More

    ಹಿಂದೂ ಧರ್ಮದ ವಿರುದ್ಧ ದ್ವೇಷ ಕಾರುವುದನ್ನೇ ಕೆಲವರು ತಮ್ಮ ದಿನನಿತ್ಯದ ಕಾಯಕವನ್ನಾಗಿಸಿಕೊಂಡಿದ್ದಾರೆ: ಬಿಜೆಪಿ

    ಬೆಂಗಳೂರು: ಹಿಂದೂಗಳನ್ನು ಕಂಡರೆ ಸದಾ ದ್ವೇಷ ಕಾರುವ ಪಕ್ಷಗಳ ಜೊತೆ ಸ್ನೇಹ ಬೆಳೆಸಿರುವ ಕಾಂಗ್ರೆಸ್, ಈಗ ಹಿಂದೂ ಧರ್ಮದ ಮೇಲೆ ತನಗಿರುವ ದ್ವೇಷವನ್ನು ಮಿತ್ರ ಪಕ್ಷಗಳಿಂದ ವ್ಯಕ್ತಪಡಿಸುತ್ತಿದೆ ಎಂದು ರಾಜ್ಯ ಬಿಜೆಪಿ ಘಟಕ ವಾಗ್ದಾಳಿ ನಡೆಸಿದೆ.

    ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ರಾಜ್ಯ ಬಿಜೆಪಿ ಹಿಂದೂಗಳನ್ನು ಅವಹೇಳನ ಮಾಡುವುದು ಕಾಂಗ್ರೆಸ್​ ಡಿಎನ್​ಎಯಲ್ಲೇ ಇದೆ ಎಂದು ಕಿಡಿಕಾರಿದೆ.

    ಗುಟ್ಟಾಗಿ ಉಳಿದಿಲ್ಲ

    ಕೇವಲ ಚುನಾವಣಾ ಸಮಯದಲ್ಲಿ ಮಾತ್ರ ಹಿಂದೂಗಳಾಗುವ ಕಾಂಗ್ರೆಸ್​​ ನಾಯಕರು, ದಶಕಗಳ ಕಾಲದಿಂದ ಹಿಂದೂಗಳನ್ನು ಹಾಗೂ ಹಿಂದೂ ಧರ್ಮವನ್ನು ಅವಹೇಳನ ಮಾಡುತ್ತಲೇ ಬಂದಿದ್ದಾರೆ. ಜೊತೆ ಜೊತೆಗೆ ಹಿಂದೂ ಧರ್ಮವನ್ನು ಅವಹೇಳನ ಮಾಡುವ ವ್ಯಕ್ತಿಗಳಿಗೆ ಹಾಗೂ ಅಂತಹ ಸಂಘಟನೆಗಳಿಗೆ ಕಾಂಗ್ರೆಸ್ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಂಬಲ ನೀಡಿದ್ದು ಈಗ ಗುಟ್ಟಾಗಿ ಉಳಿದಿಲ್ಲ.

    ಹಿಂದೂಗಳನ್ನು ಕಂಡರೆ ಸದಾ ದ್ವೇಷ ಕಾರುವ ಪಕ್ಷಗಳ ಜೊತೆ ಸ್ನೇಹ ಬೆಳೆಸಿರುವ ಕಾಂಗ್ರೆಸ್, ಈಗ ಹಿಂದೂ ಧರ್ಮದ ಮೇಲೆ ತನಗಿರುವ ದ್ವೇಷವನ್ನು ತನ್ನ ಮಿತ್ರ ಪಕ್ಷಗಳಿಂದ ವ್ಯಕ್ತಪಡಿಸುತ್ತಿದೆ. ಕುಟುಂಬ ರಾಜಕಾರಣ, ಸ್ವಜನಪಕ್ಷಪಾತ, ಭ್ರಷ್ಟಾಚಾರ, ಹಿಂದೂ ವಿರೋಧಿ ಮನಸ್ಥಿತಿ, ಹಿಂದೂ ಧರ್ಮ ಹಾಗೂ ದೇವರುಗಳ ಅವಹೇಳನ ಹೀಗೆ ಕಾಂಗ್ರೆಸ್‌ನ ಡಿ.ಎನ್.ಎಯಲ್ಲಿ ಅಡಕವಾಗಿರುವ ಗುಣಗಳನ್ನೇ ಹೊಂದಿರುವ ಕೆಲವು ಪಕ್ಷಗಳ ನಾಯಕರು, ಹಿಂದೂ ಧರ್ಮದ ವಿರುದ್ಧ ದ್ವೇಷ ಕಾರುವುದನ್ನೇ ತಮ್ಮ ದಿನನಿತ್ಯದ ಕಾಯಕವನ್ನಾಗಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಸನಾತನ ಹೇಳಿಕೆ; ವಚನವನ್ನು ಉಲ್ಲೇಖಿಸಿ ಬಿ.ಎಲ್. ಸಂತೋಷ್​ಗೆ ತಿರುಗೇಟು ಕೊಟ್ಟ ಪ್ರಿಯಾಂಕ್​ ಖರ್ಗೆ

    ಘನಂದಾರಿ ಕೆಲಸದಿಂದಲ್ಲ

    ಸಾಲದ್ದಕ್ಕೆ, ಹಿಂದೂಗಳ ಮೇಲೆ ದ್ವೇಷ ಕಾರುವ ಈ ಒಕ್ಕೂಟಕ್ಕೆ I.N.D.I.A ಎಂಬ ಹೆಸರಿಟ್ಟುಕೊಂಡಿದ್ದಾರೆ. I.N.D.I.A ಒಕ್ಕೂಟದಲ್ಲಿ ಗುರುತಿಸಿಕೊಂಡಿರುವ ಪಕ್ಷಗಳ ನಾಯಕರು, ಹೊರ ಜಗತ್ತಿಗೆ ಪರಿಚಯವಾಗಿದ್ದೇ, ಅವರುಗಳ ಹಿಂದೂ ವಿರೋಧಿ ಮನಸ್ಥಿತಿಯಿಂದ ಹೊರತು ಮತ್ತ್ಯಾವ ಘನಂದಾರಿ ಕೆಲಸದಿಂದಲ್ಲ.

    ಈಗ ತಮಿಳುನಾಡಿನ ಡಿ.ಎಂ.ಕೆ ಪಕ್ಷದ ಮುಖ್ಯಮಂತ್ರಿ ಪುತ್ರ ಉದಯನಿಧಿ ಸ್ಟಾಲಿನ್‌ ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ, ಅದನ್ನೂ ಶಾಶ್ವತವಾಗಿ ನಿರ್ಮೂಲನೆ ಮಾಡಬೇಕೆಂದು ಕರೆ ನೀಡುತ್ತಾರೆ. ರಾಹುಲ್‌ ಗಾಂಧಿಯವರ ಕಾಂಗ್ರೆಸ್‌ ಇಂತಹ ಕೀಳು ಮಟ್ಟದ ಹೇಳಿಕೆಯನ್ನು ಖಂಡಿಸುವ ಬದಲು, ಎಲ್ಲಾ ರಾಜಕೀಯ ಪಕ್ಷಗಳಿಗೂ ಮಾತನಾಡುವ ಸ್ವಾತಂತ್ರ್ಯವಿದೆ ಎಂದು ಉದಯನಿಧಿಯವರ ಹಿಂದೂ ವಿರೋಧಿ ಹೇಳಿಕೆಗೆ ಪರೋಕ್ಷವಾಗಿ ಬೆಂಬಲಿಸುತ್ತಿದೆ ಎಂದು ರಾಜ್ಯ ಬಿಜೆಪಿ ಕಾಂಗ್ರೆಸ್​ ಹಾಗೂ ವಿಪಕ್ಷಗಳ ಒಕ್ಕೂಟದ ವಿರುದ್ಧ ವಾಗ್ದಾಳಿ ನಡೆಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts