ಅಧಿಕಾರಕ್ಕಾಗಿ ನನ್ನ ಮೇಲೆ ಒತ್ತಡ ಹಾಕಬೇಡಿ: ಬಿ.ಎಸ್​. ಯಡಿಯೂರಪ್ಪ

BSY
Published on

ಬೆಂಗಳೂರು: ಸಚಿವ ಸ್ಥಾನಕ್ಕಾಗಿ ದಿನ ನಿತ್ಯ ತಮ್ಮ ಮನೆ ಎಡತಾಕುತ್ತಿರುವ ಶಾಸಕರು ಮಾಜಿ ಸಚಿವರಿಗೆ ಮಾಜಿ ಸಿಎಂ ಯಡಿಯೂರಪ್ಪ ಕಿವಿ ಮಾತು ಹೇಳಿ ಕಳುಹಿಸುತ್ತಿದ್ದಾರೆ. ‘ಈಗ ನನ್ನ ಬಳಿ ಅಧಿಕಾರ ಇಲ್ಲ. ನನ್ನ ಬಳಿ ಬಂದು ನಿಲ್ಲುವುದರಿಂದ ಯಾವುದೇ ಪ್ರಯೋಜನವಿಲ್ಲ. ಮುಖ್ಯಮಂತ್ರಿಗಳು ಹಾಗೂ ಪಕ್ಷದ ನಾಯಕರ ಬಳಿ ಹೋಗಿ ಮಾತನಾಡಿ’ ಎಂದು ಬಿಎಸ್​ವೈ ಸಲಹೆ ನೀಡುತ್ತಿದ್ದಾರೆ.

‘ನೀವು ಬಿಟ್ಟರೆ ನಮ್ಮ ಪರವಾಗಿ ಇನ್ಯಾರು ಮಾತನಾಡುತ್ತಾರೆ? ನೀವು ಒತ್ತಡ ಹಾಕಿದರೆ ನಮ್ಮನ್ನೆಲ್ಲ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ’ ಎಂಬ ಶಾಸಕರ ಅಹವಾಲಿಗೂ ಬಿಎಸ್​ವೈ ‘ನಾನೀಗ ಸಿಎಂ ಅಲ್ಲ. ನನ್ನ ಬಳಿ ಅಧಿಕಾರವಿಲ್ಲ’ ಎಂದು ಮಾರ್ವಿುಕವಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಲಸೆ ಬಂದ 17 ಶಾಸಕರಿಗೆ ನೂತನ ಸಚಿವ ಸಂಪುಟದಲ್ಲಿ ಸ್ಥಾನ ನೀಡುವುದು ಸಿಎಂ ಬೊಮ್ಮಾಯಿ ಅವರಿಗೆ ಬಿಟ್ಟ ವಿಚಾರ.

| ಬಿ.ಎಸ್.ಯಡಿಯೂರಪ್ಪ ಮಾಜಿ ಸಿಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net