

ಆಗ್ರಾ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾಷಣ ಮುಗಿಯುತ್ತಿದ್ದಂತೆ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿಯವರು ಜನರನ್ನು ಉದ್ದೇಶಿಸಿ ಮಾತನಾಡಿದರು. ಟ್ರಂಪ್ಗೆ ಕೃತಜ್ಞತೆ ಸಲ್ಲಿಸಿದರು.
ನಮಸ್ತೆ ಟ್ರಂಪ್ಗಾಗಿ ಕ್ರೀಡಾಂಗಣವನ್ನು ಒದಗಿಸಿಕೊಟ್ಟ ಗುಜರಾತ್ ಕ್ರಿಕೆಟ್ ಅಸೋಸಿಯೇಶನ್ಗೂ ಮೋದಿ ಧನ್ಯವಾದ ತಿಳಿಸಿದರು.
ಈ ದೇಶದ 130 ಕೋಟಿ ಜನರು ನವಭಾರತ ನಿರ್ಮಾಣ ಮಾಡಿದ್ದಾರೆ. ನಮ್ಮ ದೇಶದಲ್ಲಿ ಜಗತ್ತಿನಲ್ಲಿಯೇ ಅತಿದೊಡ್ಡ ಕ್ರಿಡಾಂಗಣ ಮಾತ್ರವಲ್ಲ, ಆರೋಗ್ಯ ವಿಮಾ ಯೋಜನೆ ಕೂಡ ಇದೆ ಎಂದು ಮೋದಿ ಹೇಳಿದರು.
ಅದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ದಂಪತಿ ಮೊಟೆರಾ ಸ್ಟೇಡಿಯಂನಿಂದ ಹೊರಟರು. ಅವರು ಉತ್ತರಪ್ರದೇಶದ ಆಗ್ರಾಕ್ಕೆ ವಿಮಾನದ ಮೂಲಕ ತೆರಳಲಿದ್ದು, ತಾಜ್ಮಹಲ್ಗೆ ಭೇಟಿ ನೀಡಲಿದ್ದಾರೆ.(ಏಜೆನ್ಸೀಸ್)