

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ (BiggBoss) ದಿನ ಕಳೆದಂತೆ ಭರಪೂರ ಮನರಂಜನೆ ನೀಡುತ್ತಿದ್ದು, ಫಿನಾಲೆಗೆ ಹತ್ತಿರವಿರುವ ಸಮಯದಲ್ಲೇ ಮತ್ತಷ್ಟು ಮನರಂಜನೆ ಖಾತ್ರಿಯಾಗಿದೆ. ಶನಿವಾರದ (ಜನವರಿ 11) ಸಂಚಿಕೆಯಲ್ಲಿ ರಜತ್, ಭವ್ಯಾ ಹಾಗೂ ಮಂಜುಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದ ನಿರೂಪಕ ಕಿಚ್ಚ ಸುದೀಪ್ ಭಾನುವಾರದ ಎಪಿಸೋಡ್ನಲ್ಲಿ ಮನೆಮಂದಿಗೆಲ್ಲಾ ಶಾಕ್ ಕೊಟ್ಟಿದ್ದು, ಸ್ಫರ್ಧಿಗಳು ನಲುಗಿ ಹೋಗಿದ್ದಾರೆ.
ಕಿಚ್ಚನ ಸರ್ಪ್ರೈಸ್ಗೆ ಮನೆಮಂದಿ ಶಾಕ್! ಎಂಬ ಶೀರ್ಷಿಕೆಯಡಿ ಬಿಡುಗಡೆಯಾಗಿರುವ ಬಿಗ್ಬಾಸ್ (BiggBoss) ಪ್ರೋಮೋ ನೋಡುವುದಾದರೆ ನಿರೂಪಕ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ಪ್ರಶ್ನೆಗಳನ್ನು ಕೇಳುತ್ತಾರೆ. ತಪ್ಪು ಉತ್ತರ ನೀಡಿದವರಿಗೆ ಶಾಕ್ ಟ್ರೀಟ್ಮೆಂಟ್ ನೀಡಿದ್ದಾರೆ. ಸ್ಪರ್ಧಿಗಳನ್ನು ಕುರ್ಚಿಯೊಂದರ ಮೇಲೆ ಕೂರಿಸಿ ಅವರ ಕೈಗೆ ವೈಯರ್ನ ಬ್ಯಾಂಡ್ ಕಟ್ಟಿಸಿದ್ದಾರೆ. ಆ ನಂತರ ಸ್ಪರ್ಧಿಗಳಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಯಾರು ತಪ್ಪು ಉತ್ತರ ನೀಡುತ್ತಾರೋ ಅವರಿಗೆ ಕರೆಂಟ್ ಶಾಕ್ ಹೊಡೆಯುತ್ತದೆ. ಶಾಕ್ ಹೊಡೆಸಿಕೊಂಡ ಸ್ಪರ್ಧಿಗಳು ಒದ್ದಾಡಿದ್ದಾರೆ. ಸ್ಫರ್ಧಿಗಳ ನರಳಾಟ ನೋಡಿ ಹನುಮಂತು ಟಾಯ್ಲೆಟ್ ಸೇರಿಕೊಂಡಿದ್ದಾರೆ. ಸದ್ಯ ಈ ಪ್ರೋಮೋ ವೈರಲ್ ಆಗಿದೆ.
ಇನ್ನೂ ಎಲಿಮಿನೇಷನ್ ವಿಚಾರಕ್ಕೆ ಬರುವುದಾದರೆ ಚೈತ್ರಾ ಕುಂದಾಪುರ ಅವರು ಬಿಗ್ಬಾಸ್ (BiggBoss) ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎಂದು ಹೇಳಲಾಗಿದ್ದು, ಇನ್ನಷ್ಟೇ ಅಧಿಕೃತವಾಗಬೇಕಿದೆ. ಈ ವಾರ ಉತ್ತಮ ಪಡೆದಿದ್ದ ಚೈತ್ರಾ ಫಿನಾಲೆ ಹತ್ತಿರ ಬರುತ್ತಿದ್ದಂತೆ ಟಫ್ ಫೈಟ್ ಕೊಡುವ ಮುನ್ಸೂಚನೆಯನ್ನು ನೀಡಿದ್ದರು. ಆದರೆ, ಚೈತ್ರಾ ಅವರು ಈ ವಾರ ಎಲಿಮಿನೇಟ್ ಆಗಿದ್ದಾರೆ ಎಂದು ಹೇಳಲಾಗಿದ್ದು, ಈ ವಿಚಾರ ಹಲವರಲ್ಲಿ ಅಚ್ಚರಿಯನ್ನುಂಟು ಮಾಡಿದೆ.
ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್ಬಾಸ್ (BiggBoss), ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ.