

TV Screen : ಇತ್ತೀಚಿನ ದಿನಗಳಲ್ಲಿ OTT ಫ್ಲಾಟ್ ಫಾರ್ಮ್ಗಳ ಕಾರಣದಿಂದಾಗಿಯೇ ಅಧಿಕ ಜನರು ಸಿನಿಮಾ ಹಾಲ್ಗೆ ಹೋಗಿ ಚಿತ್ರ ವಿಕ್ಷೀಸುವ ಬದಲು ಮನೆಯಲ್ಲಿ ಸ್ಮಾರ್ಟ್ ಟಿವಿಗಳಲ್ಲಿ ಸಿನಿಮಾ ಮತ್ತು ವೆಬ್ಸರಣಿಗಳನ್ನು ನೋಡಿ ಆನಂದಿಸುತ್ತಿದ್ದಾರೆ. ಹೀಗಾಗಿ, ಸ್ಮಾರ್ಟ್ ಟಿವಿಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚುತ್ತಿದೆ. ದೊಡ್ಡ ಪರದೆಯ ಸ್ಮಾರ್ಟ್ ಟಿವಿಗಳು ಉತ್ತಮ ಮನರಂಜನಾ ಅನುಭವವನ್ನು ನೀಡುತ್ತವೆ. ಆದರೆ ಅವುಗಳಿಗೆ ಎಚ್ಚರಿಕೆಯ ನಿರ್ವಹಣೆಯೂ ಅಗತ್ಯವಾಗಿರುತ್ತದೆ. ಪರದೆಯನ್ನು ಸ್ವಚ್ಛಗೊಳಿಸುವಾಗ ಹಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ!.
ಸ್ಮಾಟ್ ಟಿವಿ ಅಥವಾ ಇನ್ನಿತರ ಟಿವಿಯನ್ನು ಸ್ವಚ್ಛಗೊಳಿಸಲು ಮೈಕ್ರೋಫೈಬರ್ ಬಟ್ಟೆ ಬಳಸಿ ಕ್ಲೀನ್ ಮಾಡಬೇಕು. ಇದರಿಂದ ಟಿವಿ ಪದರೆಯೂ ಚೆನ್ನಾಗಿ ಸ್ವಚ್ಛವಾಗುತ್ತದೆ. ಅಲ್ಲದೆ, ಗೀರುಗಳ ಭಯವಿರುವುದಿಲ್ಲ. ಅನೇಕ ಜನರು ಟವೆಲ್ ನಂತಹ ದಪ್ಪ ಬಟ್ಟೆಯನ್ನು ಬಳಸುತ್ತಾರೆ, ಇದು ಪರದೆಯನ್ನು ಹಾನಿಗೊಳಿಸುತ್ತದೆ. ಆದ್ದರಿಂದ, ಈ ತಪ್ಪನ್ನು ತಪ್ಪಿಸಬೇಕು. ಟಿವಿ ಆನ್ ಆಗಿದ್ದರೆ, ಒದ್ದೆಯಾದ ಬಟ್ಟೆಯ ಬಳಕೆಯನ್ನು ಸಹ ತಪ್ಪಿಸಬೇಕು.
ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಲವು ರೀತಿಯು ಶುಚಿಗೊಳಿಸುವ ಅನೇಕ ವಸ್ತುಗಳು ಸಿಗುತ್ತದೆ. ಆದರೆ, ಅವುಗಳನ್ನು ಏಚ್ಚರಿಕೆಯಿಂದ ಬಳಸಬೇಕು. ಇಲ್ಲವಾದರೆ ಗೊತ್ತಾಗದಂತೆ ಟಿವಿಗಳು ಹಾನಿಯಾಗಲಿವೆ. ಕೆಲವರು ಹೆಚ್ಚಿನ ಹೊಳಪನ್ನು ಪಡೆಯಲು ಬಲವಾದ ಪರಿಹಾರಗಳನ್ನು ಬಳಸುತ್ತಾರೆ. ಇದು ಪರದೆಯನ್ನು ಹಾನಿಗೊಳಿಸುತ್ತದೆ. ಇದಲ್ಲದೆ, ಸ್ವಚ್ಛಗೊಳಿಸುವಾಗ, ಯಾವುದೇ ರೀತಿಯ ದ್ರಾವಣವನ್ನು ನೇರವಾಗಿ ಪರದೆಯ ಮೇಲೆ ಸುರಿಯಬೇಡಿ. ಇದು ಪರದೆಯ ಮೇಲೆ ಒಂದು ಗುರುತು ಬಿಡಬಹುದು.
ಅನೇಕ ಜನರು ಟಿ.ವಿ ಪರದೆ ಸ್ವಚ್ಛಗೊಳಿಸಲು ಟಿವಿಯ ಮೇಲೆ ಒತ್ತಡ ಹೇರುತ್ತಾರೆ. ಈ ತಪ್ಪನ್ನೂ ಅಪ್ಪಿತಪ್ಪಿಯೂ ಮಾಡಬೇಡಿ. ಒತ್ತಡ ಹೇರುವುದರಿಂದ ಪರದೆಗೆ ಹಾನಿಯಾಗಬಹುದು. ಇದರಿಂದಾಗಿ ಪರದೆ ಮಾತ್ರವಲ್ಲದೆ ಒಳಗಿನ ಭಾಗಗಳೂ ಹಾನಿಗೊಳಗಾಗಬಹುದು. ಹೀಗಾಗಿ ಒತ್ತಡ ಹೇರದೆ ನಿಧಾನವಾಗಿ ಸ್ವಚ್ಛಗೊಳಿಸಿ.(ಏಜೆನ್ಸೀಸ್)