ಮುದ್ರಾಂಕ ಇಲಾಖೆಯ ನೌಕರರ ಸಮಸ್ಯೆ ನಿಮಗೆ ಕಾಣಿಸುತ್ತಿಲ್ಲವೇ?; ಸರ್ಕಾರದ ವಿರುದ್ಧ ಆರ್​.ಅಶೋಕ ಕಿಡಿ |Stamp Department

dk - 2025-02-23T192041.441
Published on

Stamp Department: ಕಾಂಗ್ರೆಸ್‌ ಸರ್ಕಾರದ ದುರಾಡಳಿತಕ್ಕೆ ಕೊನೆ ಎಂಬುದಿಲ್ಲ. ದಿನನಿತ್ಯವೂ ಸಿದ್ದರಾಮಯ್ಯ ಸರ್ಕಾರ ಮುಷ್ಕರ ಎದುರಿಸುತ್ತಿದೆ. ದಿನಬೆಳಗಾದರೆ ಒಂದೊಂದು ಇಲಾಖೆ ಸರ್ಕಾರದ ವಿರುದ್ಧ ಧರಣಿ ನಡೆಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್​.ಅಶೋಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಕುರಿತು ತಮ್ಮ ಎಕ್ಸ್​ ಖಾತೆ ಹಂಚಿಕೊಂಡಿರುವ ಅಶೋಕ, '' ಇದೀಗ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ನೌಕರರ ಸಂಘ ಆಸ್ತಿ ದಸ್ತಾವೇಜು ನೋಂದಣಿ ಸೇರಿದಂತೆ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದೆ. ಸರ್ಕಾರ ತನ್ನ ಬೊಕ್ಕಸ ತುಂಬಿಸಿಕೊಳ್ಳಲು ಮುದ್ರಾಂಕ ಶುಲ್ಕವನ್ನು ಹೆಚ್ಚಿಸಿ ಜನರ ಮೇಲೆ ಹೊರೆ ಹೊರಿಸಿದ್ದು ಮಾತ್ರವಲ್ಲದೆ ಮುದ್ರಾಂಕ ಇಲಾಖೆಯ ನೌಕರರ ಮೇಲೆ ಅನಗತ್ಯ ಕಿರುಕುಳ ನೀಡುತ್ತಿದೆ ಎಂದು ಕಿಡಿಕಾರಿದ್ದಾರೆ.

ನೋಂದಣಿ ಮತ್ತು ಮುದ್ರಾಂಕ ಇಲಾಖೆ ನೌಕರರು ಒಂದೊಮ್ಮೆ ತಮ್ಮ ಸೇವೆಯನ್ನು ಸ್ಥಗಿತಗೊಳಿಸಿದ್ದೇ ಆದಲ್ಲಿ ಜನರು ಹೈರಾಣಾಗಲಿದ್ದಾರೆ. ದೂರದೂರುಗಳಿಂದ ಸರ್ಕಾರಿ ಸೇವೆಗಳಿಗೆಂದೇ ಬರುವ ಜನಸಾಮಾನ್ಯರು ಅಡಕತ್ತರಿಗೆ ಸಿಲುಕಲಿದ್ದಾರೆ, ಕಾಂಗ್ರೆಸ್ ಸರ್ಕಾರದ ನಿಷ್ಕ್ರಿಯತೆಗೆ ಜನಸಮಾನ್ಯರು ಪರಿತಪಿಸುತ್ತಿದ್ದಾರೆ ಎಂದರು.

ಸಿಎಂ ಸಿದ್ದರಾಮಯ್ಯ ಅವರೇ, ಮುದ್ರಾಂಕ ಶುಲ್ಕ ಹೆಚ್ಚಿಸುವ ನಿಮಗೆ ಮುದ್ರಾಂಕ ಇಲಾಖೆಯ ನೌಕರರ ಸಮಸ್ಯೆ ಏಕೆ ಕಾಣಿಸುತ್ತಿಲ್ಲ? ಎಂದು ಹರಿಹಾಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net