ಡೊನಾಲ್ಡ್​ ಟ್ರಂಪ್​ ಸುಂಕಗಳಿಂದ ಭಾರತ ಮತ್ತು ಚೀನಾ ಜತೆಯಾಗುತ್ತಿವೆ: ಯುಎಸ್​ ಮಾಜಿ NSA ಜೇಕ್ ಸುಲ್ಲಿವನ್|Jake Sullivan

Jake Sullivan
Published on

Jake Sullivan: ಭಾರತ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹೇರಿರುವ ಸುಂಕವು ದೊಡ್ಡ ಅನ್ಯಾಯ ಎಂದು ಯುಎಸ್​ನ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಜೇಕ್ ಸುಲ್ಲಿವನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅಮೆರಿಕದ ಮಾಜಿ NSA, ಭಾರತವನ್ನು ಒಂದು ಉದಾಹರಣೆಯಾಗಿ ನೋಡಿ. ಅಮೆರಿಕ ಮತ್ತು ಭಾರತ ದ್ವಿಪಕ್ಷೀಯ ವ್ಯಾಪಾರದ ಮೇಲೆ ನಾವು ಕೆಲಸ ಮಾಡುತ್ತಿದ್ದ ಮತ್ತು ಹೆಚ್ಚು ಸುಸ್ಥಿರ ಸಂಬಂಧವನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದ ದೇಶವಾಗಿದೆ. ಅಮೆರಿಕಕ್ಕೆ ಚೀನಾ ದೊಡ್ಡ ಸವಾಲಾಗಿ ಹೊರಹೊಮ್ಮಿದೆ ಎಂದು ಜೇಕ್ ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಜೇಕ್, ಈಗ ನೀವು ಅಧ್ಯಕ್ಷ ಟ್ರಂಪ್ ವಿರುದ್ಧ ಬೃಹತ್ ವ್ಯಾಪಾರ ದಾಳಿ ನಡೆಸುವಂತೆ ಮಾಡಿದ್ದೀರಿ. ಅಲ್ಲದೆ, ಭಾರತೀಯರು ಹೋಗಿ ಚೀನಿಯರೊಂದಿಗೆ ಕುಳಿತುಕೊಳ್ಳಬೇಕಾಗಬಹುದು. ಏಕೆಂದರೆ ಅಮೆರಿಕದ ವಿರುದ್ಧ ಸ್ಪಲ್ಪ ಮುನ್ನಡೆ ಸಿಕ್ಕಿದೆ ಎಂದು ಭಾರತ ಹೇಳುತ್ತಿದೆ ಎಂದು ಜೇಕ್​ ತಿಳಿಸಿದ್ದಾರೆ.

ಚೀನಾ ಜವಾಬ್ದಾರಿಯುತ ದೇಶ ಎಂದು ಬಿಂಬಿಸಿಕೊಳ್ಳುತ್ತಿದೆ: ಜೇಕ್​ ಸುಲ್ಲಿವನ್

ಚೀನಾ ಈಗ ಜಾಗತಿಕ ವೇದಿಕೆಯಲ್ಲಿ ತನ್ನನ್ನು ಜವಾಬ್ದಾರಿಯುತ ದೇಶ ಎಂದು ಬಿಂಬಿಸಿಕೊಳ್ಳುತ್ತಿದೆ. ಅಲ್ಲದೆ, ಚೀನಾದ ಜನಪ್ರಿಯತೆ ಯುಎಸ್​ಗಿಂತ​ ಹೆಚ್ಚಾಗಿದೆ. ಯುಎಸ್ ಬ್ರ್ಯಾಂಡ್ ಕೆಳಮಟ್ಟಕ್ಕೆ ಇಳಿದಿದೆ ಎಂದು ಅನೇಕ ದೇಶಗಳು ಈಗ ಹೇಳುತ್ತಿವೆ ಎಂದು ಜೇಕ್​ ಹೇಳಿದ್ದಾರೆ.

ನಾನು ಈಗ ಹಲವು ದೇಶಗಳ ನಾಯಕರೊಂದಿಗೆ ಮಾತನಾಡುವಾಗ, ಯುನೈಟೆಡ್ ಸ್ಟೇಟ್ಸ್‌ನಿಂದ ಅಪಾಯಗಳನ್ನು ತೆಗೆದುಹಾಕುವ ಬಗ್ಗೆ ಮಾತನಾಡುತ್ತಿದ್ದಾರೆ. ಈಗ ಯುಎಸ್ ದೊಡ್ಡ ತೊಂದರೆ ಕೊಡುವ ದೇಶವಾಗಿ ಜಗತ್ತು ನೋಡುತ್ತಿದೆ ಎಂದು ಜೇಕ್​ ಸುಲ್ಲಿವನ್ ತಿಳಿಸಿದ್ದಾರೆ.

ಭಾರತದ ಮೇಲೆ ಶೇ.50 ರಷ್ಟು ಸುಂಕ ವಿಧಿಸಿದ ಟ್ರಂಪ್

ಟ್ರಂಪ್ ಆಡಳಿತವು ಭಾರತದ ಮೇಲೆ ಒಟ್ಟು ಶೇ.50 ರಷ್ಟು ಸುಂಕಗಳನ್ನು ವಿಧಿಸಿದೆ. ರಷ್ಯಾದ ತೈಲವನ್ನು ಖರೀದಿಸುವ ಭಾರತದ ನಿರ್ಧಾರವನ್ನು ಅದು ತೀವ್ರವಾಗಿ ಟೀಕಿಸಿದೆ. ಭಾರತವು ಯುರೋಪ್, ಏಷ್ಯಾ ಮತ್ತು ಆಫ್ರಿಕಾದ ಮಾರುಕಟ್ಟೆಗಳಿಗೆ ರಷ್ಯಾ ತೈಲವನ್ನು ಮಾರಾಟ ಮಾಡುತ್ತಿದೆ ಮತ್ತು ಆ ಮೂಲಕ ಭಾರಿ ಲಾಭ ಗಳಿಸುತ್ತಿದೆ ಎಂದು ಯುಎಸ್​ ಆರೋಪಿಸಿದೆ. ಅಲ್ಲದೆ, ಟ್ರಂಪ್ ವಿಧಿಸಿರುವ ಅನ್ಯಾಯದ ಸುಂಕ ಎಂದು ಭಾರತ ಟೀಕಿಸಿದೆ ಮತ್ತು ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net