More

    ಒಬಿಸಿ ಕೋಟಾ ಇಲ್ಲದೇ ಮಹಿಳಾ ಮೀಸಲಾತಿ ಮಸೂದೆ ಅಪೂರ್ಣ: ರಾಹುಲ್​ ಗಾಂಧಿ

    ನವದೆಹಲಿ: ಮಹಿಳಾ ಮೀಸಲಾತಿ ಮಸೂದೆಗೆ ಸಂಬಂಧಿಸಿದಂತೆ ಕಾಂಗ್ರೆಸ್​ ನಾಯಕ, ವಯನಾಡು ಕ್ಷೇತ್ರದ ಸಂಸದ ರಾಹುಲ್​ ಗಾಂಧಿ ಇತರೆ ಹಿಂದುಳಿದ ವರ್ಗಗಳಿಗೆ (OBC) ಪ್ರತ್ಯೇಕ ಕೋಟಾ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್​ ಝಾತಿ ಗಣತಿಯ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ.

    ಸರ್ಕಾರದಲ್ಲಿ 90 ಮಂದಿ ಕಾರ್ಯದರ್ಶಿಗಳು ಕೆಲಸ ಮಾಡುತ್ತಿದ್ದು, ಈ ಪೈಕಿ ಎಷ್ಟು ಒಬಿಸಿ ಇದ್ದಾರೆ ಎಂದು ನಾನು ಒಮ್ಮೆ ಕೇಳಿದೆ. ಉತ್ತರ ಕೇಳಿ ನಾನು ಒಮ್ಮೆ ಆಘಾತಕ್ಕೆ ಒಳಗಾದೆ. ಏಕೆಂದರೆ 90 ಮಂದಿ ಪೈಕಿ 3 ಜನರು ಮಾತ್ರ ಒಬಿಸಿ ಸಮುದಾಯದವರು ಎಂದು ತಿಳಿಯಿತು. ದೇಶಧ ಬಜೆಟ್​ನ ಶೇ. 05ರಷ್ಟು ಮಾತ್ರ ಇವರಿಗೆ ಮೀಸಲಿಡಲಾಗುತ್ತಿದೆ.

    ಇದನ್ನೂ ಓದಿ: ಏಕದಿನ ವಿಶ್ವಕಪ್​ 2023; ಟೀಂ ಇಂಡಿಯಾದ ನೂತನ ಜೆರ್ಸಿ ಅನಾವರಣ ಮಾಡಿದ ಬಿಸಿಸಿಐ-ಅಡಿಡಾಸ್​

    ಮಾತನಾಡುವ ವೇಳೆ ರಾಹುಲ್​ ಗಾಂಧಿ ಡರೋ ಮತ್​ (ಹೆದರಬೇಡಿ) ಎಂದು ಹೇಳಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್​ ಓಂ ಬಿರ್ಲಾ ಮಹಿಳಾ ಮೀಸಲಾತಿ ಮಸೂದೆ ಮೇಲೆ ಚರ್ಚೆ ನಡೆಯುತ್ತಿದೆ. ಈ ರೀತಿಯ ಪದಗಳನ್ನು ಬಳಸಬೇಡಿ ಎಂದು ಹೇಳಿದ್ದರು.

    ಈ ಚರ್ಚೆಯು ಮಹಿಳಾ ಮೀಸಲಾತಿ ಮಸೂದೆ ದೇಶದ ಮಹಿಳೆಯರ ಒಂದು ಗುಂಪಿಗೆ ಸಿಗುತ್ತಿದೆ. ಒಬಿಸಿ ವರ್ಗದವರು ಮತ್ತೊಂದು ವರ್ಗದ ಜನರ ಬಗ್ಗೆ ನಾನು ಮಾತನಾಡುತ್ತಿದ್ದೇನೆ. ಹೆಚ್ಚು ಸಂಖ್ಯೆಯಲ್ಲಿರುವ ಒಬಿಸಿ ಸಮುದಾಯಕ್ಕೆ ಬಜೆಟ್​ನಲ್ಲಿ ಶೇ.05ರಷ್ಟು ಮಾತ್ರ ಮೀಸಲಿಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಒಬಿಸಿ ಸಮುದಾಯಕ್ಕೆ ಇದು ಸರ್ಕಾರ ಮಾಡುತ್ತಿರುವ ಅವಮಾನ ಎಂದು ಕಿಡಿಕಾರಿದ್ದಾರೆ.

    ದೇಶದಲ್ಲಿ ಎಷ್ಟು ಮಂದಿ ದಲಿತರು, ಆದಿವಾಸಿ ಮತ್ತು ಒಬಿಸಿಗಳಿದ್ದಾರೆ ಎಂಬುದನ್ನು ನಾವು ಹೇಗೆ ತಿಳಿಯಬೇಕು. ಜಾತಿಗಣತಿ ಮಾಡಿದರೆ ಇದಕ್ಕೆ ಸ್ಪಷ್ಟ ಉತ್ತರ ಸಿಗಲಿದೆ. ಪ್ರತಿಪಕ್ಷಗಳು ಜಾತಿಗಣತಿಯ ವಿಚಾರ ಎತ್ತಿದ್ದ ಕೂಡಲೇ ಆಡಳಿತ ಪಕ್ಷದವರು ಗೊಂದಲವನ್ನು ಸೃಷ್ಟಿಸಿ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸುತ್ತಾರೆ. ಮಹಿಳಾ ಮೀಸಲಾತಿ ಮಸೂದೆಯಲ್ಲಿ ಒಬಿಸಿ ಕೋಟಾ ನೀಡದಿದ್ದರೆ ಕಾಯ್ದೆ ಅಪೂರ್ಣವಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts