ಶಿವರಾತ್ರಿ ಜಾಗರಣೆಯಲ್ಲಿ ಹಣಕಾಸು ವಿಚಾರಕ್ಕೆ ಶುರುವಾದ ಜಗಳ ಜೋಡಿ ಕೊಲೆಯಲ್ಲಿ ಅಂತ್ಯವಾಯ್ತು...

Murder 22 Feb 20
Published on

ಮಂಡ್ಯ: ಶಿವರಾತ್ರಿ ಹಬ್ಬದ ಜಾಗರಣೆಯಲ್ಲಿ ಜೋಡಿ ಕೊಲೆ ನಡೆದ ಘಟನೆ ಪಾಂಡವಪುರ ತಾಲೂಕಿನ ಮಹದೇಶ್ವರಪುರ ಗ್ರಾಮದಲ್ಲಿ ನಡೆದಿದೆ.

ಕೋಳಿ ಸುರೇಶ ಹಾಗೂ ನಾಗರಾಜು ಕೊಲೆಯಾದವರು. ಅದೇ ಗ್ರಾಮ ರೌಡಿ ಶೀಟರ್​ ಕೃಷ್ಣ ಮತ್ತು ಸುರೇಶ್​ ಈ ಹತ್ಯೆ ಮಾಡಿದ್ದಾರೆ. ಇವರಲ್ಲಿ ಕೃಷ್ಣನ್ನು ಪೊಲೀಸರು ಬಂಧಿಸಿದ್ದಾರೆ.

ಹತ್ಯೆಗೆ ಯಾವುದೋ ಒಂದು ಪ್ರೇಮ ಪ್ರಕರಣ ಮತ್ತು ಹಣಕಾಸು ವ್ಯವಹಾರ ಕಾರಣ ಎನ್ನಲಾಗಿದೆ. ಮೊದಲು ಮಾತಿನಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯಕಂಡಿದೆ.

ಹತ್ಯೆಗೀಡಾದ ಸುರೇಶ್​ ಮೈಸೂರಿನಲ್ಲಿ ಆಟೋ ಓಡಿಸುತ್ತಿದ್ದರೆ ನಾಗರಾಜು ಜೆಸಿಬಿ ಯಂತ್ರ ಇಟ್ಟುಕೊಂಡಿದ್ದ. ಪಾಂಡವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net