More

    ಜೈಲಿನಲ್ಲಿ ಐಷಾರಾಮಿ ಜೀವನ; ಶಶಿಕಲಾ, ಇಳವರಸಿಗೆ ಜಾಮೀನು ರಹಿತ ವಾರೆಂಟ್ ಜಾರಿ

    ಬೆಂಗಳೂರು: ಜೈಲಿನ ಅಧಿಕಾರಿಗಳಿಗೆ ಲಂಚ ನೀಡಿ ಐಷಾರಾಮಿ ಸೌಲಭ್ಯಗಳನ್ನು ಪಡೆದುಕೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮಾಜಿ ಮುಖ್ಯಮಂತ್ರಿ, ದಿ. ಜಯಲಲಿತಾ ಅವರ ಆಪ್ತರಾದ ವಿ.ಕೆ. ಶಶಿಕಲಾ ಹಾಗು ಇಳವರಸಿಗೆ ಲೋಕಾಯುಕ್ತ ವಿಶೇಷ ಕೋರ್ಟ್​ ಜಾಮೀನು ರಹಿತ ವಾರೆಂಟ್​ ಜಾರಿ ಮಾಡಿದೆ.

    ತಮಿಳುನಾಡು ಮಾಜಿ ಮುಖ್ಯಮಂತ್ರಿ, ದಿ. ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ವಿ.ಕೆ. ಶಶಿಕಲಾ ಹಾಗೂ ಇಳವರಸಿ ನಾಲ್ಕು ವರ್ಷಗಳ ಕಾಲ ಸೆರೆವಾಸ ಅನುಭವಿಸಿದ್ದರು. ಜೈಲು ಶಿಕ್ಷೆ ವೇಳೆ ಇವರಿಬ್ಬರು ಅಧಿಕಾರಿಗಳಿಗೆ ಲಂಚ ನೀಡಿ ಐಷಾರಾಮಿ ಸೌಲಭ್ಯಗಳನ್ನು ಪಡೆದಿದ್ದರು ಎಂಬ ಆರೋಪವಿದೆ.

    ಶಿಕ್ಷೆ ವೇಳೆ ಅಲ್ಲಿನ ಅಧಿಕಾರಿಗಳಿಗೆ 2 ಕೋಟಿ ರೂಪಾಯಿ ಲಂಚ ನೀಡಿ ಶಾಪಿಂಗ್​ಗೆಂದು ಈ ಇಬ್ಬರು ಜೈಲಿನಿಂದ ಹೊರ ಬಂದಿದ್ದರು. ಶಶಿಕಲಾ ಹಾಗೂ ಇಳವರಸಿ ಶಾಪಿಂಗ್​ಗೆ ತೆರಳಿರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದವು. ಈ ಬೆಳವಣಿಗೆಯು ಉಭಯ ರಾಜ್ಯಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಈ ಸಂಬಂಧ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿತ್ತು.

    lokayuktha

    ಇದನ್ನೂ ಓದಿ: ನಾನು ಮಧ್ಯದ ಬೆರಳು ತೋರಿಸಿದ್ದು ಕೊಹ್ಲಿ ಅಭಿಮಾನಿಗಳಿಗೆ ಅಲ್ಲ: ಗೌತಮ್​ ಗಂಭೀರ್

    ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಕಾರಾಗೃಹ ಅಧಿಕಾರಿಗಳ ವಿರುದ್ಧ ದಾಖಲಾಗಿದ್ದ ಪ್ರಕಣವನ್ನು ಕರ್ನಾಟಕ ಹೈಕೋರ್ಟ್​ ಈಗಾಗಲೇ ರದ್ದು ಮಾಡಿದ್ದು, ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸಬೇಕೆಂದು ಕೋರಿ ಶಶಿಕಲಾ ಮತ್ತು ಇಳವರಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

    ಅರ್ಜಿ ವಿಚಾರಣೆ ವೇಳೆ ಶಶಿಕಲಾ ಹಾಗೂ ಇಳವರಸಿ ನ್ಯಾಯಾಲಯಕ್ಕೆ ಗೈರು ಹಾಜರಿದ್ದರು. ಇದಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರಣೆಗೆ ಹಾಜರಾಗದ ಹಿನ್ನಲೆ ಲೋಕಾಯುಕ್ತ ನ್ಯಾಯಾಲಯ ಶಶಿಕಲಾ ಹಾಗೂ ಇಳವರಸಿಗೆ ಜಾಮೀನು ರಹಿತ ವಾರೆಂಟ್​ ಜಾರಿ ಮಾಡಿದೆ. ಇದಲ್ಲದೆ ಶಶಿಕಲಾ ಮತ್ತು ಇಳವರಸಿ ಜಾಮೀನಿಗೆ ಸಹಿ ಹಾಕಿದ ವ್ಯಕ್ತಿಗಳಿಗೂ ಲೋಕಾಯುಕ್ತ ಕೋರ್ಟ್ ನೋಟಿಸ್ ಜಾರಿ ಮಾಡಿ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್​ 5ಕ್ಕೆ ಮುಂದೂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts