ಡೊನಾಲ್ಡ್ ಟ್ರಂಪ್​ ಮಗನ ಎಕ್ಸ್​ ಖಾತೆ ಹ್ಯಾಕ್​ ಮಾಡಿ ಅಪ್ಪ ನಿಧನರಾಗಿದ್ದಾರೆಂದು ಪೋಸ್ಟ್​!

Trump Tweet
Published on

ವಾಷಿಂಗ್ಟನ್​: ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಹಿರಿಯ ಪುತ್ರನ ಸಾಮಾಜಿಕ ಜಾಲತಾಣ ಎಕ್ಸ್​ ಖಾತೆಯನ್ನು ಹ್ಯಾಕ್​ ಮಾಡಿ, ಸರಣಿ ಟ್ವೀಟ್​ಗಳನ್ನು ಮಾಡಿದ್ದಾರೆ. ಈ ಪೈಕಿ ನನ್ನ ತಂದೆ ಮೃತಪಟ್ಟಿದ್ದಾರೆ ಎಂಬ ಪೋಸ್ಟ್​ ವೈರಲ್​ ಆಗಿದೆ.

ನನ್ನ ತಂದೆಯವರಾದ ಡೊನಾಲ್ಡ್​ ಟ್ರಂಪ್​ರವರು ಮೃತಪಟ್ಟಿದ್ದಾರೆ ಎಂಬ ವಿಚಾರವನ್ನು ತಿಳಿಸಲು ಅತ್ಯಂತ ದುಃಖಕರವಾಗಿದೆ. 2024ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ನಾನು ಸ್ಪರ್ಧಿಸುತ್ತೇನೆ ಎಂದು ಅವರ ಖಾತೆಯಿಂದ ಪೋಸ್ಟ್​ ಮಾಡಲಾಗಿದೆ.

trump tweet

ಇದರ ಜೊತೆಗೆ ಕೆಲವು ಅಸಹ್ಯಕರ ಟ್ವೀಟ್​ಗಳನ್ನು ಮಾಡಲಾಗಿದ್ದು, ಖಾತೆ ಹ್ಯಾಕ್​ ಆಗಿದೆ ಎಂಬ ವಿಚಾರ ಬೆಳಕಿಗೆ ಬಂದ ನಂತರ ಪೋಸ್ಟ್​ಗಳನ್ನು ಡಿಲೀಟ್​ ಮಾಡಲಾಗಿದೆ. ಇತ್ತ ಹ್ಯಾಕ್​ ಆಗಿರುವ ಸುದ್ದಿ ವೈರಲ್​ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣ ಎಕ್ಸ್​​ ಖಾತೆ ಭದ್ರತೆಯಲ್ಲಿನ ಲೋಪದೋಷವನ್ನು ಎತ್ತಿ ತೋರಿಸಿದೆ. ಈ ವಿಚಾರವಾಗಿ ಹಲವರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಕಣಕ್ಕಿಳಿಯಲು ಡೊನಾಲ್ಡ್ ಟ್ರಂಪ್‌ ತಯಾರಿ ನಡೆಸುತ್ತಿದ್ದಾರೆ. ಈ ನಡುವೆ ಅವರ ಮಗನ ಹ್ಯಾಕ್‌ ಆಗಿದ್ದ ಖಾತೆಯಿಂದ ಪೋಸ್ಟ್‌ ಆದ ಟ್ವೀಟ್‌ ಒಮ್ಮಲೇ ಎಲ್ಲರೂ ಬೆಚ್ಚಿ ಬೀಳುವಂತೆ ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net