More

    ನಾನು ಈ ರೀತಿಯ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ; ಟೀಂ ಇಂಡಿಯಾ ನಾಯಕ ಹೀಗಂದಿದ್ಯಾಕೆ?

    ಕೊಲಂಬೋ: ಮುಂಬರುವ ಏಕದಿನ ವಿಶ್ವಕಪ್​ ಟೂರ್ನಿಗೆ 15 ಸದಸ್ಯರನ್ನೊಳಗೊಂಡ ಭಾರತ ಕ್ರಿಕೆಟ್​ ತಂಡವನ್ನು ಬಿಸಿಸಿಐ ಮಂಗಳವಾರ ಪ್ರಕಟಿಸಿದೆ. ವಿಶ್ವಕಪ್​ಗೆ ತಂಡ ಆಯ್ಕೆ ಕುರಿತಂತೆ ಮಾತನಾಡಿದ ಟೀಂ ಇಂಡಿಯಾ ನಾಯಕ ರೋಹಿತ್​ ಶರ್ಮಾ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್​ ಅಗರ್​ಕರ್​ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರ ಪ್ರಶ್ನೆಗೆ ಸಿಡಿಮಿಡಿಗೊಂಡ ನಾಯಕ ರೋಹಿತ್​ ಶರ್ಮಾ ಈ ರೀತಿಯ ಪ್ರಶ್ನೆಗಳನ್ನು ನನ್ನ ಬಳಿ ಕೇಳಬೇಡಿ. ನಾನು ಈ ರೀತಿಯ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದು ರೋಹಿತ್​ ಶರ್ಮಾ ಗರಂ ಆಗಿದ್ದಾರೆ.

    ಹೆಚ್ಚು ಆಲೋಚಿಸುವುದಿಲ್ಲ

    ಭಾರತ ತಂಡವು ಟೂರ್ನಿಗಳಲ್ಲಿ ಆಡುವ ವೇಳೆ ಜನರ ಗ್ರಹಿಕೆ ಬಗ್ಗೆ ಪತ್ರಕರ್ತರೊಬ್ಬರ ಪ್ರಶ್ನೆಗೆ ಸಿಡಿಮಿಡಿಗೊಂಡ ರೋಹಿತ್​ ಶರ್ಮಾ ನಾನು ಅನೇಕ ಬಾರಿ ಹೇಳಿದ್ದೇನೆ ಈ ರೀತಿಯಾದ ಪ್ರಶ್ನೆಗಳನ್ನು ನನ್ನ ಬಳಿ ಕೇಳಬೇಡಿ. ಇಂತಹ ಪ್ರಶ್ನೆಗಳಿಗೆ ನಾನು ಯಾವತ್ತಿಗೂ ಸಹ ಉತ್ತರಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.

    ಹೊರಗಡೆ ಏನಾಗುತ್ತದೆ ಎಂದು ನಾವು ಹೆದರುವುದಿಲ್ಲ. ನಮ್ಮ ತಂಡದಲ್ಲಿರುವ ಅಷ್ಟು ಮಂದಿ ಆಟಗಾರರು ವೃತ್ತಿಪರರು. ಈ ರೀತಿಯ ಪ್ರಶ್ನೆಗಳಿಗೆ ಉತ್ತರಿಸುತ್ತಾ ಕೂತ್ತರೆ ಹೆಚ್ಚು ಅರ್ಥ ಎನ್ನಿಸುವುದಿಲ್ಲ. ನಮ್ಮ ಗಮನ ಬೇರೆಯದ್ದೇ ಆಗಿದೆ. ಹೊರಗಿನ ಕೆಲ ವಿಚಾರಗಳ ಬಗ್ಗೆ ನಾವು ಹೆಚ್ಚು ಆಲೋಚಿಸುವುದಿಲ್ಲ ಎಂದಿದ್ದಾರೆ.

    ಇದನ್ನೂ ಓದಿ: I.N.D.I.A ಎಂಬ ಪದದಿಂದ ಬಿಜೆಪಿ ಗಲಿಬಿಲಿಗೊಂಡಿದೆ: ತಮಿಳುನಾಡು ಸಿಎಂ ಸ್ಟಾಲಿನ್

    ಆ ಸ್ಥಿತಿಯನ್ನು ಅನುಭವಿಸಿದ್ದೇನೆ

    ನಿರೀಕ್ಷಿಯಂತೆಯೇ ತಂಡವನ್ನು ಆಯ್ಕೆ ಮಾಡಲಾಗಿದ್ದು, ಹೆಚ್ಚಿನ ಬದಲಾವಣೆಗಳನ್ನು ಮಾಡಲಾಗಿಲ್ಲ. 15 ಜನರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕಾಗಿರುವುದರಿಂದ ಇಲ್ಲಿ ಹೆಚ್ಚಿನ ಅಚ್ಚರಿಗಳಿಲ್ಲ. ಈ ಪೈಕಿ ಆಯ್ಕೆಯಾಗದ ಕೆಲವರಿಗೆ ತುಂಬಾ ನಿರಾಸೆಯಾಗಿರಬಹುದು. ನಾನು ಆ ಸ್ಥಿತಿಯನ್ನು ಅನುಭವಿಸಿದ್ದೇನೆ. ಆ ಪರಿಸ್ಥಿತಿ ಹೇಗಿರುತ್ತದೆ ಎಂದು ನನಗೂ ಗೊತ್ತಿದೆ.

    ನಾನು ವಿಶ್ವಕಪ್​ನಲ್ಲಿ ತಂಡದ ಪ್ಲ್ಯಾನ್​ ಬಗ್ಗೆ ಯೋಚನೆ ಮಾಡಿಲ್ಲ. ನಮ್ಮ ಮುಂದೆ ಈಗಾಗಲೇ ಸಾಕಷ್ಟು ಸವಾಲುಗಳಿದ್ದು, ಎದುರಾಳಿ ಆಟಗಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ತಂಡವನ್ನು ಆಯ್ಕೆ ಮಾಡುತ್ತೇವೆ. ನಾವು ಒಳ್ಳೆಯ ಕಾಂಬಿನೇಷನ್​ಅನ್ನು ಗಮನದಲ್ಲಿಟ್ಟುಕೊಂಡು ಕಣಕ್ಕಿಳಿಯಬೇಕಿದೆ. ತಂಡ ಆಯ್ಕೆಯ ವಿಚಾರದಲ್ಲಿ ಕೆಲವೊಮ್ಮೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ.

    ಬ್ಯಾಟಿಂಗ್​ ವಿಚಾರಕ್ಕೆ ಬಂದರೆ 8 ಮತ್ತು 9ನೇ ಕ್ರಮಾಂಕವು ನಿರ್ಣಾಯಕವಾಗುತ್ತದೆ.  ನಾವು ಬ್ಯಾಟಿಂಗ್ ಮಾಡುವ ಸಾಮರ್ಥ್ಯವಿರುವ ತಂಡವಾಗಬೇಕು. ಬೌಲರ್‌ಗಳು ಕೇವಲ ಬೌಲಿಂಗ್ ಮಾಡಿದರಷ್ಟೇ ಸಾಲದು. ಕೆಳ ಕ್ರಮಾಂಕದಲ್ಲಿ ಗಳಿಸುವ 10-15 ರನ್ ಪಂದ್ಯದ ಸೋಲು-ಗೆಲುವನ್ನು ನಿರ್ಧರಿಸಲಿದೆ ಎಂದು ಟೀಂ ಇಂಡಿಯಾ ನಾಯಕ ರೋಹಿತ್​ ಶರ್ಮಾ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts