More

    ಅಪ್ರಾಪ್ತ ವಯಸ್ಕಳ ಹತ್ಯೆ ಪ್ರಕರಣ; ಮರಣದಂಡನೆ ರದ್ದುಪಡಿಸಿದ ಸುಪ್ರೀಂ ಕೋರ್ಟ್​

    ನವದೆಹಲಿ: ಅಪ್ರಾಪ್ತ ವಯಸ್ಕಲ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಗೆ ನೀಡಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಸುಪ್ರೀಂ ಕೋರ್ಟ್​ ಮಂಗಳವಾರ ರದ್ದುಪಡಿಸಿದೆ.

    ಅಪರಾಧಿ ಮುನ್ನಾ ಪಾಂಡೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬಿ.ಆರ್. ಗವಾಯಿ, ಜೆ.ಬಿ. ಪರ್ದಿವಾಲಾ, ಪ್ರಶಾಂತ್​ಕುಮಾರ್​ ಮಿಶ್ರಾ ಅವರಿದ್ದ ತ್ರಿಸದಸ್ಯ ಪೀಠವು ವಿಚಾರಣೆಯಲ್ಲಿ ಗಂಭೀರ ಲೋಪವಾಗಿರುವುದನ್ನು ಗಮನಿಸಿದೆ. ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸುವಂತೆ ಪಟ್ನಾ ಹೈಕೋರ್ಟ್​ಗೆ ವರ್ಗಾಯಿಸಿ ಆದೇಶಿಸಿದೆ.

    2015ರಲ್ಲಿ ಘಟನೆ ನಡೆದಿದ್ದು, ಮುನ್ನಾ ಪಾಂಡೆ ಎಂಬ ವ್ಯಕ್ತಿ ಅಪ್ರಾಪ್ತ ವಯಸ್ಕಳಿಗೆ ಆಮಿಷವೊಡ್ಡಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿದಾಗ ಆಘಾತಕಾರಿ ಸಂಗತಿಯೊಂದು ಗಮನಿಸಿದೆವು.

    ಇದನ್ನೂ ಓದಿ: ನಾನು ಈ ರೀತಿಯ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ; ಟೀಂ ಇಂಡಿಯಾ ನಾಯಕ ಹೀಗಂದಿದ್ಯಾಕೆ?

    ಪ್ರೇಕ್ಷಕರಂತೆ ವರ್ತಿಸಿರುವುದು ವಿಷಾದನೀಯ

    ಪ್ರಕರಣದಲ್ಲಿ ಶಿಕ್ಷಗೊಳಗಾಗಿರುವ ವ್ಯಕ್ತಿ ಘಟನೆ ನಡೆದ ದಿನ ಸಂತ್ರಸ್ತೆಯ ಮನೆಗೆ ಬಂದಿದ್ದ ಎಂದು ಹೇಳಲಾಗಿದೆ. ಆದರೆ, ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯಿದ್ದು, ಈ ಸತ್ಯವನ್ನು ಹೊರತರಲು ಯಾರು ಯತ್ನಿಸಿಲ್ಲ. ಸರ್ಕಾರಿ ವಕೀಲರಾಗಲಿ, ಪ್ರತಿವಾದಿಗಳ ಪರ ವಾದ ಮಂಡಿಸಿದವರಾಗಲಿ, ಪಟ್ನಾ ಹೈಕೋರ್ಟ್​ ಸಹ ಈ ವಿಚಾರದ ಬಗ್ಗೆ ಚಿಂತನೆ ನಡೆಸದಿರುವುದು ದುರಾದೃಷ್ಟಕರ.

    ಪ್ರಕರಣದ ವಿಚಾರಣೆ ವೇಳೆ ಸರ್ಕಾರಿ ಹಾಗೂ ಪ್ರತಿವಾದಿ ವಕೀಲರು ನ್ಯಾಯಾಲಯಕ್ಕೆ ಸಮರ್ಪಕವಾಗಿ ಸಾಕ್ಷಿ ಒದಗಿಸುವಲ್ಲಿ ವಿಫಲರಾಗಿದ್ದಾರೆ. ವಿಚಾರಣಾಧೀನ ನ್ಯಾಯಾಲಯದ ನ್ಯಾಯಾಧೀಶರು ಮೂಲ ಪ್ರೇಕ್ಷಕರಂತೆ ವರ್ತಿಸಿರುವುದು ವಿಷಾದನೀಯ. ಹೈಕೋರ್ಟ್​ ನ್ಯಾಯಾಧೀಶರು ಮರಣ ದಂಡನೆ ವಿಧಿಸಿದ ಸಂದರ್ಭದಲ್ಲಿ ನ್ಯಾಯಾಲಯದ ತೀರ್ಪು ಸರಿ ಇದೆಯೇ ಎಂಬುದನ್ನು ಪರಿಶೀಲಿಸಬೇಕಿತ್ತು. ಇದಲ್ಲದೆ ಹೆಚ್ಚಿನ ಸಾಕ್ಷ್ಯಾಧಾರಗಳನ್ನು ಒದಗಿಸುವಂತೆ ಸೂಚಿಸಬೇಕಿತ್ತು.

    ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಆರೋಪಿ ಸ್ಥಾನದಲ್ಲಿರುವವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿಲ್ಲ. ಪೊಲೀಸರು ಮೊದಲಿಗೆ ಈ ಪ್ರಕರಣದ ಮಹತ್ವ ಅರಿಯಬೇಕಿತ್ತು ಎಂದು ಹೇಳಿದ ನ್ಯಾಯಪೀಠವು ಮರುವಿಚಾರಣೆ ನಡೆಸಿ ವರದಿ ನೀಡುವಂತೆ ಅರ್ಜಿಯನ್ನು ಪಟ್ನಾ ಹೈಕೋರ್ಟ್​ಗೆ ವರ್ಗಾಯಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts