

ನವದೆಹಲಿ: ಸನಾತನ ಧರ್ಮದ ಕುರಿತು ಹೇಳಿಕೆ ನೀಡಿ ತೀವ್ರ ವಿವಾದಕ್ಕೀಡಾಗಿರುವ ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ, ಸಚಿವ ಉದಯನಿಧಿ ಭಾಷಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮೌನ ಮುರಿದಿದ್ದು, ಅವರ ಮಾತನ್ನು ಯಾರೂ ನಂಬಬೇಡಿ ಎಂದಿದೆ.
ಈ ಕುರಿತು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಐಸಿಸಿ ಹಿರಿಯ ನಾಯಕ ಪವನ್ ಖೇರಾ, ಕಾಂಗ್ರೆಸ್ ಪಕ್ಷ ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ. ನಾವು ಸರ್ವಧರ್ಮ ಸಂಭವದಲ್ಲಿ ನಂಬಿಕೆ ಇಡುವವರು ಎಂದಿದ್ದಾರೆ.
ಕಾಂಗ್ರೆಸ್ ಪಕ್ಷವು ಸರ್ವಧರ್ಮ ಸಂಭವದಲ್ಲಿ ಹೆಚ್ಚು ನಂಬಿಕೆ ಇರಿಸಿದೆ. ಯಾರು ಸಹ ಇನ್ನೊಬ್ಬರ ನಂಬಿಕೆಯನ್ನು ಪ್ರಶ್ನಿಸಬಾರದು. ಕಾಂಗ್ರೆಸ್ ಪಕ್ಷ ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ. I.N.D.I.A ಒಕ್ಕೂಟದ ಪ್ರತಿಯೊಬ್ಬ ನಾಯಕರಿಗು ಸಹ ಪ್ರತಿ ಸಮುದಾಯ, ಧರ್ಮ ಹಾಗೂ ಜನರ ನಂಬಿಕೆಗೆ ಹೆಚ್ಚು ಗೌರವ ಕೊಡುತ್ತಾರೆ.
ಸಚಿವ ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆಯನ್ನು ಯಾರು ನಂಬಬೇಡಿ ಎಂದು ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಹಿರಿಯ ನಾಯಕ ಪವನ್ ಖೇರಾ ಸನಾತನ ಹೇಳಿಕೆ ವಿವಾದವಾಗಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.