More

    ಜಿ-20 ಶೃಂಗಸಭೆ; ಮಿಂಚಲಿದೆ ಕರ್ನಾಟಕದ ಕಸೂತಿ-ಬಿದ್ರಿ ಕಲೆ

    ನವದೆಹಲಿ: ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯೂ ಈ ಬಾರಿ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ರಾಷ್ಟ್ರ ರಾಜಧಾನಿ ನವದೆಹಲಿಯ ಪ್ರಗತಿ ಮೈದಾನದ ಭಾರತ ಮಂಟಪಂನಲ್ಲಿ ಸೆಪ್ಟೆಂಬರ್​ 9 ಹಾಗೂ 10ರಂದು ಶೃಂಗಸಭೆಯನ್ನು ಆಯೋಜಿಸಲಾಗಿದೆ.

    ಜಿ-20 ಶೃಂಗಸಭೆಯಲ್ಲಿ ಕ್ರಾಫ್ಟ್​ ಬಜಾರ್​ ತೆರೆಯಲು ಸರ್ಕಾರ ಉದ್ದೇಶಿಸಿದ್ದು, ವಿವಿಧ ರಾಜ್ಯಗಳ ಕರಕುಶಲ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಾಡಲಾಗುತ್ತದೆ. ಸುಮಾರು ಮೂವತ್ತು ರಾಜ್ಯಗಳು ಹಾಗು ಕೇಂದ್ರಾಡಳಿತ ಪ್ರದೇಶಗಳು ಪ್ರದರ್ಶನದಲ್ಲಿ ಪಾಲ್ಗೊಳಲಿದ್ದು ಆರು ಕೇಂದ್ರೀಯಾ ಸಂಸ್ಥೆಗಳು ಕ್ರಾಫ್ಟ್​ ಬಜಾರ್​ನಲ್ಲಿ ಭಾಗಿಯಾಗಲಿವೆ. ಮುಖ್ಯವಾಗಿ ಇದರಲ್ಲಿ ಕರ್ನಾಟಕದ ಪ್ರಸಿದ್ಧ ಕಸೂತಿ ಹಾಗೂ ಬಿದ್ರಿ​ ಕಲೆಗಳು ಪ್ರದರ್ಶನಗೊಳ್ಳುತ್ತಿರುವುದು ವಿಶೇಷ.

    ಮಿಂಚಲಿದೆ ಕಸೂತಿ ಹಾಗೂ ಬಿದ್ರಿ ಕಲೆ

    ಕಸೂತಿ ಕಲೆಯು ಸಾಮಾನ್ಯವಾಗಿ ಬಟ್ಟೆಯ ಮೇಲೆ, ವಿರಳವಾಗಿ ಚರ್ಮ ಅಥವಾ ಇಂಥ ಇತರ ವಸ್ತುಗಳ ಮೇಲೆ, ಸೂಜಿ ದಾರಗಳಿಂದಲೊ ಅಪರೂಪವಾಗಿ ತಂತಿಯಿಂದಲೊ ಮಾಡಿದ ಅಲಂಕಾರ (ಎಂಬ್ರಾಯ್ಡರಿ). ಕಸೂತಿ ಕಲೆಯು ಹೆಚ್ಚಾಗಿ ಗಾಢವಾದ ಬಣ್ಣ ಮತ್ತು ಇದರ ಉತ್ಪನ್ನಗಳು ಹೆಚ್ಚಾಗಿ ಇಳಕಲ್​ ಸೀರೆಗಳ ಮೇಲೆ ಬಳಸಲಾಗುತ್ತದೆ. ಕಸೂತಿ ಕಲೆಯು ಪ್ರಾಚೀನಾವಾಗಿದ್ದು, ದೇವಾಲಯ, ವಾಸ್ತುಶಿಲ್ಪ ಸೇರಿದಂತೆ ಅಣೇಕ ವಿನ್ಯಾಸಗಳನ್ನು ಒಳಗೊಂಡಿರುತ್ತದೆ.

    ಈ ಹಿಂದೆ ಜುಲೈ ತಿಂಗಳಲ್ಲಿ ಹಂಪಿಯಲ್ಲಿ ನಡೆದ ಜಿ -20 ಮೂರನೇ ಸಾಂಸ್ಕೃತಿಕ ಕಾರ್ಯಪಡೆ ಸಭೆಯಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರಿನ ಕುಶಲ ಕಲಾಕೇಂದ್ರದ 450 ಮಹಿಳೆಯರು ತಯಾರಿಸಿದ ಸುಮಾರು 1750 ಲಂಬಾಣಿ ಕಸೂತಿ ಕಲೆಯ ಅತಿದೊಡ್ಡ ವಸ್ತ್ರ ಪ್ರದರ್ಶನವನ್ನು ಏರ್ಪಡಿಸಿ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ ಸಾಧನೆ ಮಾಡಿತು.

    G 20 meet

    ಇದನ್ನೂ ಓದಿ: ಹಿಂದೂ ಧರ್ಮದ ವಿರುದ್ಧ ದ್ವೇಷ ಕಾರುವುದನ್ನೇ ಕೆಲವರು ತಮ್ಮ ದಿನನಿತ್ಯದ ಕಾಯಕವನ್ನಾಗಿಸಿಕೊಂಡಿದ್ದಾರೆ: ಬಿಜೆಪಿ

    ಬಿದ್ರಿ ಕಲೆಯೂ ಕರ್ನಾಟಕ ಬೀದರ್​ ಜಿಲ್ಲೆಯಿಂದ ಹುಟ್ಟಿಕೊಂಡ ಸೊಗಸಾದ ಲೋಹದ ಕರಕುಶಲವಾಗಿದೆ.  ಬಹಮನಿ ಸುಲ್ತಾನರು ಆಳುತ್ತಿದ್ದ ಕಾಲದಲ್ಲಿ ಇದನ್ನು ಅಭಿವೃಧ್ಧಿ ಪಡಿಸಲಾಯಿತು. ಬಿದ್ರಿ ಕಲೆ ಎಂಬ ಹೆಸರು ಬೀದರ್​ ನಗರದಿಂದ ಬಂದಿದ್ದು, ಇದು ಈ ವಿಶಿಷ್ಟ ಲೋಹದ ಕಲಾಕೃತಿಯ ಉತ್ಪನ್ನದ ಮುಖ್ಯ ಕೇಂದ್ರವಾಗಿದೆ. ಸತು ಮತ್ತು ತಾಮ್ರದ ಮಿಶ್ರಲೋಹವನ್ನು ತೆಳು ಹಾಳೆಗಳ ಒಳಹಾಸನ್ನು ಇದಕ್ಕೆ ಬಳಸುತ್ತಾರೆ.

    ಸೆಪ್ಟೆಂಬರ್​ 9 ಹಾಗೂ 10ರಂದು ನಡೆಯುವ ಜಿ-20 ಸಭೆಯಲ್ಲಿ ಕರ್ನಾಟಕದ ಈ ಎರಡು ಪ್ರಸಿದ್ದ ಕಲೆಗಳು ಭಾಗಿಯಾಗುತ್ತಿರುವುದು ನಾಡಿನ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಕ್ರಾಫ್ಟ್​ ಮೇಳದಲ್ಲಿ ಖಾದಿ ವಿಲೇಜ್​, National Bamboo Mission​, TRIFED, ಸರೂಸ್​ ಅಜೀವಿಕಾ​ ಸೇರಿದಂತೆ ಆರು ಕೇಂದ್ರೀಯಾ ಏಜೆನ್ಸಿಗಳು ಭಾಗಿಯಾಗಲಿವೆ. ಜಿ-20 ಸೆಕ್ರಟರಿಯೇಟ್​ ಈ ಕಾರ್ಯಕ್ರಮವನ್ನು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಗಳ ಸಹಭಾಗಿತ್ವದಲ್ಲಿ ಆಯೋಜನೆ ಮಾಡುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts