರಗಳು

WEB

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಬೈರತಿ ಸುರೇಶ್ ಅವರು ಸಂಸ್ಥೆಯ ಸುಗಮ ಕಾರ್ಯಾಚರಣೆ ಹಾಗೂ ಲಕ್ಷಾಂತರ ಉದ್ಯೋಗಿಗಳ ಹಿತದೃಷ್ಟಿಯಿಂದ ಈ ದರ ಏರಿಕೆ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು ಎಂದು ಸಚಿವರು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

Also Read
ನಕಲಿ ಖಾಕಿ, ಡಮ್ಮಿ ಪಿಸ್ತೂಲ್, ಕೋಟ್ಯಂತರ ಕಳ್ಳನೋಟು: ಹೈದರಾಬಾದ್‌ನಲ್ಲಿ ಖತರ್ನಾಕ್ ಗ್ಯಾಂಗ್ ಅಂದರ್‌ | Hyderabad fake currency
Bus Ticket Fare Hike

ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ 'ಶಕ್ತಿ' ಯೋಜನೆಯಿಂದಾಗಿಯೇ ಸಾರಿಗೆ ನಿಗಮಗಳು ನಷ್ಟದ ಸುಳಿಗೆ ಸಿಲುಕಿವೆ ಎಂಬ ಸಾರ್ವಜನಿಕ ಆರೋಪಗಳನ್ನು ಸಚಿವರು ಇದೇ ಸಂದರ್ಭದಲ್ಲಿ ಕಡ್ಡಾಯವಾಗಿ ತಳ್ಳಿಹಾಕಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಂಕಿ-ಅಂಶಗಳನ್ನು ತೆರೆದಿಟ್ಟ ಸಚಿವರು, "ಪ್ರಸ್ತುತ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ (KSRTC, BMTC, NWKRTC, KKRTC) ಒಟ್ಟು 1,03,600 ಸಿಬ್ಬಂದಿಗಳು ಹಗಲಿರುಳು ಶ್ರಮಿಸುತ್ತಿದ್ದು, ಸುಮಾರು 26,125 ಬಸ್‌ಗಳು ರಸ್ತೆಯಲ್ಲಿ ಸಂಚರಿಸುತ್ತಿವೆ. ಶಕ್ತಿ ಯೋಜನೆಯಡಿ ಪ್ರತಿದಿನ ಅಂದಾಜು 74.4 ಲಕ್ಷ ಮಹಿಳೆಯರು ಸಂಪೂರ್ಣ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಆದರೆ, ಈ ಯೋಜನೆಯ ಸಾರಿಗೆ ವೆಚ್ಚದ ಪ್ರತಿಯೊಂದು ಪೈಸೆಯನ್ನು ರಾಜ್ಯ ಸರ್ಕಾರವೇ ಸಕಾಲದಲ್ಲಿ ನಿಗಮಗಳಿಗೆ ನೇರವಾಗಿ ಭರಿಸುತ್ತಿದೆ. ಹೀಗಾಗಿ 'ಶಕ್ತಿ' ಯೋಜನೆಯಿಂದ ಸಂಸ್ಥೆಗೆ ಯಾವುದೇ ರೀತಿಯ ಆರ್ಥಿಕ ನಷ್ಟ ಸಂಭವಿಸಿಲ್ಲ" ಎಂದು ಸಮರ್ಥನೆ ನೀಡಿದರು.

ಬಸ್ ದರ ಹೆಚ್ಚಳಕ್ಕೆ ಕಾರಣವಾದ ತಾಂತ್ರಿಕ ಹಾಗೂ ಆರ್ಥಿಕ ಮುಗ್ಗಟ್ಟುಗಳನ್ನು ವಿವರಿಸಿದ ಸಚಿವರು, ಕಳೆದ ಒಂದು ದಶಕದಲ್ಲಿ (2025ರ ಪರಿಷ್ಕರಣೆಯನ್ನು ಹೊರತುಪಡಿಸಿ) ಸರ್ಕಾರಿ ಬಸ್ ಪ್ರಯಾಣ ದರಗಳನ್ನು ಗಮನಾರ್ಹವಾಗಿ ಹೆಚ್ಚಿಸಿರಲಿಲ್ಲ. ಈ ಮಧ್ಯೆ ಮಾರುಕಟ್ಟೆಯಲ್ಲಿ ಡೀಸೆಲ್ ದರಗಳು, ಬಸ್ ಟೈರ್‌ಗಳ ಬೆಲೆ ಹಾಗೂ ವಾಹನಗಳ ಇತರ ಬಿಡಿಭಾಗಗಳ ನಿರ್ವಹಣಾ ವೆಚ್ಚ ಅಪಾರ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರ ಜತೆಗೆ ಸಾರಿಗೆ ನೌಕರರ ವೇತನದಲ್ಲೂ ಹೆಚ್ಚಳ ಮಾಡಲಾಗಿದೆ. 2021ರಲ್ಲೇ ಶ್ರೀನಿವಾಸ್ ಮೂರ್ತಿ ಸಮಿತಿಯು ಕಾಲಕಾಲಕ್ಕೆ ಸಾರಿಗೆ ಸಂಸ್ಥೆಗಳ ದರ ಪರಿಷ್ಕರಣೆ ಮಾಡುವಂತೆ ಶಿಫಾರಸು ಮಾಡಿತ್ತು. ಇತ್ತೀಚೆಗೆ ಐಎಎಸ್ ಅಧಿಕಾರಿ ಅತುಲ್ ತಿವಾರಿ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿಯು ಸಹ ನಿಗಮಗಳ ಆರ್ಥಿಕ ಸ್ಥಿತಿಯನ್ನು ಅಭ್ಯಾಸ ಮಾಡಿ ಸಲ್ಲಿಸಿದ ವರದಿಯನ್ವಯ ಸಂಸ್ಥೆಗೆ ಸದ್ಯ ದರ ಪರಿಷ್ಕರಣೆಗೆ ಹಸಿರು ನಿಶಾನೆ ನೀಡಲಾಗಿದೆ ಎಂದು ಸಚಿವರು ಕಾರಣ ನೀಡಿದರು.

ನಾಲ್ಕೂ ಸರ್ಕಾರಿ ಸಾರಿಗೆ ಸಂಸ್ಥೆಗಳು ಎದುರಿಸುತ್ತಿರುವ ಬೃಹತ್ ಪ್ರಮಾಣದ ಸಾಲದ ಹೊರೆ ಮತ್ತು ಹಣಕಾಸಿನ ಬಿಕ್ಕಟ್ಟನ್ನು ಸಚಿವರು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದರು. ಪ್ರಸ್ತುತ ಸಾರಿಗೆ ಸಂಸ್ಥೆಗಳು ನೌಕರರ ಭವಿಷ್ಯ ನಿಧಿಗೆ (PF) 2,916 ಕೋಟಿ ರೂಪಾಯಿ, ನಿವೃತ್ತ ಹೊಂದಿದ ಸಿಬ್ಬಂದಿಗಳಿಗೆ ನೀಡಬೇಕಾದ ಬಾಕಿ ಹಣ 603 ಕೋಟಿ ರೂಪಾಯಿ, ವೇತನ ಪರಿಷ್ಕರಣೆಯ ಪಾವತಿಗೆ 664 ಕೋಟಿ ರೂಪಾಯಿ ಹಾಗೂ ಸಿಬ್ಬಂದಿಗಳ ಇತರೆ ಆಡಳಿತಾತ್ಮಕ ವೆಚ್ಚಗಳಿಗಾಗಿ 356 ಕೋಟಿ ರೂಪಾಯಿಗಳನ್ನು ನೀಡಬೇಕಾದ ಭಾರೀ ಬಾಕಿ ಉಳಿಸಿಕೊಂಡಿವೆ. ಈ ಎಲ್ಲಾ ಹಳೆಯ ಸಾಲಗಳನ್ನು ತೀರಿಸಲು ಮತ್ತು ನಿವೃತ್ತ ನೌಕರರಿಗೆ ನ್ಯಾಯಯುತ ಹಣವನ್ನು ಹಸ್ತಾಂತರಿಸಲು ಸಂಸ್ಥೆಗಳಿಗೆ ತಕ್ಷಣದ ಹಣಕಾಸಿನ ನೆರವು ತುರ್ತಾಗಿ ಬೇಕಾಗಿದ್ದು, ದರ ಏರಿಕೆಯೊಂದೇ ಇದಕ್ಕಿರುವ ಪರಿಹಾರವಾಗಿದೆ ಎಂದು ಪ್ರತಿಪಾದಿಸಿದರು.

Also Read
ದೀಪಾವಳಿಯಂದೇ ಎರಡು ಅಪರೂಪದ ರಾಜಯೋಗ: ಈ 4 ರಾಶಿಯವರ ಬಾಳಲ್ಲಿ ಹಣ, ಯಶಸ್ಸಿನ ಮಳೆ! ನಿಮ್ದೂ ಇದೇ ರಾಶಿನಾ? Astrology
Bus Ticket Fare Hike

ಅಂತಿಮವಾಗಿ ಸಾರಿಗೆ ನಿಗಮಗಳನ್ನು ಆರ್ಥಿಕ ಚೇತರಿಕೆಯತ್ತ ಮುನ್ನಡೆಸಲು ಹಾಗೂ ನೌಕರರ ಹಿತರಕ್ಷಣೆಯ ಹಿತದೃಷ್ಟಿಯಿಂದ ಬಸ್ ಟಿಕೆಟ್ ದರದಲ್ಲಿ ಪ್ರತಿ ಟಿಕೆಟ್‌ಗೆ ರೂ. 9 ಹೆಚ್ಚಳ ಮಾಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಈ ಹೊಸ ಪ್ರಯಾಣ ದರವು ಇಂದು ಮಧ್ಯರಾತ್ರಿಯಿಂದಲೇ ಅನ್ವಯವಾಗಲಿದ್ದು, ಕರ್ನಾಟಕದಾದ್ಯಂತ ಸಂಚರಿಸುವ ಎಲ್ಲಾ ಸರ್ಕಾರಿ ಬಸ್‌ಗಳಿಗೆ ಅನ್ವಯಿಸಲಿದೆ. ಆರ್ಥಿಕ ಚೇತರಿಕೆಗೆ ಇದು ಅನಿವಾರ್ಯ ಹೆಜ್ಜೆಯಾಗಿದ್ದರೂ, ಈಗಾಗಲೇ ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಮತ್ತು ಮಧ್ಯಮ ವರ್ಗದ ಪ್ರಯಾಣಿಕರಿಗೆ ದಿನನಿತ್ಯದ ಸಂಚಾರದ ವೆಚ್ಚ ಮತ್ತಷ್ಟು ಹೆಚ್ಚಾಗುವುದಂತೂ ಖಚಿತವಾಗಿದೆ.