'ಡೊನಾಲ್ಡ್​ ಟ್ರಂಪ್​, ಯು ಆರ್​ ಫೈರ್ಡ್​', ವೈರಲ್​ ಆಯ್ತು ಜಿಲ್​ ಬಿಡೆನ್​ ಭಾಷಣ

jilll
Published on

ವಾಷಿಂಗ್ಟನ್​: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಟ್​ ಟ್ರಂಪ್​ ಹಿನ್ನೆಡೆ ಸಾಧಿಸಿದ್ದಾರೆ. ಅವರು ಅಧ್ಯಕ್ಷೀಯ ಸ್ಥಾನದಿಂದ ಕೆಳಗಿಳಿದು, ಜೋ ಬಿಡೆನ್​ ಅಧ್ಯಕ್ಷ ಸ್ಥಾನಕ್ಕೇರುವುದು ಬಹುತೇಕ ಖಚಿತವಾಗಿದೆ. ಈ ಸಮಯದಲ್ಲಿ ಜೋ ಬಿಡೆನ್​ ಅವರ ಪತ್ನಿ ಜಿಲ್​ ಬಿಡೆನ್​ ಅವರ ಭಾಷಣ ಸಕತ್​ ವೈರಲ್​ ಆಗಿದೆ.

ಚುನಾವಣೆಗೂ ಮುನ್ನ ಭರ್ಜರಿ ಪ್ರಚಾರಗಳನ್ನು ಮಾಡಿದ್ದ ಬಿಡೆನ್​ ದಂಪತಿ, ಸಭೆಯೊಂದರಲ್ಲಿ ಮಾಡಿದ್ದ ಭಾಷಣದ ತುಣುಕು ಈಗ ವೈರಲ್​ ಪಟ್ಟಿ ಸೇರಿದೆ. ' ಆರ್​ ಯು ರೆಡಿ ಟು ಟೆಲ್​ ಡೊನಾಲ್ಡ್​ ಟ್ರಂಪ್​, ಯು ಆರ್​ ಫೈರ್ಡ್​'' ಎಂದು ವಿಡಿಯೋದಲ್ಲಿ ಜಿಲ್​ ಬಿಡೆನ್​ ಹೇಳಿದ್ದಾರೆ. ಟ್ರಂಪ್​ ನೀವು ಅಧ್ಯಕ್ಷ ಸ್ಥಾನದಿಂದ ವಜಾವಾಗಿದ್ದೀರಿ ಎಂದು ಹೇಳುವುದಕ್ಕೆ ನೀವೆಲ್ಲರೂ ಸಿದ್ಧರಿದ್ದೀರಾ ಎನ್ನುವುದು ಇದರರ್ಥ.

ಈ ವಿಡಿಯೋವನ್ನು ಜಿಲ್​ ಬಿಡೆನ್​ ಅವರು ನವೆಂಬರ್​ 3ರಂದು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಲಕ್ಷಾಂತರ ಜನರಿಂದ ವೀಕ್ಷಣೆಗೊಂಡಿದೆ. ಸಾವಿರಾರು ಜನರು ಟ್ರಂಪ್​ ಫೈರಡ್​ ಎಂದು ವಿಡಿಯೋವನ್ನು ಹಂಚಿಕೊಳ್ಳಲಾರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net