ಪಾಕಿಸ್ತಾನದಲ್ಲಿ ಗಾಯನ ಮಾಡುತ್ತಿರುವ ಡೊನಾಲ್ಡ್​ ಟ್ರಂಪ್​! ವಿಡಿಯೋ ವೈರಲ್​ | Donald Trump

dk (5)
Published on

ಪಾಕಿಸ್ತಾನ: ಅಮೆರಿಕಾದ 47ನೇ ಅಧ್ಯಕ್ಷರಾಗುತ್ತಿರುವ ಡೊನಾಲ್ಡ್​ ಟ್ರಂಪ್( Donald Trump)​ ಪಾಕಿಸ್ತಾನದ ಬೀದಿಗಳಲ್ಲಿ ಗಾಯನ ಮಾಡುತ್ತಾ, ಖಿರ್​(ಪಾಕಿಸ್ತಾನಿ ಫುಡ್​) ಮಾರುತ್ತಿರುವ ವಿಡಿಯೋಂದು ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್​ ವೈರಲ್ ಆಗುತ್ತಿದೆ.

ಪಾಕಿಸ್ತಾನ ಸಲೀಂ ಬಗ್ಗಾ ಎಂಬ ವ್ಯಕ್ತಿಯ ಡೊನಾಲ್ಡ್​ ಟ್ರಂಪ್​ ಅವರನ್ನೇ ಹೊಲುತ್ತಿದ್ದು, ಇವರು ಗಾಯನ ಮಾಡಿ ಖಿರ್​ ಮಾರಾಟ ಮಾಡುತ್ತಿದ್ದಾರೆ. ಇವರನ್ನು ನೋಡಿದ ಅಲ್ಲಿನ ಜನರು ಮತ್ತು ವಿದೇಶಿಯರು ಸೆಲ್ಫಿಗೆ ಮುಗಿಬಿದ್ದಿದ್ದಾರೆ. ಅಲ್ಲದೆ, ಇವರೆ ನಮ್ಮದೇಶ ಟ್ರಂಪ್​ ಎಂದು ಜನರು ಹಾಸ್ಯ ಚಟಾಕಿ ಹಾರಿಸುತ್ತಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ. ಅಲ್ಲದೆ, ಖಿರ್​ ಮಾರಾಟ ಮಾಡಲು ಟ್ರಂಪ್​ ಅಮೆರಿಕಾ ಬಿಟ್ಟು ಇಲ್ಲಿಗೆ ಬಂದಿದ್ದಾರೆ ಎಂದು ವಿದೇಶಿ ಪ್ರಜೆಯೊಬ್ಬರು ಹಾಸ್ಯಭರಿತ ಹೇಳಿಕೆ ನೀಡಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಪಾಕಿಸ್ತಾನದ ಬೀದಿಯೊಂದರಲ್ಲಿ ಸಲೀಂ ಬಗ್ಗಾ ಪಂಜಾಬಿ ಹಾಡುಗಳನ್ನು ಗಾಯನ ಮಾಡುತ್ತಿದ್ದಾರೆ. ಮಕ್ಕಳು, ಹಿರಿಯರು, ಮಹಿಳೆಯರು ಸೇರಿದಂತೆ ಖಿರ್​ ತಿನ್ನಲು ಮತ್ತು ಸಲೀಂ ಅವರ ಜತೆ ಸೆಲ್ಫಿಗೆ ಮುಗಿ ಬೀಳುತ್ತಿದ್ದಾರೆ. ತಲೆ ತುಂಬಾ ಬಿಳಿ ಕೂದಲು ಇರುವ ಸಲೀಂ ಕಪ್ಪಿ ಜಾಕೆಟ್​ ಧರಿಸಿದ್ದಾರೆ. ಅವರ ಗಾಯನ ಕೇಳಲು ಹಿರಿಯರು ಧಾವಿಸುತ್ತಿರುವ ಕ್ಲಿಪ್​ಗಳು ವಿಡಿಯೋದಲ್ಲಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net