

ಶಿವಮೊಗ್ಗ: ಒಂಟಿ ಮನೆಯಲ್ಲಿ ವಾಸಿಸುತ್ತಿದ್ದ ವೃದ್ಧ ದಂಪತಿಯನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಸಾಗರ ತಾಲೂಕಿನ ಬ್ಯಾಕೋಡು ಗ್ರಾಮದಲ್ಲಿ ನಡೆದಿದೆ.
ಸುಂದರ್ ಶೇಟ್ (70) ಮತ್ತು ಸುಲೋಚನಾ ಶೇಟ್ ಮೃತರು. ಇಂದು ರಾತ್ರಿ ಒಂಭತ್ತು ಗಂಟೆ ಸುಮಾರಿಗೆ ಇಬ್ಬರನ್ನೂ ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಲಾಗಿದೆ.
ಈ ದಂಪತಿ ಐದು ದಶಕಗಳಿಂದಲೂ ಬಂಗಾರದ ಅಂಗಡಿ ನಡೆಸುತ್ತಿದ್ದರು. ಈಗ ಅಂಗಡಿಗಳನ್ನು ಮಕ್ಕಳಿಗೆ ಬಿಟ್ಟುಕೊಟ್ಟು, ಬ್ಯಾಕೋಡಿನ ಒಂಟಿ ಮನೆಯಲ್ಲಿ ವಾಸಿಸುತ್ತಿದ್ದರು. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ನಡೆದಿದೆ. (ದಿಗ್ವಿಜಯ ನ್ಯೂಸ್)