

ನವದೆಹಲಿ: ಇದೇ ಜ.20ರಂದು ಎರಡನೇ ಬಾರಿಗೆ ಅಮೆರಿಕಾದ 47ನೇ ಅಧ್ಯಕ್ಷರಾಗಿ ಅಧಿಕಾರಿ ಸ್ವೀಕರಿಸುತ್ತಿರುವ ಡೊನಾಲ್ಡ್ ಟ್ರಂಪ್ ಕಾರ್ಯಕ್ರಮಕ್ಕೆ ಭಾರತದ ಪ್ರತಿನಿಧಿಯಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಪ್ರತಿನಿಧಿಸಲಿದ್ದಾರೆ.
ಟ್ರಂಪ್ 47ನೇ ಅಧ್ಯಕ್ಷರಾಗಿ ಜ.20ರಂದು ಅಮೆರಿಕಾದ ರಾಜಧಾನಿ ವಾಷಿಂಗ್ಟನ್ ಡಿಸಿ ನಗರದಲ್ಲಿ ನಡೆಯಲಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ ಟ್ರಂಪ್ಗೆ ಪ್ರಮಾಣವಚನದ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ಮಧ್ಹ್ಯಾನ ಸಮಯದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಅಲ್ಲಿನ ಮಾಧ್ಯಗಳು ವರದಿ ಮಾಡಿದೆ. ಇನ್ನು ಕಾರ್ಯಕ್ರಮಕ್ಕೆ ಜಗತ್ತಿನ ಎಲ್ಲ ದೇಶಗಳಿಂದ ಗಣ್ಯರು ಬರಲಿದ್ದಾರೆ.
ಟ್ರಂಪ್ ಕಾರ್ಯಕ್ರಮಕ್ಕೆ ಧ್ವಜಗಳನ್ನು ಅರ್ಧಕ್ಕೆ ಇಳಿಸಲಾಗುತ್ತಿದೆ. ಕಾರಣ, ಇತ್ತೀಚಿಗೆ ಅಮೆರಿಕಾದ ಮಾಜಿ ಅಧ್ಯಕ್ಷರಾಗಿದ್ದ ಜಿಮ್ಮಿ ಕಾರ್ಟರ್(100) ನಿಧರಾಗಿದ್ದ ಹಿನ್ನೆಲೆ ಇದರ ಗೌರವರ್ಥವಾಗಿ 30ದಿನಗಳ ಕಾಲ ಅಮೆರಿಕಾದ್ಯಂತ ಧ್ವಜ ಅರ್ಧಕ್ಕೆ ಹಾರಿಸಬೇಕೆಂದು ಬಿಡನ್ ಸರ್ಕಾರ ಘೋಷಿಸಿದೆ. ಇದು ಜ.28ರವರೆಗೆ ಜಾರಿಯಲ್ಲಿರುತ್ತದೆ.
ಇನ್ನು ಈ ಕಾರ್ಯಕ್ರಮದ ಮುಂಚಿತವಾಗಿ ಮತ್ತೊಂದು ಕಾರ್ಯಕ್ರಮದಲ್ಲಿ ಅಮೆರಿಕಾ ಉಪಾಧ್ಯಕ್ಷ ಅಧಿಕಾರ ಸ್ವೀಕರಿಸಲಿದ್ದಾರೆ. ಉಪಾಧ್ಯಕ್ಷರಾಗಿ ಜೆಡಿ ವ್ಯಾನ್ಸ್ ಆಯ್ಕೆಯಾಗಿದ್ದಾರೆ. ಉದ್ಘಾಟನಾ ಸಮಾರಂಭದ ಜಂಟಿ ಕಾಂಗ್ರೆಸ್ನಲ್ ಸಮಿತಿ(JCCIC) ತಿಳಿಸಿದೆ.
ಭಾರತ ಪ್ರತಿನಿಧಿಯಾಗಿ ಎಸ್.ಜೈಶಂಕರ್ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ತಮ್ಮ ಭೇಟಿಯ ಸಮಯದಲ್ಲಿ, ಒಳಬರುವ ಆಡಳಿತ ಪ್ರತಿನಿಧಿಗಳ ಮತ್ತು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಇತರ ಗಣ್ಯರೊಂದಿಗೆ ಸಭೆ ನಡೆಸಲಿದ್ದಾರೆ.
2024ರ ನವೆಂಬರ್ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಭಾರಿ ಜಯಗಳಿಸುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾದರು. 538 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 312 ಸ್ಥಾನಗಳಲ್ಲಿ ಟ್ರಂಪ್ ಗೆಲುವು ಸಾಧಿಸಿದ್ದಾರೆ. ಇತ್ತ ಪ್ರಸ್ತುತ ಆಡಳಿತ ಸರ್ಕಾರದ ಬಿಡೆನ್(ಕಮಲಾ ಹ್ಯಾರಿಸ್) 226 ಸ್ಥಾನದಲ್ಲಿ ಗೆದ್ದು ಸೋಲಬೇಕಾಯಿತು. (ಏಜೆನ್ಸೀಸ್)